ಹೊಸ ಕಿಯಾ ಸೆಲ್ಟೋಸ್‌ನಲ್ಲಿ ದೋಷ: ಬೇಸತ್ತು ವಾಹನಕ್ಕೆ ಬೆಂಕಿ ಇಟ್ಟ ಮಾಲೀಕರು

ಕಿಯಾ ಸೆಲ್ಟೋಸ್‌ (Kia seltos)ಎಸ್‌ಯುವಿ (SUV) ಖರೀದಿಸಿದ ಮಾಲೀಕರೊಬ್ಬರು, ಅದರ ಕಳಪೆ ಕಾರ್ಯಕ್ಷಮತೆ ಹಾಗೂ ಸರ್ವಿಸ್‌ನಿಂದ ಅಕ್ರೋಶಗೊಂಡು ಕಾರಿಗೆ ಬೆಂಕಿ ಹಚ್ಚಿದ ಘಟನೆ ರಾಜಸ್ತಾನದ ಜೋದ್‌ಪುರದಲ್ಲಿ ನಡೆದಿದೆ. ಪೊಲೀಸರು ಕಾರಿನ ಮಾಲೀಕ ಮತ್ತು ಆತನ ಸ್ನೇಹಿತರನ್ನು ಬಂಧಿಸಿದ್ದಾರೆ.

Kia seltos owners sets his car on fire over repeated issues

ಕಿಯಾ ಸೆಲ್ಟೋಸ್ (Kia seltos) ಎಸ್ಯುವಿ (SUV) ಖರೀದಿಸಿದ ಮಾಲೀಕರೊಬ್ಬರು, ಅದರ ಕಳಪೆ ಕಾರ್ಯಕ್ಷಮತೆ ಹಾಗೂ ಸರ್ವಿಸ್‌ನಿಂದ ಅಕ್ರೋಶಗೊಂಡು, ಕಾರಿಗೆ ಬೆಂಕಿ ಹಚ್ಚಿದ ಘಟನೆ ರಾಜಸ್ಥಾನದ ಜೋದ್‌ಪುರದಲ್ಲಿ ನಡೆದಿದೆ. ಪೊಲೀಸರು ಕಾರಿನ ಮಾಲೀಕ ಮತ್ತು ಆತನ ಸ್ನೇಹಿತರನ್ನು ಬಂಧಿಸಿದ್ದಾರೆ. ಕಿಯಾ (Kia) ಕಾರು ಕಳೆದ ಎರಡು ವರ್ಷಗಳಿಂದ ನಿರಂತರ ಸಮಸ್ಯೆ ಎದುರಿಸುತ್ತಿತ್ತು. ಹಲವು ಬಾರಿ ದೂರು ನೀಡಿದರೂ ಶೋರೂಂ ಸಿಬ್ಬಂದಿ ಅದನ್ನು ಪರಿಹರಿಸಿಲ್ಲವೆಂದು ದೂರಿದ್ದಾರೆ ಕಾರಿನ ಮಾಲೀಕರು. ಈ ಘಟನೆ ನಡೆದಿರುವುದು ಕಾರು ಶೋರೂಂ ಒಳಗಡೆ. ಕಿಯಾ ಸರ್ವಿಸ್ ಸೆಂಟರ್‌ನ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಇವರನ್ನು ಬಂಧಿಸಿದ್ದಾರೆ.
ಕಾರನ್ನು ಸರ್ವಿಸ್ ಸೆಂಟರ್‌ಗೆ (service center) ತೆಗೆದುಕೊಂಡು ಹೋಗಿದ್ದ ಮಾಲೀಕರು, ಕಾರಿನಲ್ಲಿನ ಸಮಸ್ಯೆಗಳ ಕುರಿತು ವಿವರ ನೀಡಿದ್ದರು. ನಂತರ ಅಲ್ಲಿನ ಮ್ಯಾನೇಜರ್ ಬಳಿ ಕೂಡ ದೂರು ದಾಖಲಿಸಿದ್ದಾರೆ. ಆಗ ಮ್ಯಾನೇಜರ್ ಸರ್ವಿಸ್ ಸಿಬ್ಬಂದಿಯನ್ನು ಕರೆದಾಗ, ಕಾರಿನ ಮಾಲೀಕರು ಮತ್ತು ಸಿಬ್ಬಂದಿ ನಡುವ ವಾಗ್ವಾದ ಏರ್ಪಟ್ಟಿತ್ತು. 

