ನವದೆಹಲಿ(ಮಾ.08): ವಿಶ್ವದೆಲ್ಲಡೆ ಮಹಿಳಾ ದಿನಾಚರಣೆ ಸಂಭ್ರಮ. ಇದೀಗ ಭಾರತದ ಆಟೋಮೊಬೈಲ್ ಕ್ಷೇತ್ರ ಕೂಡ ಮಹಿಳಾ ದಿನಾಚರಣೆಯನ್ನ ವಿಶಿಷ್ಠ ರೀತಿಯಲ್ಲಿ ಆಚರಿಸುತ್ತಿದೆ ಮಹಿಳಾ ದಿನಾಚರಣೆ ಅಂಗವಾಗಿ ಮಾರುತಿ ಸುಜುಕಿ ಹಾಗೂ ರೆನಾಲ್ಟ್ ಕಂಪನಿ ಭರ್ಜರಿ ಆಫರ್ ಘೋಷಿಸಿದೆ. ಮಾರ್ಚ್. 8 ರಿಂದ 31ರ ವರೆಗೆ ಕಾರು ಬುಕ್ ಮಾಡೋ ಮಹಿಳಾ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡಿದೆ. 

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್‌ಗೆ ಪೈಪೋಟಿ -ಬರುತ್ತಿದೆ ಬಜಾಜ್ KTM ಬೈಕ್!

ಮಹಿಳಾ ದಿನಾಚರಣೆ ಕೊಡುಗೆಯಲ್ಲಿ ಬುಕ್ ಮಾಡೋ ಗ್ರಾಹಕರಿಗೆ ಕಾಂಪ್ಲಿಮೆಂಟರ್ ಸರ್ವೀಸ್ ವೋಚರ್, ಸರ್ವೀಸ್‌ನಲ್ಲಿ ಲೇಬರ್ ಚಾರ್ಜ್ ಕಡಿತ, ಬಿಡಿ ಭಾಗಗಳಿಗೆ ರಿಯಾಯಿತಿ ದರ. ಕಾಂಪ್ಲಿಮೆಂಟರಿ ಡ್ರೈವಾಶ್, ಉಚಿತ ಪಿಕ್ ಮತ್ತು ಡ್ರಾಪ್ ಸೇರಿದಂತೆ ಹಲವು ಕೊಡುಗೆಗಳನ್ನು ಮಾರುತಿ ಸುಜುಕಿ ನೀಡಿದೆ.

ಇದನ್ನೂ ಓದಿ: ವೋಕ್ಸ್‌ವ್ಯಾಗನ್ ಇಂಡಿಯಾಗೆ 500 ಕೋಟಿ ದಂಡ!

ರೆನಾಲ್ಟ್ ಕಂಪನಿ ಕೊಡುಗೆಯನ್ನು ಮಾರ್ಚ್ 6 ರಿಂದ 11 ವರೆಗೆ ನೀಡಿದೆ. ಮಹಿಳಾ ದಿನಾಚರಣೆ ಕೊಡುಗೆಯಲ್ಲಿ ಬುಕ್ ಮಾಡೋ ಗ್ರಾಹಕರಿಗೆ ಬಿಡಿಭಾಗಗಳಿಗೆ 10% ರಿಯಾಯಿತಿ, ಲೇಬರ್ ಚಾರ್ಜ್, ಇತರ ಸರ್ವೀಸ್‌ಗಳಲ್ಲಿ 10% ಡಿಸ್ಕೌಂಟ್, ವಾರೆಂಟಿಯಲ್ಲಿ 10% ರಿಯಾಯಿತಿ, ಇದರ ಜೊತೆಗೆ ವಿಮೆ ಇತರ ಸೌಲಭ್ಯಗಳು ರಿಯಾಯಿತಿ ದರದಲ್ಲಿ ನೀಡುತ್ತಿದೆ. ಮಾರುತಿ ಹಾಗೂ ರೆನಾಲ್ಟ್ ಆಯಾ ಶೋ ರೂಂಗಳು ಕೆಲ ರಿಯಾಯಿತಿ ನೀಡಲು ಮುಂದಾಗಿದೆ. ಗ್ರಾಹಕರು ಆಯಾ ಶೋ ರೂಂಗಳಲ್ಲಿ  ವಿಚಾರಿಸಿ ಕಾರು ಬುಕ್ ಮಾಡಿಕೊಳ್ಳಬಹುದು.