ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಬಜಾಜ್ ಡೀಲರ್‌ಶಿಪ್, ಸರ್ವೀಸ್ ಸೆಂಟರ್ ಆರಂಭ!
ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಭಾರತದಲ್ಲಿ ಆಟೋಮೊಬೈಲ್ ಚಟುವಟಿಕೆ ಚುರುಕುಗೊಂಡಿದೆ. ಇದೀಗ ಬಜಾಜ್ ಆಟೋ ಕಾರ್ಯರಂಭಗೊಂಡಿದೆ. ಡೀಲರ್‌ಶಿಪ್ ಹಾಗೂ ಸರ್ವೀಸ್ ಸೆಂಟರ್ ಮತ್ತೆ ಆರಂಭಗೊಂಡಿದ್ದು, ಗ್ರಾಹಕರು ಸೇವೆ ಪಡೆದುಕೊಳ್ಳಬಹದು.
ಬೆಂಗಳೂರು(ಮೇ.11): ದೇಶದ ಪ್ರಮುಖ ಆಟೋಮೋಬೈಲ್ ಕಂಪನಿಯಾಗಿರುವ ಬಜಾಜ್ ಆಟೋ ಮೇ 4, 2020 ರಿಂದ ದೇಶದ ವಿವಿಧೆಡೆಯಲ್ಲಿ ತನ್ನ ಡೀಲರ್‌ಶಿಪ್ ಮತ್ತು ಸರ್ವೀಸ್ ಸೆಂಟರ್ ಕಾರ್ಯವನ್ನು ಪುನರಾರಂಭಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ಮಾರ್ಗಸೂಚಿಗಳನ್ವಯ ಈ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗಿದ್ದು, ಇದಕ್ಕೆ ಪೂರಕವಾಗಿ ಸ್ಥಳೀಯ ಆಡಳಿತಗಳ ಅನುಮತಿ ಪಡೆಯಲಾಗಿದೆ. ಗ್ರಾಹಕರು ಮತ್ತು ಡೀಲರ್ ಸಿಬ್ಬಂದಿಯ ಸುರಕ್ಷತೆಯ ಎಲ್ಲಾ ಶಿಷ್ಠಾಚಾರಗಳನ್ನು ಎಲ್ಲಾ ಟಚ್ ಪಾಯಿಂಟ್‍ಗಳಲ್ಲಿ ಕಡ್ಡಾಯವಾಗಿ ಪಾಲಿಸಲಾಗುತ್ತಿದೆ ಎಂದು ಬಜಾಜ್ ಹೇಳಿದೆ.
ನೌಕರರಿಗೆ ಸಂಪೂರ್ಣ ವೇತನ, ಯಾವುದೇ ಕಡಿತವಿಲ್ಲ ಎಂದ ಬಜಾಜ್!
ವ್ಯವಹಾರಗಳನ್ನು ಆರಂಭಿಸುವ ಮುನ್ನ ಎಲ್ಲಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಗ್ರಾಹಕರು ಬಂದು ಹೋಗುವ ಡೀಲರ್‌ಶಿಪ್‌ಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಶಿಷ್ಠಾಚಾರವನ್ನು ಪಾಲಿಸಲಾಗುತ್ತಿದೆ. ಕೇಂದ್ರಗಳ ಪ್ರವೇಶ ದ್ವಾರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಅನ್ನು ಕಡ್ಡಾಯಗೊಳಿಸಲಾಗಿದ್ದು, ಡೀಲರ್‌ಶಿಪ್ ಮತ್ತು ಸರ್ವೀಸ್ ಸ್ಥಳಗಳಲ್ಲಿ ಸಿಬ್ಬಂದಿಯ ಆರೋಗ್ಯ ರಕ್ಷಣೆಗೆ ಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬಜಾಜ್ ಪ್ರಕಟಣೆಯಲ್ಲಿ ತಿಳಿಸಿದೆ.
ಲಾಕ್‌ಡೌನ್ ಬಳಿಕ ಬಿಡುಗಡೆಯಾಗಲಿದೆ ಬಜಾಜ್-KTM ಎಲೆಕ್ಟ್ರಿಕ್ ಮೊಪೆಡ್!
ಈ ಬಗ್ಗೆ ಮಾತನಾಡಿದ ಬಜಾಜ್ ಆಟೋ ಲಿಮಿಟೆಡ್‍ನ ಕಾರ್ಯಕಾರಿ ನಿರ್ದೇಶಕ ರಾಕೇಶ್ ಶರ್ಮಾ, ``ಕೋವಿಡ್-19 ಸಾಂಕ್ರಾಮಿಕದ ನಂತರ ಭಾರತ ಸಹಜ ಸ್ಥಿತಿಗೆ ಮರಳುತ್ತಿದೆ ಮತ್ತು ಬಜಾಜ್ ಆಟೋದಲ್ಲಿ ನಾವೂ ಸಹ ಸಹಜ ಸ್ಥಿತಿಗೆ ಮರಳುತ್ತಿದ್ದೇವೆ. ವರ್ಕ್‍ಶಾಪ್‍ಗಳು ಮತ್ತು ಡೀಲರ್‌ಶಿಪ್‌ಗಳನ್ನು ಆರಂಭಿಸಿದ್ದೇವೆ. ಅತ್ಯಂತ ಕಡಿಮೆ ಸಂಪರ್ಕದೊಂದಿಗೆ ಸುರಕ್ಷಿತ, ವೇಗ ಮತ್ತು ಸಮರ್ಥವಾಗಿ ಕಾರ್ಯ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹೊಸ ಕಾರ್ಯಾಚರಣೆ ಪ್ರಕ್ರಿಯೆಯಡಿ ಮಾರಾಟ ಮತ್ತು ಸೇವೆಗಳನ್ನು ಆರಂಭಿಸಿದೆ’’ ಎಂದರು.
``ನಾವು ಈ ಹಿಂದೆ ಫ್ರೀ ಸರ್ವೀಸ್‍ಗಳು ಮತ್ತು ವಾರಂಟಿಗಳನ್ನು ನಮ್ಮ ಗ್ರಾಹಕರಿಗೆ ವಿಸ್ತರಣೆ ಮಾಡಿದ್ದೆವು. ನಮ್ಮ ಹಾಲಿ ಇರುವ ಎಲ್ಲಾ ಗ್ರಾಹಕರ ವಾಹನಗಳ ಸರ್ವೀಸ್ ಅಗತ್ಯತೆಗಳನ್ನು ತ್ವರಿತವಾಗಿ ಪೂರೈಸುವ ನಿಟ್ಟಿನಲ್ಲಿ ನಾವು ವರ್ಕ್‍ಶಾಪ್‍ಗಳನ್ನು ಆದ್ಯತೆ ಮೇಲೆ ಆರಂಭಿಸಿದ್ದೇವೆ. ನಮ್ಮ ಇಂಜಿನಿಯರ್‌ಗಳು ಮತ್ತು ವರ್ಕ್‍ಶಾಪ್‍ಗಳು ಎಷ್ಟು ಸಾಧ್ಯವೋ ಅಷ್ಟು ತ್ವರಿತವಾಗಿ ಗ್ರಾಹಕರಿಗೆ ತಡೆ ರಹಿತವಾಗಿ ಸರ್ವೀಸ್ ಅಗತ್ಯತೆಗಳನ್ನು ಪೂರೈಸಲು ಸಜ್ಜಾಗಿದ್ದಾರೆ’’ ಎಂದು ಅವರು ತಿಳಿಸಿದರು.