ಮುಂಬೈ(ಜ.13): ಮಹೀಂದ್ರ ಮುಖ್ಯಸ್ಥ ಸ್ಥಾನಕ್ಕೆ ಆನಂದ್ ಮಹೀಂದ್ರ ವಿದಾಯ ಹೇಳುತ್ತಿದ್ದಾರೆ. ಆದರೆ ಆನಂದ್ ಮಹೀಂದ್ರ ಸಾಮಾಜಿಕ ಜಾಲತಾಣದಲ್ಲಿ ಎಂದಿನಂತೆ ಸಕ್ರಿಯರಾಗಿರುತ್ತಾರೆ. ಇದೀಗ ಆನಂದ್ ಮಹೀಂದ್ರ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ತೈವಾನ್ ದೇಶದ ಅಧ್ಯಕ್ಷರ ಚುನಾವಣಾ ಪ್ರಚಾರ.

ಇದನ್ನೂ ಓದಿ: ಸ್ಕೂಟರ್‌ನಲ್ಲಿ ತಾಯಿ ಸುತ್ತಾಡಿಸಿದ ಮೈಸೂರಿಗನಿಗೆ ಆನಂದ್ ಮಹೀಂದ್ರ ಭರ್ಜರಿ ಗಿಫ್ಟ್!

ಈ ವಿಡಿಯೋದಲ್ಲಿ ಏನಿದೆ ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ. ತೈವಾನ್ ಅಧ್ಯಕ್ಷರ ಚುನಾವಣಾ ಪ್ರಚಾರದಲ್ಲಿ ಮಹೀಂದ್ರ ಸ್ಕಾರ್ಪಿಯೋ ಪಿಕ್ ಅಪ್ ಬಳಸಲಾಗಿದೆ. ತೈವಾನ್ ಚುನಾವಣಾ ಪ್ರಚಾರದಲ್ಲೂ ಮಹೀಂದ್ರ ವಾಹನ ಬಳಿಸಿರುವುದು ಆನಂದ್ ಮಹೀಂದ್ರ ಸಂತಸವನ್ನು ಡಬಲ್ ಮಾಡಿದೆ.

ಇದನ್ನೂ ಓದಿ: ಅಪರೂಪದ ಫೋಟೋಗೆ ಕ್ಯಾಪ್ಶನ್‌ ಸ್ಪರ್ಧೆ; ಉತ್ತರಕ್ಕೆ ಸುಸ್ತಾದ ಮಹೀಂದ್ರ!.

ಭಾರತದ ಹೆಮ್ಮೆ. ತೈವಾನ್ ಮಣ್ಣಿನಲ್ಲಿ ಭಾರತದ ವಾಹನ ಚುನಾವಣಾ ಪ್ರಚಾರದಲ್ಲಿ ಮಿಂಚುತ್ತಿದೆ ಎಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ. 

 

ಮಹೀಂದ್ರ ಪಿಕ್ ಅಪ್ ಅತ್ಯಂತ ಬಲಿಷ್ಠ ವಾಹನ. 2,609 cc, 4 ಸಿಲಿಂಡರ್ ಸಿಲಿಂಡರ್, ಡೈರೆಕ್ಟ್ ಇಂಜೆಕ್ಷನ್ ಡೀಸೆಲ್ ಎಂಜಿನ್ ಹೊಂದಿದೆ. ಇಂಧನ ಸಾಮರ್ಥ್ಯ 80 ಲೀಟರ್, 2D or 4WD ಕಾನ್‌ಫಿಗರೇಶನ್ ಹೊಂದಿದೆ.