ಬೆಂಗಳೂರು(ಫೆ.22):  ಲಕ್ಸುರಿ  MPV ಕಾರಿಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆಯಾಗಿರುವ ಕಿಯಾ ಕಾರ್ನಿವಲ್ ಕಾರು ಗ್ರೇಟರ್ ನೋಯ್ಡಾದಲ್ಲಿ ನಡೆದ ಆಟೋ ಎಕ್ಸ್ಪೋದಲ್ಲಿ ಬಿಡುಗಡೆಯಾಗಿದೆ. ಈಗಾಗಲೇ 3500ಕ್ಕೂ ಹೆಚ್ಚು ಕಾರುಗಳು ಬುಕ್ ಆಗಿವೆ. ಇದೀಗ ಬೆಂಗಳೂರಿನ ಶೋ ರೂಂ ಒಂದರಲ್ಲಿ ಒಂದೇ ದಿನ ದಾಖಲೆಯ ಕಾರು ಮಾರಾಟವಾಗಿದೆ.

ಇದನ್ನೂ ಓದಿ: ಇನೋವಾ ಕಾರಿಗೆ ಪ್ರತಿಸ್ಪರ್ಧಿ; ಕಿಯಾ ಕಾರ್ನಿವಲ್ ಲಾಂಚ್!

ನಗರದ ಮೈಸೂರು ರಸ್ತೆಯಲ್ಲಿರುವ M/S PPS ಕಿಯಾ ಶೋ ರೂಂನಲ್ಲಿ ಒಂದೇ ದಿನ 10 ಕಿಯಾ ಕಾರ್ನಿವಲ್ ಕಾರು ಮಾರಾಟವಾಗಿದೆ. ಫೆಬ್ರವರಿ 5 ರಂದು ಬಿಡುಗಡೆಯಾದ ಕಿಯಾ ಕಾರ್ನಿವಲ್ ಕಾರಿನ ಬೆಲೆ 24.95 ಲಕ್ಷ ರೂಪಾಯಿಯಿಂದ(ಎಕ್ಸ್ ಶೋ ರೂಂ) ಆರಂಭವಾಗಲಿದೆ. ಟಾಪ್ ಮಾಡೆಲ್ ಬೆಲೆ 33.95 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

 

ಇದನ್ನೂ ಓದಿ: ಕಿಯಾ ಸೊನೆಟ್ ಕಾರು ಅನಾವರಣ; ಮಾರುತಿ ಬ್ರೆಜಾ, ನೆಕ್ಸಾನ್‌ಗೆ ಪೈಪೋಟಿ!

ಕಿಯಾ ಕಾರಿಗೆ ಗ್ರಾಹಕರು ನೀಡುತ್ತಿರುವ ಪ್ರತಿಕ್ರಿಯೆ ಹಾಗೂ ಸ್ಪಂದನೆಗೆ ಕಿಯಾ ಮೋಟಾರ್ಸ್ ಮಾರ್ಕೆಟಿಂಗ್ ಸೇಲ್ಸ್ ಮುಖ್ಯಸ್ಥ ಹಾಗೂ ಭಾರತದ ಕಿಯಾ ಮೋಟಾರ್ಸ್ ಉಪಾಧ್ಯಕ್ಷ ಮನೋಹರ್ ಭಟ್ ಸಂತಸ ವ್ಯಕ್ತಪಡಿಸಿದ್ದಾರೆ.