ಚದುರಂಗದಾಟದಲ್ಲಿ ಆನಂದ್ ಮಹೀಂದ್ರಾ ಮರ್ಯಾದೆ ಉಳಿಸಿದ ಗುಕೇಶ್, ಆಡಿದ್ದೆಲ್ಲಿ?
ಯುವ ಚೆಸ್ ಪಟು ಗುಕೇಶ್ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯಲ್ಲಿ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಅವರ ಜತೆಗೆ ಕಳೆದ ಸಂದರ್ಭವನ್ನು ನೆನಪಿಸಿಕೊಂಡಿರುವ ಆನಂದ್ ಮಹೀಂದ್ರಾ ತಮ್ಮನ್ನು ಮುಜುಗರದಿಂದ ಕಾಪಾಡಿದ್ದುದನ್ನು ಬಹಿರಂಗಪಡಿಸಿದ್ದಾರೆ.
ಭಾರತದ 17ರ ಹರೆಯದ ಡಿ. ಗುಕೇಶ್ ವಿಶ್ವ ಚೆಸ್ ಇತಿಹಾಸದಲ್ಲಿ ಮೈಲುಗಲ್ಲು ಸ್ಥಾಪಿಸಿರುವುದು ದೇಶದ ಎಲ್ಲೆಡೆ ಸಂಭ್ರಮಕ್ಕೆ ಕಾರಣವಾಗಿದೆ. ಕೆನಡಾದ ಟೊರಾಂಟೋದಲ್ಲಿ ನಡೆದ ಪ್ರತಿಷ್ಠಿತ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿರುವ ಡಿ.ಗುಕೇಶ್, ವಿಶ್ವನಾಥನ್ ಆನಂದ್ ನಂತರ ಈ ಚೆಸ್ ಟೂರ್ನಿ ಜಯಿಸಿದ 2ನೇ ಭಾರತೀಯ ಆಟಗಾರ ಎಂಬ ಗೌರವಕ್ಕೂ ಭಾಜನರಾಗಿದ್ದಾರೆ. ಈ ಸುದ್ದಿ ಹರಿದಾಡುತ್ತಿರುವಂತೆಯೇ, ಉದ್ಯಮಿ ಆನಂದ್ ಮಹೀಂದ್ರಾ ತಮ್ಮ ಎಕ್ಸ್ ಖಾತೆಯಲ್ಲಿ ಯುವ ಪ್ರೊಡಿಜಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಭಾರತದ ಚೆಸ್ ಪ್ರತಿಭೆಯನ್ನು ಹಾಡಿಹೊಗಳಿದ್ದಾರೆ, ಅಷ್ಟೇ ಅಲ್ಲ, ಕೆಲ ಸಮಯದ ಹಿಂದೆ ಡಿ.ಗುಕೇಶ್ ಜತೆಗೆ ಮುಖಾಮುಖಿಯಾಗಿದ್ದ ಸನ್ನಿವೇಶವನ್ನು ನೆನಪಿಸಿಕೊಂಡು, ತಮಾಷೆಯಾಗಿ ಅದನ್ನು ವಿವರಿಸಿದ್ದಾರೆ. ಗುಕೇಶ್ ಸಾಧನೆಯನ್ನು ಮನಸಾರೆ ಹೊಗಳಿರುವ ಆನಂದ್ ಮಹೀಂದ್ರಾ, ಅವರ ಭವಿಷ್ಯ ಇನ್ನಷ್ಟು ಭವ್ಯವಾಗಲಿ ಎಂದೂ ಹಾರೈಸಿದ್ದಾರೆ. ಈ ಪೋಸ್ಟ್ ನಲ್ಲಿ ಅವರು ದುಬೈನಲ್ಲಿ ನಡೆದ ಸಮಾರಂಭವೊಂದರ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.
ಟೆಕ್ ಮಹೀಂದ್ರಾ (Tech Mahindra) ಕಂಪನಿ ಗ್ಲೋಬಲ್ ಚೆಸ್ ಲೀಗ್ (Global Chess League) ಉದ್ಘಾಟನಾ (Launch) ಸಮಾರಂಭದಲ್ಲಿ ಆನಂದ್ ಮಹೀಂದ್ರಾ ಅವರು ಗುಕೇಶ್ ಅವರನ್ನು ಭೇಟಿಯಾಗಿದ್ದರು. ಆಗಷ್ಟೇ ಗುಕೇಶ್ 17ನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದರು ಎಂದೂ ಅವರು ಸ್ಮರಿಸಿದ್ದಾರೆ. ಜತೆಗೆ, ಗುಕೇಶ್ ಜತೆಗಿರುವ ಭಾವಚಿತ್ರವನ್ನು ಶೇರ್ (Share) ಮಾಡಿದ್ದಾರೆ. ಈ ಫೋಟೊವನ್ನು ತಾವು ತಮ್ಮ ಆಲ್ಬಮ್ ನಲ್ಲಿ ವಿಶೇಷ ಸ್ಥಾನ ನೀಡಿರುವುದಾಗಿ ಹೇಳಿಕೊಂಡಿದ್ದಾರೆ.
ಅಜ್ಜಿ ಬಬಿತಾ ಕಪೂರ್ ಹುಟ್ಟುಹಬ್ಬಕ್ಕೆ ಕರೀನಾ ಮಗ ತೈಮೂರ್ ಗಿಫ್ಟ್ ಇದು!
ಮುಜುಗರದಿಂದ ಕಾಪಾಡಿದ್ದ ಗುಕೇಶ್!
