ನವದಹೆಲಿ(ಮೇ.26): ಹೊಂಡಾ ಶೀಘ್ರದಲ್ಲೇ ಆಕ್ಟೀವಾ 5G ಲಿಮಿಟೆಡ್ ಎಡಿಶನ್ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ಹಲವು ವಿಶೇಷತೆಗಳನ್ನೊಳಗೊಂಡ ಈ ಸ್ಕೂಟರ್ ಹೊಸ ಸಂಚಲನ ಸೃಷ್ಟಿಸಲಿದೆ. ಭಾರತದಲ್ಲಿ ಆಕ್ಟೀವಾ ಸ್ಕೂಟರ್ ಜನರ ಮೊದಲ ಆಯ್ಕೆಯಾಗಿದೆ. ಭಾರಿ ಯಶಸ್ಸಿನಲ್ಲಿರುವ ಹೊಂಡಾ ಆಕ್ಟೀವಾ ಇದೀಗ 5ಜಿ ಲಿಮಿಟೆಡ್ ಎಡಿಶನ್ ಮೂಲಕ ಮತ್ತೆ ಮಾರಾಟದಲ್ಲಿ ದಾಖಲೆ ಬರೆಯಲು ಸಜ್ಜಾಗಿದೆ.

ಇದನ್ನೂ ಓದಿ: ಹೀರೋ ಸ್ಪ್ಲೆಂಡರ್‌ಗೆ 25ನೇ ವರ್ಷದ ಸಂಭ್ರಮ- ಸ್ಪೆಷಲ್ ಎಡಿಶನ್ ಬೈಕ್ ಬಿಡುಗಡೆ!

ಹೊಂಡಾ ಆಕ್ಟೀವಾ 5G ಲಿಮಿಟೆಡ್ ಎಡಿಶನ್ ಸ್ಕೂಟರ್ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. STD ಹಾಗೂ DLX ವೇರಿಯೆಂಟ್ ಲಭ್ಯವಿದೆ. ಲಿಮಿಟೆಡ್ ಎಡಿಶನ್ STD ಸ್ಕೂಟರ್ ಬೆಲೆ 55,032 ಇನ್ನೂ  DLX ವೇರಿಯೆಂಟ್ ಬೆಲೆ 56,897 ರೂಪಾಯಿ(ಎಕ್ಸ್ ಶೋ ರೂಂ ದೆಹಲಿ).

ಇದನ್ನೂ ಓದಿ: ಗೆಲುವಿನ ಬೆನ್ನಲ್ಲೇ ಮೋದಿ ಹೊಸ ಯೋಜನೆ-2025 ರಿಂದ ಸಿಗಲ್ಲ ಪೆಟ್ರೋಲ್ ದ್ವಿಚಕ್ರವಾಹನ!

ಡ್ಯುಯೆಲ್ ಟೋನ್ ಕಲರ್‌ಗಳಲ್ಲಿ ಸ್ಪೆಷಲ್ ಎಡಿಶನ್ ಸ್ಕೂಟರ್ ಲಭ್ಯವಿದೆ. ಆಧುನಿಕ ತಂತ್ರಜ್ಞಾನ, ಬ್ರೇಕ್ ಸಿಸ್ಟಮ್ ಅಪ್‌ಗ್ರೇಡ್ ಆಗಲಿದೆ. ಆದರೆ ಎಂಜಿನ್‌ನಲ್ಲಿ ಹೆಚ್ಚಿನ ಬದಲಾವಣೆ ಸಾಧ್ಯತೆ ಕಡಿಮೆ. ಸದ್ಯ ಆಕ್ಟೀವಾ ಸ್ಕೂಟರ್‌ಗಳಲ್ಲಿರುವ 109.1cc ಎಂಜಿನ್ ಹೊಂದಿದ್ದು,  8hp ಪವರ್ ಹಾಗೂ 9Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.