Asianet Suvarna News Asianet Suvarna News

ಮಾ.31ರೊಳಗೆ ತೆರಿಗೆ, ಟ್ರಾಫಿಕ್ ದಂಡ ಪಾವತಿಸಿದರೆ ಭರ್ಜರಿ ಡಿಸ್ಕೌಂಟ್!

ಮಾರ್ಚ್ ತಿಂಗಳ ಬಂದರೆ ತೆರಿಗೆ ಪಾವತಿ ಸೇರಿದಂತೆ ಹಲವು ತಲೆನೋವು ಹಾಗೂ ಕೈಯಿಂದ ಹಣ ಜಾರೋ ಕೆಲಸಗಳು ಸುತ್ತಿಕೊಂಡು ಬಿಡುತ್ತವೆ. ಇದೀಗ ನೂತನ ನಿಯಮವೊಂದು ಜಾರಿಗೆ ಬಂದಿದೆ. ಮಾರ್ಚ್ 31ರೊಳಗೆ ಬಾಕಿ ಉಳಿಸಿಕೊಂಡಿರುವ ತೆರಿಗೆ ಹಾಗೂ ಟ್ರಾಫಿಕ್ ದಂಡ ಪಾವತಿಸಿದರೆ ಭರ್ಜರಿ ಡಿಸ್ಕೌಂಟ್ ಸಿಗಲಿದೆ.

West Bengal offerd waiver on penalty of tax and traffic fine
Author
Bengaluru, First Published Feb 29, 2020, 9:16 PM IST

ಕೋಲ್ಕತಾ(ಫೆ.29): ತೆರಿಗೆ ಪಾವತಿ ಹಾಗೂ ಬಾಕಿ ಉಳಿಸಿಕೊಂಡಿರುವ ಟ್ರಾಫಿಕ್ ದಂಡ ಪಾವತಿ ವಸೂಲಿಗೆ ಸರ್ಕಾರ ಹೊಸ ಯೋಜನೆ ಜಾರಿಗೆ ತಂದಿದೆ. ಇದರ ಪ್ರಕಾರ ಮಾರ್ಚ್ 31 ರೊಳಗೆ ತೆರಿಗೆ ಪಾವತಿ ಹಾಗೂ ಟ್ರಾಫಿಕ್ ದಂಡ ಪಾವತಿಸಿದರೆ, ಪೆನಾಲ್ಟಿ ದರ ಶೇಕಡಾ 100 ರಷ್ಟು ಉಳಿತಾಯ ಮಾಡಬುಹುದು. 

ಇದನ್ನೂ ಓದಿ: ಫ್ಲೈಓವರ್ ಹೈ-ವೇಯಲ್ಲಿ ಹೊಸ ಸ್ಪೀಡ್ ಲಿಮಿಟ್, ಮಿತಿ ಹೆಚ್ಚಾದರೆ ದುಬಾರಿ ದಂಡ!

ಈ ನಿಯಮ ಜಾರಿಯಾಗಿರುವು ಪಶ್ಚಿಮ ಬಂಗಾಳದಲ್ಲಿ. ನೂತನ ನಿಯಮದ ಪ್ರಕರಾ ತೆರಿಗೆ ಬಾಕಿ ಉಳಿಸಿಕೊಂಡಿರುವರು ಮಾರ್ಚ್ 31ರೊಳಗೆ ಪಾವತಿಸಿದರೆ, ಬಾಕಿ ಉಳಿಸಿಕೊಂಡಿರುವುದಕ್ಕೆ ಹಾಕಲಾದ ಬಡ್ಡಿ, ಪೆನಾಲ್ಟಿ ಸಂಪೂರ್ಣವಾಗಿ ಉಚಿತವಾಗಲಿದೆ. 

ಇದನ್ನೂ ಓದಿ: ವಿಶ್ವದ ಅತೀ ದೊಡ್ಡ ಜಿನೆವಾ ಮೋಟಾರು ಶೋ ಕ್ಯಾನ್ಸಲ್!...
 

ಇನ್ನು ಟ್ರಾಫಿಕ್ ದಂಡ ಪಾವತಿ ಉಳಿಸಿಕೊಂಡಿರುವವರು ಮಾರ್ಚ್ 31 ರೊಳಗೆ ಪಾವತಿಸಿದರೆ ಶೇಕಡಾ 50 ರಷ್ಟು ಡಿಸ್ಕೌಂಟ್ ಸಿಗಲಿದೆ. ಮಾರ್ಚ್ 29ಕ್ಕೆ ಅಂತ್ಯವಾಗಲಿದ್ದ ಈ ಆಫರ್‌ನ್ನು ಇದೀಗ ಪಶ್ಚಿಮ ಬಂಗಾಳ ಸರ್ಕಾರ ಮಾರ್ಚ್ 31ರ ವರೆಗೆ ವಿಸ್ತರಿಸಿದೆ. 

64 ಕೋಟಿ ರೂಪಾಯಿ ಹಣ ಆಫರ್ ನಿಂದ ಮನ್ನ ಆಗಲಿದೆ. ಆದರೆ ಆಫರ್ ಮೂಲಕ ಬರೋಬ್ಬರಿ 800 ಕೋಟಿ ರೂಪಾಯಿ ಸಂಗ್ರಹಕ್ಕೆ ಪಶ್ಚಿಮ ಬಂಗಾಳ ಸರ್ಕಾರ ಮುಂದಾಗಿದೆ. 

Follow Us:
Download App:
  • android
  • ios