ಮಳೆಯ ಮಧ್ಯೆ ನಡುರಸ್ತೆಯಲ್ಲೇ ಹೊತ್ತಿ ಉರಿದ BMW car: ವೀಡಿಯೋ ವೈರಲ್
ಐಷಾರಾಮಿ BMW carರೊಂದು ನಡುರಸ್ತೆಯಲ್ಲಿಯೇ ಚಲಿಸುತ್ತಿದ್ದಾಗಲೇ ಬೆಂಕಿಗಾಹುತಿಯಾದ ಆಘಾತಕಾರಿ ಘಟನೆ ಚೆನ್ನೈನಲ್ಲಿ ನಡೆದಿದೆ.
ಚೆನ್ನೈ: ಐಷಾರಾಮಿ BMW carರೊಂದು ನಡುರಸ್ತೆಯಲ್ಲಿಯೇ ಚಲಿಸುತ್ತಿದ್ದಾಗಲೇ ಬೆಂಕಿಗಾಹುತಿಯಾದ ಆಘಾತಕಾರಿ ಘಟನೆ ಚೆನ್ನೈನಲ್ಲಿ ನಡೆದಿದೆ. BMW car ಎಂದರೆ ಬಹುತೇಕರ ಪಾಲಿಗೆ ಅದೊಂದು ಕನಸಷ್ಟೇ ಅಷ್ಟೊಂದು ದುಬಾರಿ ಬೆಲೆಯ ಈ ಕಾರು ವಾಹನ ಸಂದಣಿಯಿಂದ ಕೂಡಿದ್ದ ಚೆನ್ನೈನ ರಸ್ತೆಯೊಂದರಲ್ಲಿ ಇದ್ದಕ್ಕಿದ್ದಂತೆ ಬೆಂಕಿಗಾಹುತಿಯಾಗಿದೆ. ಇಂದು ಮುಂಜಾನೆ ವೇಳೆ ಈ ಘಟನೆ ನಡೆದಿದೆ. ಇದರಿಂದ ಘಟನೆ ನಡೆದ ರಸ್ತೆಯಲ್ಲಿ 30 ನಿಮಿಷಕ್ಕೂ ಹೆಚ್ಚು ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.
ಚೆನ್ನೈನ ಕ್ರೋಂಪೇಟ್ ಬಳಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕೂಡಲೇ ಅಲ್ಲಿದ್ದ ಟ್ರಾಫಿಕ್ ಪೊಲೀಸರು ಹಾಗೂ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಅಲ್ಲಿಗೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೆ ಕಾರು ಈ ವೇಳೆ ಬಹುತೇಕ ಸುಟ್ಟು ಹೋಗಿದೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದೆ. ಸುರಿಯುತ್ತಿರುವ ಮಳೆಯ ಮಧ್ಯೆಯೂ ಇಂದು ಮುಂಜಾನೆ ಜನ ತಮ್ಮ ತಮ್ಮ ಕೆಲಸಗಳಿಗಾಗಿ ಸಾಗುತ್ತಿದ್ದಾಗ ವಾಹನ ದಟ್ಟಣೆಯ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ಬಾಗಲಕೋಟೆ: ಮಕ್ಕಳ ಕಳ್ಳರೆಂಬ ಸಂಶಯ, ಇಬ್ಬರಿಗೆ ಥಳಿಸಿ ಕಾರಿಗೆ ಬೆಂಕಿ ಇಟ್ಟ ಗ್ರಾಮಸ್ಥರು
ಬೆಂಕಿಗಾಹುತಿಯಾದ ಈ ಕಾರು 37 ವರ್ಷದ ಅರುಣ್ ಬಾಲಾಜಿ (Arun Balaji) ಎಂಬುವವರಿಗೆ ಸೇರಿದ್ದಾಗಿದ್ದು, ಟ್ರಿಪ್ಲಿಕೇನ್‌ನಿಂದ ದಿಂಡಿವನಂಗೆ ತೆರಳುತ್ತಿದ್ದಾಗ ಕಾರಿನಲ್ಲಿ ಹೊಗೆ ಬರಲಾರಂಭಿಸಿದೆ. ಕ್ರೋಂರ್ಪೇಟ್ (Chrompet) ಬಸ್ ನಿಲ್ದಾಣದ ಬಳಿ ಬರುತ್ತಿದ್ದಂತೆ ಕಾರಿನ ಚಾಲಕ ಪಾರ್ಥಸಾರಥಿ ಅವರಿಗೆ ಕಾರಿನಲ್ಲಿ ಒಮ್ಮೆಗೆ ಹೊಗೆ ಬರುವುದು ಕಾಣಿಸಿದ್ದು ಅವರು ಕೂಡಲೇ ಕಾರನ್ನು ನಿಲ್ಲಿಸಿದ್ದಾರೆ.
ನಂತರ ಅವರು ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಕಾರು ಧಗಧಗನೇ ಉರಿಯಲಾರಂಭಿಸಿದೆ. ಘಟನೆಯನ್ನು ಆ ರಸ್ತೆಯಲ್ಲಿ ಸಾಗುತ್ತಿದ್ದವರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ನಂತರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದು, ಸಾಕಷ್ಟು ವೈರಲ್ ಆಗುತ್ತಿದೆ. ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರನ್ನು ಉಳಿಸುವುದಕ್ಕಾಗಿ ಬೆಂಕಿ ನಂದಿಸುವ ಎಲ್ಲಾ ಪ್ರಯತ್ನದ ನಂತರವೂ ಕಾರು ಬಹುತೇಕ ಸುಟ್ಟು ಹೋಗಿದೆ. ನಂತ ಅಗ್ನಿ ಶಾಮಕ ಸಿಬ್ಬಂದಿ ಕಾರನ್ನು ರಸ್ತೆಯಿಂದ ಪಕ್ಕಕ್ಕೆ ಸರಿಸಿ ಇಟ್ಟಿದ್ದಾರೆ.
ಹೊಸ ಕಿಯಾ ಸೆಲ್ಟೋಸ್‌ನಲ್ಲಿ ದೋಷ: ಬೇಸತ್ತು ವಾಹನಕ್ಕೆ ಬೆಂಕಿ ಇಟ್ಟ ಮಾಲೀಕರು