Asianet Suvarna News Asianet Suvarna News

ಮಯಾಂಕ್ ಅಗರ್ವಾಲ್ ಬಳಿ ಕ್ಷಮೆ ಯಾಚಿಸಿದ ಆಸಿಸ್ ಕಮೆಂಟೇಟರ್!

ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ ಮಯಾಂಕ್ ಅಗರ್ವಾಲ್‌ಗೆ ಅವಮಾನ ಮಾಡಿದ್ದ ಆಸ್ಟ್ರೇಲಿಯಾ ವೀಕ್ಷಕ ವಿವರಣೆಗಾರ ಇದೀಗ ಕ್ಷಮೆ ಯಾಚಿಸಿದ್ದಾರೆ.

Australian Cricket Commentator apologies canteen staff comment to Mayank agarwal
Author
Bengaluru, First Published Dec 27, 2018, 8:14 PM IST

ಮೆಲ್ಬರ್ನ್(ಡಿ.27): ಆಸ್ಟ್ರೇಲಿಯಾ ವಿರುದ್ದದ ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪಾದರ್ಪಣೆ ಮಾಡಿದ ಕನ್ನಡಿಗ ಮಯಾಂಕ್ ಅಗರ್ವಾಲ್, ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಬ್ಯಾಟಿಂಗ್ ವೇಳೆ ಮಯಾಂಕ್ ಅವಮಾನ ಮಾಡಿದ ಆಸ್ಟ್ರೇಲಿಯಾ ವೀಕ್ಷಕ ವಿವರಣೆಗಾರ ಕೆರಿ ಓ ಕೀಫೆ ಕ್ಷಮೆ ಯಾಚಿಸಿದ್ದಾರೆ.

ಇದನ್ನೂ ಓದಿ: ಮಯಾಂಕ್ ಹಾಗೂ ರಣಜಿ ಕ್ರಿಕೆಟ್ ಅವಮಾನಿಸಿದ ಆಸಿಸ್ ಕಮೆಂಟೇಟರ್!

ಮಯಾಂಕ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ವೀಕ್ಷಕ ವಿವರಣೆ ನೀಡುತ್ತಿದ್ದ ಕೆರಿ ಓ ಕೀಫೆ, ರಣಜಿ ಕ್ರಿಕೆಟ್‌ನಲ್ಲಿ ಸಿಡಿಸಿದ ತ್ರಿಶತಕ ಕುರಿತು ಅವಮಾನ ಮಾಡಿದ್ದರು. ಮಯಾಂಕ್, ರೈಲ್ವೇಸ್ ಕ್ಯಾಂಟೀನ್ ಸಿಬ್ಬಂಧಿ ವಿರುದ್ಧ ತ್ರಿಶತಕ ಸಿಡಿಸಿದ್ದಾರೆ ಎಂದು ಕಮಂಟ್ರಿ ಹೇಳಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು. ಇದೀಗ ಕೆರಿ ಕ್ಷಮೆಯಾಚಿಸಿದ್ದಾರೆ.

ಇದನ್ನೂ ಓದಿ: ಮಯಾಂಕ್ ಅವಮಾನಿಸಿದ ಕಮಂಟೇಟರ್‌ಗೆ ಟ್ವಿಟರಿಗರ ಮಂಗಳಾರತಿ!

ವೀಕ್ಷಕ ವಿವರಣೆ ವೇಳೆ ಆಡಿದ ಮಾತಿಗೆ ಕ್ಷಮೆ ಯಾಚಿಸುತ್ತಿದ್ದೇನೆ. ಯಾರನ್ನೂ ಅಥಾವ ಯಾವುದೇ ಕ್ರಿಕೆಟ್ ಗುಣಮಟ್ಟವನ್ನ ಅವಮಾನಿಸೋ ಉದ್ದೇಶ ಇರಲಿಲ್ಲ ಎಂದು ಕೆರಿ ಓ ಕೀಫೆ ಹೇಳಿದ್ದಾರೆ.
 

Follow Us:
Download App:
  • android
  • ios