ವಾಗ್ವಾದ ತಾರಕಕ್ಕೇರಿದಾಗ ವಾಹನ ಮಾಲೀಕರು ಪೆಟ್ರೋಲ್ ತಂದು ತಮ್ಮ ಕಿಯಾ ಸೆಲ್ಟೋಸ್ ಮೇಲೆ ಸುರಿದರು. ಈ ಸಮಯದಲ್ಲಿ ಕಾರು ಸರ್ವಿಸ್ ಸೆಂಟರ್‌ನ ಒಳಗೇ ನಿಂತಿತ್ತು. ಅಲ್ಲಿಯೇ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಕ್ಷಣಕಾಲದಲ್ಲಿ ಕಾರಿಗೆ ಬೆಂಕಿ ಹೊತ್ತಿ ಉರಿಯಿತು. ತಕ್ಷಣ ಓಡಿಬಂದ ಸಿಬ್ಬಂದಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾದರು. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾರು ಮಾಲೀಕರ ಈ ಕೃತ್ಯವನ್ನು ಕಂಪನಿ ಖಂಡಿಸಿದೆ. ಆದಾಗ್ಯೂ, ಕಾರಿನ ಮಾಲೀಕರು ಎದುರಿಸುತ್ತಿದ್ದ ನಿಜವಾದ ಸಮಸ್ಯೆಯೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಗಲಭೆ ನಡೆಸಿದ್ದಕ್ಕಾಗಿ ಕಾರಿನ ಮಾಲೀಕ ಸೇರಿ ಇಬ್ಬರನ್ನು ಬಂಧಿಸಲಾಗಿದೆ. ಆದರೆ, ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ನಂತರ ಪೊಲೀಸರು ಮತ್ತೊಂದು ಕೊಲೆ ಯತ್ನದ ದೂರಿನ ಆಧಾರದ ಮೇಲೆ ಆ ಇಬ್ಬರನ್ನು ಮತ್ತೊಮ್ಮೆ ಬಂಧಿಸಿದ್ದಾರೆ. ಬೆಂಕಿ ಅವಘಡದಲ್ಲಿ ಸರ್ವಿಸ್ ಸೆಂಟರ್‌ನ (Service Center) ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ. 

ಹೊಸ ದಾಖಲೆ ಬರೆದ ಕಿಯಾ ಸೆಲ್ಟೋಸ್, 3 ವರ್ಷದಲ್ಲಿ 3 ಲಕ್ಷ ಕಾರು ಮಾರಾಟ!

