ಮುಂಬೈ(ಮೇ.03): ಭಾರತದಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ತಯಾರಕ ಕಂಪನಿ ಬಜಾಜ್ ತನ್ನ ನೌಕರರಿಗೆ ಸಿಹಿ ಸುದ್ದಿ ನೀಡಿದೆ. ಲಾಕ್‌ಡೌನ್ ವೇಳೆ ಕಂಪನಿ ಒಂದೇ ಒಂದು ವಾಹನ ಮಾರಾಟ ಮಾಡಲು ಸಾಧ್ಯವಾಗಿಲ್ಲ. ಆದರೆ ಇತರ ಕಂಪನಿಗಳ ರೀತಿ ನೌಕರರ ವೇತನ ಕಡಿತಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮೂಲಕಷ್ಟದ ಸಮಯಲ್ಲಿ ಕಂಪನಿ ಸಂಪೂರ್ಣ ವೇತನ ನೀಡೋ ಮೂಲಕ ನೌಕರರಿಗೆ ನೆರವಾಗಿದೆ. 

ಯುರೋಪ್‌ನಲ್ಲಿ ಮಹೀಂದ್ರ ಮಾಲೀಕತ್ವದ ಜಾವಾ ಮೋಟಾರ್‌ಸೈಕಲ್ ಬಿಡುಗಡೆಗೆ ತಯಾರಿ!...

ಪ್ರಧಾನಿ ಮೋದಿ ಲಾಕ್‌ಡೌನ್ ಘೋಷಣೆ ಮಾಡಿದ ಬೆನ್ನಲ್ಲೇ ಬಜಾಜ್ ಕಂಪನಿ ನೌಕರರ ಶೇಕಡಾ 10 ರಷ್ಟು ಸ್ಯಾಲರಿ ಕಡಿತ ಮಾಡುವ ಪ್ರಸ್ತಾಪವಿಟ್ಟಿತ್ತು. ಆದರೆ ಕಂಪನಿ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ಈ ಪ್ರಸ್ತಾವನೆ ತಳ್ಳಿ ಹಾಕಿ, ನೌಕರರಿಗೆ ಸಂಪೂರ್ಣ ಸ್ಯಾಲರಿ ನೀಡಲು ಸೂಚಿಸಿದ್ದಾರೆ. ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಸಮಯದಲ್ಲಿ ನಾವು ಪರಿಸ್ಥಿತಿಯನ್ನು ಮನಸ್ಸಿನಿಂದ ನೋಡುವ ಬದಲು ಹೃದಯದಿಂದ ನೋಡಬೇಕಿದೆ ಎಂದು ರಾಜೀವ್ ಬಜಾಜ್ ಹೇಳಿದ್ದಾರೆ.

ಲಾಕ್‌ಡೌನ್ ಬಳಿಕ ಬಿಡುಗಡೆಯಾಗಲಿದೆ ಯಮಹಾ WR 155R ಆಫ್ ರೋಡ್ ಬೈಕ್!

ಇದು ಅಂಕಿ ಅಂಶ ನೋಡುವ ಸಮಯವಲ್ಲ. ಹೀಗಾಗಿ ಎಲ್ಲಾ ನೌಕರರಿಗೆ ಸಂಪೂರ್ಣ ಸ್ಯಾಲರಿ ನೀಡಲಿದ್ದೇವೆ ಎಂದು ರಾಜೀವ್ ಬಜಾಜ್ ಹೇಳಿದ್ದಾರೆ. ಎಪ್ರಿಲ್ ತಿಂಗಳಲ್ಲಿ ಬಜಾಜ್ ಸೇರಿದಂತೆ ಎಲ್ಲಾ ಆಟೋಮೊಬೈಲ್ ಕಂಪನಿಗಳು ಒಂದೇ ಒಂದು ವಾಹನ ಮಾರಾಟ ಮಾಡಿಲ್ಲ. ಕಂಪನಿಗಳು ನಷ್ಟಕ್ಕೆ ಸಿಲುಕಿದೆ. ಕೊರೋನಾ ವೈರಸ್ ತೊಲಗಿದ ಬಳಿಕ ನೌಕರರ ಸಹಾಯದಿಂದ ಕಂಪನಿ ಮತ್ತೆ ಅಗ್ರಸ್ಥಾನಕ್ಕೆ ಬರಲಿದೆ ಎಂದಿದ್ದಾರೆ.