“ಕಳೆದ ವರ್ಷ ದುಬೈನಲ್ಲಿ ನಡೆದ ಟೆಕ್ ಮಹೀಂದ್ರಾ ಜಿಸಿಎಲ್ ಲೈವ್ ಉದ್ಘಾಟನಾ ಸಮಾರಂಭದ ವೇಳೆ ಕ್ಯಾಮರಾಕ್ಕಾಗಿ ಗುಕೇಶ್ ಅವರೊಂದಿಗೆ ಚೆಸ್ ಆಡಿದ್ದೆ. ಅಂದು ನಡೆದ ಸುದ್ದಿಗೋಷ್ಟಿಯ ಸಂದರ್ಭದಲ್ಲಿ ಗುಕೇಶ್ ತಮ್ಮ ಮರ್ಯಾದೆಯನ್ನು ಕಾಪಾಡಿ, ಮುಜುಗರ (Embarrassment) ಉಂಟಾಗದಂತೆ ನೋಡಿಕೊಂಡಿದ್ದರು’ ಎಂದು ಹೇಳಿದ್ದಾರೆ. ಕೆಲವು ಚೆಸ್ ಚಲನೆಯ (Moves) ಬಳಿಕ, ಗುಕೇಶ್ ತಮ್ಮ ಮೇಲೆ ಕೃಪೆ ಮಾಡಿ, “ಆಟ ಡ್ರಾ (Draw) ಆಯಿತು’ ಎಂದು ಹೇಳಿ ತಮ್ಮನ್ನು ಮುಜುಗರ ಉಂಟಾಗದಂತೆ ರಕ್ಷಿಸಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ಸ್ಟಾರ್ (Star) ಆಗಿರ್ತಾರೆ
“ಈ ಯುವ ಚೆಸ್ ಆಟಗಾರ ಗುಕೇಶ್ ತಾಂತ್ರಿಕ ಕೌಶಲ್ಯದೊಂದಿಗೆ ಶಾಂತ (Cool) ಮನೋಭಾವ, ಪ್ರಬುದ್ಧತೆ (Maturity) ಹಾಗೂ ಸೌಮ್ಯ ಗುಣವನ್ನೂ ಹೊಂದಿದ್ದಾರೆ’ ಎಂದು ಆನಂದ್ ಮಹೀಂದ್ರಾ ಮೆಚ್ಚಿಕೊಂಡಿದ್ದಾರೆ. ಜತೆಗೆ, ಗುಕೇಶ್ ಅವರನ್ನು “ನ್ಯೂ ಐಸ್ ಮ್ಯಾನ್ (New Ice Man)’ ಎಂದೂ ಹೊಗಳಿದ್ದಾರೆ. “ಗುಕೇಶ್ ಮುಂದೆ ಅತ್ಯುನ್ನತ ಸ್ಥಾನಕ್ಕೆ ಏರುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಒಂದಂತೂ ಸ್ಪಷ್ಟ, ಅವರು ಹಲವಾರು ವರ್ಷಗಳ ಕಾಲ ಸ್ಟಾರ್ ಆಗಿರುತ್ತಾರೆ, ಹೊಸ ತಲೆಮಾರಿನ ಯುವ ಪ್ರತಿಭೆಗಳಿಗೆ ಸ್ಫೂರ್ತಿ (Inspiration) ಆಗುತ್ತಾರೆ, ಚೆಸ್ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಪ್ರೇರಣೆಯಾಗುತ್ತಾರೆ’ ಎಂದು ಹಾಡಿ ಹೊಗಳಿದ್ದಾರೆ.
ಲ್ಯಾವೆಂಡರ್ ಸೀರೆಯುಟ್ಟು ಗಂಡನ ಜೊತೆ ಮುದ್ದಾದ ಫೋಟೋವನ್ನು ಶೇರ್ ಮಾಡಿದ ನಯನತಾರಾ
ಹಲವು ಕಾಮೆಂಟ್ (Comments)
ಆನಂದ್ ಮಹೀಂದ್ರಾ ಅವರ ಈ ಪೋಸ್ಟ್ ಗೆ ಸಾಕಷ್ಟು ಕಾಮೆಂಟ್ಸ್ ಬಂದಿದ್ದು, ಹಲವರು ಆನಂದ್ ಅವರ ವಿಚಾರಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಗುಕೇಶ್ ಹಲವಾರು ವರ್ಷಗಳ ಕಾಲ ಸ್ಟಾರ್ ಆಗಿರುತ್ತಾರೆ, ಹೊಸ ತಲೆಮಾರಿಗೆ ಪ್ರೇರಣೆಯಾಗುತ್ತಾರೆ ಎಂದು ಪುನರುಚ್ಚರಿಸಿದ್ದಾರೆ. ಅನೇಕರು ಗುಕೇಶ್ ಪ್ರತಿಭೆ ನಿಜಕ್ಕೂ ಸ್ಫೂರ್ತಿದಾಯಕ, ಇನ್ನಷ್ಟು ಜಯ ಅವರಿಗೆ ದೊರೆಯಲಿ ಎಂದು ಹೇಳಿದ್ದಾರೆ. ಒಬ್ಬರು, “ಮತ್ತೊಮ್ಮೆ ಸೌಹಾರ್ದ ಮ್ಯಾಚ್ ಆಡುವಂತಾಗಲಿ’ ಎಂದೂ ಆಶಿಸಿದ್ದಾರೆ. ಒಬ್ಬರು, “ಗುಕೇಶ್ ಖಂಡಿತವಾಗಿ ಮುಂದೆ ಟಾಪ್ (Top) ಸ್ಥಾನ ಅಲಂಕರಿಸುತ್ತಾರೆ’ ಎಂದು ಹೇಳಿದ್ದಾರೆ.