ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಖರೀದಿಸಿದ ಭಾರತದ ಮೊದಲ ಮಹಿಳೆ!
ಮಹಿಳಾ ದಿನಾಚರಣೆ ವಿಶೇಷಕ್ಕೆ ಮಹಿಳಾ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ ಮಹಿಳಾ ಮಾಲಕಿಯನ್ನ ಪರಿಚಯಿಸುತ್ತೇವೆ. ಇಂಟರ್‌ಸೆಪ್ಟರ್ 650 ಬೈಕ್‌ನ ಮೊದಲ ಒನರ್ ಯಾರು? ಇಲ್ಲಿದೆ ವಿವರ.
ಬೆಂಗಳೂರು(ಮಾ.08): ಕಳೆದ ವರ್ಷ ರಾಯಲ್ ಎನ್‌ಫೀಲ್ಡ್ ಟ್ವಿನ್ ಎಂಜಿನ್ ಬೈಕ್ ಬಿಡುಗಡೆ ಮಾಡಿದೆ. ಕಾಂಟಿನೆಂಟಲ್ ಹಾಗೂ ಇಂಟರ್‌ಸೆಪ್ಟರ್ 650 ಬೈಕ್ ಬಿಡುಗಡೆ ಮಾಡಿದೆ. ಬೆಂಗಳೂರು ಮೂಲದ ಮಹಿಳೆ ನೂತನ ಬೈಕ್ ಖರೀದಿಸಿದ್ದಾರೆ. ಈ ಮೂಲಕ ಇಂಟರ್‌ಸೆಪ್ಟರ್ ಬೈಕ್ ಖರೀದಿಸಿದ ಮೊದಲ ಮಹಿಳೆ ಅನ್ನೋ ಹೆಗ್ಗಳಿಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ಮಹಿಳಾ ದಿನಾಚರಣೆ: ಮಾರುತಿ, ರೆನಾಲ್ಟ್‌ನಿಂದ ಬಂಪರ್ ಕೊಡುಗೆ!
ವೈಟ್‌ಫೀಲ್ಡ್ ಮೋಟಾರ್ಸ್ ಬೆಂಗಳೂರಿನಲ್ಲಿ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ ಬೈಕ್ ಖರೀದಿಸಿದ್ದಾರೆ. ಇದನ್ನು ಹೊರತು ಪಡಿಸಿದರೆ ಇನ್ಯಾವ ರಾಯಲ್ ಎನ್‌ಫೀಲ್ಡ್ ಶೋ ರೂಂಗಳಲ್ಲಿ ಮಹಿಳೆ ಹೆಸರಿನಲ್ಲಿ ಬೈಕ್ ಬುಕ್ ಆಗಿಲ್ಲ. ಹೀಗಾಗಿ ಬೆಂಗಳೂರಿನ ಮಹಿಳೆ ಮೊದಲ ಮಹಿಳಾ ಮಾಲಕಿ ಅನ್ನೋ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: ರೋಲ್ಸ್ ರಾಯ್ಸ್ ದುಬಾರಿ ಕಾರು ಖರೀದಿಸಿದ ಭಾರತದ ಮೊದಲ ಮಹಿಳೆ!
ವೈಟ್‌ಫೀಲ್ಡ್ ಮೋಟಾರ್ಸ್ ಮಹಿಳಾ ಗ್ರಾಹಕರಿಗೆ ಶೋ ರೂಂನಲ್ಲಿ ಕೇಕ್ ಕತ್ತರಿಸಿ ಬೈಕ್ ವಿತರಿಸಿದ್ದಾರೆ. ಇಂಟರ್‌ಸೆಪ್ಟರ್ 649cc, ಏರ್ ಕೂಲ್‌ಡ್, ಪಾರ್ಲೆಲ್ ಟ್ವಿನ್ ಸಿಲಿಂಡರ್ ಎಂಜಿನ್, 47 Bhp ಪವರ್ ಹಾಗೂ 52 Nm ಪೀಕ್ ಟಾರ್ಕ್ ಉತ್ಪಾದಿಸೋ ಸಾಮರ್ಥ್ಯ ಹೊಂದಿದೆ.