ಶೋ ರೂಮ್ ಮುಂದೆಯೇ ಓಲಾ ಇಲೆಕ್ಟ್ರಿಕ್ ಸ್ಕೂಟರ್‌ಗೆ ಅಂತ್ಯ ಸಂಸ್ಕಾರ ಮಾಡಿದ ಯುವಕ
ಓಲಾ ಇಲೆಕ್ಟ್ರಿಕ್ ಸ್ಕೂಟರ್‌ನ ಕಳಪೆ ಸಾಮರ್ಥ್ಯ ಹಾಗೂ ಸೇಲ್ ಆದ ನಂತರ ಶೋ ರೂಮ್‌ನವರ ಸೇಲ್ಸ್ ಸರ್ವೀಸ್ ಬಗ್ಗೆ ಅತೃಪ್ತಗೊಂಡಿದ್ದ ಯುವಕನೋರ್ವ ಓಲಾ ಶೋರೂಮ್ ಮುಂದೆಯೇ ಸ್ಕೂಟರ್‌ಗೆ ಅಂತ್ಯಸಂಸ್ಕಾರ ಮಾಡಿ ಶೋಕ ಗೀತೆ ಹಾಡಿದಂತಹ ವಿಚಿತ್ರ ಘಟನೆ ನಡೆದಿದೆ.
ಮುಂಬೈ: ಓಲಾ ಇಲೆಕ್ಟ್ರಿಕ್ ಸ್ಕೂಟರ್‌ನ ಕಳಪೆ ಸಾಮರ್ಥ್ಯ ಹಾಗೂ ಸೇಲ್ ಆದ ನಂತರ ಶೋ ರೂಮ್‌ನವರ ಸೇಲ್ಸ್ ಸರ್ವೀಸ್ ಬಗ್ಗೆ ಅತೃಪ್ತಗೊಂಡಿದ್ದ ಯುವಕನೋರ್ವ ಓಲಾ ಶೋರೂಮ್ ಮುಂದೆಯೇ ಸ್ಕೂಟರ್‌ಗೆ ಅಂತ್ಯಸಂಸ್ಕಾರ ಮಾಡಿ ಶೋಕ ಗೀತೆ ಹಾಡಿದಂತಹ ವಿಚಿತ್ರ ಘಟನೆ ನಡೆದಿದೆ. ಆದರೆ ಈ ಘಟನೆ ಯಾವ ಪ್ರದೇಶದ ಶೋ ರೂಮ್ ಮುಂದೆ ನಡೆದಿದೆ ಎಂಬ ಖಚಿತತೆ ಇಲ್ಲ. ಶೋ ರೂಮ್ ಮುಂದೆಯೇ ತನ್ನ ಓಲಾ ಸ್ಕೂಟರ್‌ಗೆ ಅಂತ್ಯಸಂಸ್ಕಾರ ಮಾಡುವುದಕ್ಕಾಗಿ ಯುವಕನೋರ್ವ ತಳ್ಳುಗಾಡಿಯೊಂದರ ಮೇಲೆ ಸ್ಕೂಟರ್ ಅನ್ನು ನಿಲ್ಲಿಸಿ ಅದನ್ನು ಶೋ ರೂಮ್ ಮುಂದೆ ತೆಗೆದುಕೊಂಡು ಬಂದಿದ್ದಾನೆ. ಅಲ್ಲದೇ ಈ ಓಲಾ ಇಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ದರಿಂದ ಆದ ಸಂಕಷ್ಟವನ್ನು ಹೇಳಿಕೊಂಡಿದ್ದಾನೆ.
ಓಲಾ ಸ್ಕೂಟರ್ ಖರೀದಿಸಿದ ನಂತರ ದಿನಾ ಸ್ಕೂಟರ್‌ನಲ್ಲಿ ಒಂದಲ್ಲ ಒಂದು ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಆದರೆ ಶೋ ರೂಮ್ ಸಿಬ್ಬಂದಿ ಮಾತ್ರ ಸ್ಕೂಟರ್ ಸೇಲ್ ಆದ ನಂತರ ಸರಿಯಾಗಿ ಸರ್ವೀಸ್ ನೀಡಿಲ್ಲ, ಸ್ಕೂಟರ್ ಶೋ ರೂಮ್‌ನವರ ಈ ನಿರ್ಲಕ್ಷ್ಯದಿಂದ ಬೇಸರಗೊಂಡ ಯುವಕ ಶೋ ರೂಮ್‌ನವರಿಗೆ ಬುದ್ಧಿ ಕಲಿಸಲು ಶೋ ರೂಮ್ ಮುಂದೆಯೇ ಸ್ಕೂಟರ್‌ಗೆ ಅಂತಿಮ ಕ್ರಿಯೆ ಮಾಡಲು ಬಂದಿದ್ದಾನೆ. ಟ್ರಾಲಿಯಲ್ಲಿ ಕೆಂಪು ಬಣ್ಣದ ಸ್ಕೂಟರ್ ಅನ್ನು ನಿಲ್ಲಿಸಿ ಶೋ ರೂಮ್ ಮುಂದೆ ಜೋರಾಗಿ ಸಿನಿಮಾವೊಂದರಲ್ಲಿರುವ ಶೋಕ ಗೀತೆ ಹಾಡು ಹಾಡಲು ಶುರು ಮಾಡಿದ್ದಾನೆ.
ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಮದುವೆ ದಿಬ್ಬಣ ಬಂದ ಬೆಂಗಳೂರಿನ ವರ, ವೀಡಿಯೋ ವೈರಲ್
ಈ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸಾಕಷ್ಟು ವೈರಲ್ ಆಗಿದ್ದು, ಈತನ ಹಾಡು ಕೇಳಿ ಅಲ್ಲಿ ಸುತ್ತ ಮುತ್ತಲೂ ಇದ್ದ ಜನರೆಲ್ಲಾ ಅಲ್ಲಿಗೆ ಬಂದು ಸೇರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಕೆಲವರು ಈತನ ಹಾಡನ್ನು ನಗುತ್ತಾ ಎಂಜಾಯ್ ಮಾಡುತ್ತಿರುವುದನ್ನು ಕೂಡ ವಿಡಿಯೋದಲ್ಲಿ ಕಾಣಬಹುದಾಗಿದೆ. ಹೀಗೆ ಓಲಾ ಇಲೆಕ್ಟ್ರಿಕ್ ಸ್ಕೂಟರ್‌ಗೆ ಅಂತ್ಯಸಂಸ್ಕಾರ ಮಾಡಲು ಮುಂದಾದ ವ್ಯಕ್ತಿಯನ್ನು ಸಾಗರ್ ಸಿಂಗ್ ಎಂದು ಗುರುತಿಸಲಾಗಿದೆ. ಇವರು ಇದೇ ಶೋ ರೂಮ್‌ನಿಂದ ಸ್ಕೂಟರ್ ಖರೀದಿಸಿದ್ದರು ಎಂದು ತಿಳಿದು ಬಂದಿದೆ.
ಸಲ್ಮಾನ್ ಖಾನ್ ನಟನೆಯ ಹಮ್ ದಿಲ್ ದೆ ಚುಕೆ ಸನಂ ಚಿತ್ರದ ವಿಷಾದ ಗೀತೆಯನ್ನು ಈ ಸಂದರ್ಭಕ್ಕೆ ತಕ್ಕಂತೆ ಬದಲಾಯಿಸಿಕೊಂಡು ಈತ ಹಾಡಿದ್ದಾನೆ. 'ತಡಪ್ ತಡಪ್ ಕೆ ಇಸ್ ದಿಲ್ ಸೆ ಆಹ್ ನಿಕಾಲ್ತಿ ರಹಿ, ಮುಜ್ಕೊ ಸಜಾ ದಿ ಒಲಾ ನೇ ಐಸಾ ಕ್ಯೂ ಗುನ್ನಾ ಕಿಯಾ ಜೊ ಲುಟ್ ಗಯೇ ಹಾ ಲುಟ್ ಗಯೇ ಜೊ ಲುಟ್ ಗಯೇ ಹಮ್ ಒಲಾ ಲೇಕರ್ ಕೆ' ಎಂದು ಆತ ಹಾಡಿದ್ದು ಕೇಳಿ ಅಲ್ಲಿದ್ದ ಅನೇಕರು ನಗಲು ಶುರು ಮಾಡಿದ್ದಾರೆ. ಅಲ್ಲದೇ ಅಲ್ಲಿ ಸಾಕಷ್ಟು ಜನ ಸೇರಿದ್ದು, ಈ ಹಾಡನ್ನು ಕೇಳಲು ಶುರು ಮಾಡಿದ್ದಾರೆ.
ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದ ಓಲಾ ಎಲೆಕ್ಟ್ರಿಕ್ ಸ್ಕೂಟರ್, ಕೇವಲ 69,999ರೂಗೆ ಇವಿ!
ಇಲೆಕ್ಟ್ರಿಕ್ ಸ್ಕೂಟರ್‌ಗಳ ಸಮಸ್ಯೆ ಇದು ಮೊದಲೇನಲ್ಲ, ಆಗಾಗ ಈ ಸ್ಕೂಟರ್‌ಗಳು ಬೆಂಕಿಗಾಹುತಿಯಾಗಿವೆ. ಅಲ್ಲದೇ ಕೆಲವು ಪ್ರಕರಣಗಳಲ್ಲಿ ಈ ಇಲೆಕ್ಟ್ರಿಕ್ ಸ್ಕೂಟರ್‌ಗಳ ಬ್ಯಾಟರಿ ಸ್ಫೋಟಗೊಂಡಂತಹ ಘಟನೆಗಳು ನಡೆದಿವೆ. ಇದರಿಂದ ಕೆಲವು ಮೃತಪಟ್ಟ ಮತ್ತೆ ಕೆಲವರು ಗಾಯಗೊಂಡ ಘಟನೆಗಳು ನಡೆದಿವೆ. ಭಾರತದಲ್ಲಿ ಈ ಇಲೆಕ್ಟ್ರಿಕ್ ಸ್ಕೂಟರ್‌ಗಳ ಬಗ್ಗೆ ಮಿಶ್ರ ಪ್ರತಿಕ್ರಿಯೆ ಇದೆ. ಕೆಲವು ಗ್ರಾಹಕರು ಈ ಸ್ಕೂಟರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ ಮತ್ತೆ ಕೆಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಕೂಟರ್‌ಗೆ ಅಂತ್ಯಸಂಸ್ಕಾರ ಮಾಡಿದ ವೀಡಿಯೋ