ಅನೇಕ ಹೊಸ ಕಿಯಾ ಮೋಟಾರ್ಸ್ (Kia Motors) ಗ್ರಾಹಕರು ತಮ್ಮ ವಾಹನಗಳಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ.  ಈ ಬೆಂಕಿ ಅವಘಡದ (Accident) ನಂತರ ಮತ್ತೊಂದು ಮಾಲೀಕರು ವಿತರಣಾ ದಿನದಂದೇ ಹೊಚ್ಚಹೊಸ ಸೆಲ್ಟೋಸ್ ಮೂರು ಬಾರಿ ಕೆಟ್ಟುಹೋದ ಬಗ್ಗೆ ದೂರು ನೀಡಿದರು. ಕಾರನ್ನು ಶೋರೂಂನಿಂದ ತರುತ್ತಿದ್ದಂತೆಯೇ ಅದು ಸ್ಟಾರ್ಟ್ ಆಗುತ್ತಿರಲಿಲ್ಲ. ನಂತರ ಮನೆಗೆ ಬಂದ  ಸೇಲ್ಸ್ ಮನ್ ಹಾಗೂ ಶಾಖಾ ವ್ಯವಸ್ಥಾಪಕರು, ಟ್ಯಾಂಕಿನಲ್ಲಿ ಪೆಟ್ರೋಲ್ ಇಲ್ಲ. ಆದ್ದರಿಂದ ಕಾರು ಸ್ಟಾರ್ಟ್ ಆಗುತ್ತಿಲ್ಲ ಎಂದು ಸಮಜಾಯಿಸಿ ನೀಡಿದ್ದರು. ಆದರೆ, ಇಂಧನ ಭರ್ತಿ ಮಾಡಿದ ನಂತರವೂ ಕಾರು ಸ್ಟಾರ್ಟ್ ಆಗುತ್ತಿರಲಿಲ್ಲ. 

ನಂತರ, ಅದನ್ನು ಪರಿಶೀಲನೆಗೆ ಕೊಂಡೊಯ್ದ ಸರ್ವಿಸ್ ತಂತ್ರಜ್ಞರು ಟ್ಯಾಂಕಿನಲ್ಲಿ ಇಂಧನ ಮಟ್ಟವನ್ನು ಅಳೆಯುವ ಇಂಧನ ಫ್ಲೋಟರ್ ಅನ್ನು ಸಹ ತೆಗೆದುಹಾಕಿದರು. ಬ್ಯಾಟರಿಯನ್ನು ಬದಲಾಯಿಸಿದರು. ಆದರೆ ಹೊಚ್ಚ ಹೊಸ ಸೆಲ್ಟೋಸ್ ಸಹ ಸ್ಟಾರ್ಟ್ ಆಗಲೇ ಇಲ್ಲ. ಇದರಿಂದ ರೋಸಿ ಹೋದ ಮಾಲೀಕರು ಹಲವು ಬಾರಿ ದೂರುಗಳನ್ನು ದಾಖಲಿಸಿದ್ದಾರೆ. ಆ ಕಾರು ಇನ್ನೂ ಸರ್ವಿಸ್ ಸೆಂಟರ್‌ನನಲ್ಲಿಯೇ ಇದೆ. ಆಟೊಮೊಬೈಲ್ (Automobile) ವಲಯದಲ್ಲಿ ಕೆಟ್ಟ ಉತ್ಪನ್ನಗಳ ಮಾರಾಟ ತಡೆಯಲು ಸೂಕ್ತವಾದ ಕಾನೂನು ಇಲ್ಲ. ಮಾಲೀಕರು ತಮ್ಮ ವಾಹನದ ಕುರಿತು ಗ್ರಾಹಕರ ನ್ಯಾಯಾಲಯದ (Court) ಮೊರೆ ಹೋದರು, ದೋಷವಿರುವ ಕಾರನ್ನು ಬದಲಾಯಿಸಿ ಹೊಸದನ್ನು ನೀಡುವ ಯಾವುದೇ ಕಾನೂನು ಜಾರಿಯಾಗಿಲ್ಲ. ಪ್ರಗತಿಶೀಲ ರಾಷ್ಟ್ರಗಳಲ್ಲಿ (Developed Nation) ಈ ಸಂಬಂಧ ಪರಿಣಾಮಕಾರಿ ಕಾನೂನುಗಳಿವೆ. 

ಕಿಯಾ ಇಂಡಿಯಾ ಮಾರಾಟ ಶೇ.18ರಷ್ಟು ಹೆಚ್ಚಳ: ಸೋನೆಟ್ ಬೇಡಿಕೆ ಏರಿಕೆ

Latest Videos
Follow Us:
Download App:
  • android
  • ios