ಟ್ರಾಫಿಕ್ ಸಿಟಿ, ಐಟಿಬಿಟಿ ನಗರ ಎಂದೆಲ್ಲಾ ಕರೆಸಿಕೊಳ್ಳೋ ಬೆಂಗಳೂರಿನಲ್ಲಿ ಎಲ್ಲರೂ ಅಚ್ಚರಿಪಡುವಂಥಾ ಕೆಲವು ಘಟನೆಗಳು ಆಗಿಂದಾಗೆ ನಡೀತಾನೇ ಇರುತ್ತವೆ. ಇತ್ತೀಚಿಗೆ ವರ ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ದಿಬ್ಬಣ ಬರುವ ವೀಡಿಯೋ ಎಲ್ಲೆಡೆ ವೈರಲ್‌ ಆಗಿದೆ.

ಹಿಂದೆಲ್ಲಾ ಮದುವೆಗಳು ತುಂಬಾ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದವು. ಆದರೆ ಈಗಿನ ಯುವಜನತೆ ಎಲ್ಲದರಲ್ಲೂ ಹೊಸತನ್ನು ತರಲು ಯತ್ನಿಸುತ್ತಿದ್ದಾರೆ. ಹಾಗೆಯೇ ಹೊಸ ಹೊಸ ಟೆಕ್ನಿಕ್‌ನ್ನು ತಮ್ಮ ಮದುವೆಯಲ್ಲಿ ಅಳವಡಿಸಿಕೊಳ್ಳುತ್ತಾರೆ. ಇಂಥಾ ವಿಚಾರಗಳು ಆಗಿಂದಾಗೆ ವೈರಲ್ ಆಗುತ್ತಲೇ ಇರುತ್ತವೆ. ಸದ್ಯ ಅದಕ್ಕೊಂದು ಹೊಸ ಸೇರ್ಪಡೆ ಬೆಂಗಳೂರಿನ ವರನ ವಿಶೇಷ ಮದುವೆಯ ದಿಬ್ಬಣ. ಬೆಂಗಳೂರು ನಿವಾಸಿ ದರ್ಶನ್ ಪಟೇಲ್ ಸಾಂಪ್ರದಾಯಿಕವಾಗಿ ಕುದುರೆಯಲ್ಲಿ ಮದುವೆಯ ದಿಬ್ಬಣ ಬರುವ ಬದಲು ಎಲೆಕ್ಟ್ರಿಕ್ ಸ್ಕೂಟರ್‌ನ್ನು ಆಯ್ಕೆ ಮಾಡಿಕೊಂಡರು. ವರ ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ಬಾರಾತ್ ಬರುವ ವೀಡಿಯೋ ಎಲ್ಲೆಡೆ ವೈರಲ್‌ ಆಗಿದೆ.

ಬೆಂಗಳೂರಿನಲ್ಲಿ ವ್ಯಕ್ತಿಯಾಗಿರುವ ವರ ದರ್ಶನ್‌ ಪಟೇಲ್‌, ಅಥರ್ ಎಲೆಕ್ಟ್ರಿಕ್ ಬೈಕ್‌ನಲ್ಲಿ ಮದುವೆಗೆ ಆಗಮಿಸಿದ್ದರು. ಸಂಬಂಧಿಕರು ವರನ ಆಗಮನದ ಪಾರ್ಟಿಯಲ್ಲಿ ಎಲೆಕ್ಟ್ರಿಕ್ ವಾಹನದ (ಇವಿ) ಪಕ್ಕದಲ್ಲಿ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಅಥೆರ್ ಎನರ್ಜಿಯಲ್ಲಿ ಕೆಲಸ ಮಾಡುತ್ತಿರುವ ಇಂಡಸ್ಟ್ರಿಯಲ್ ಡಿಸೈನರ್ ದರ್ಶನ್ ಪಟೇಲ್ ಕಳೆದ ವಾರಾಂತ್ಯದಲ್ಲಿ ವಿವಾಹವಾದರು. ಅವರು ತಮ್ಮ ಮದುವೆಗೆ ಕುದುರೆಯಲ್ಲಿ ದಿಬ್ಬಣ ಹೋಗುವ ಬದಲು ಎಲೆಕ್ಟ್ರಿಕ್‌ ಬೈಕ್‌ನಲ್ಲಿ ಹೋಗಲು ಬಯಸಿದರು. ಇದಕ್ಕೆ ಅಥೆರ್‌ ಎನರ್ಜಿಯ ಕಂಪೆನಿ ಕೂಡಾ ಸಾಥ್ ನೀಡಿದೆ.

ಮದ್ವೆಗೆ ಬನ್ನಿ, ಕೋವಿಶೀಲ್ಡ್ ಲಸಿಕೆ ಪಡೆದವರು ಡ್ಯಾನ್ಸ್ ಮಾಡ್ಬೇಡಿ: ಕಾರ್ಡಲ್ಲಿದ್ದ ಸಂದೇಶ ವೈರಲ್! ಅಷ್ಟಕ್ಕೂ ಏನ್ ಪ್ರಾಬ್ಲಂ?

ವೈರಲ್ ಫೋಟೋದಲ್ಲಿ ಕಾಣಿಸಿಕೊಂಡಿರುವ EV ಹೊಸದಾಗಿ ಬಿಡುಗಡೆಯಾದ ಅಥರ್ ರಿಜ್ಟಾ ಆಗಿದೆ. ಅಥೆರ್ ಎನರ್ಜಿಯ ಸಹ-ಸಂಸ್ಥಾಪಕ ಮತ್ತು ಸಿಇಒ ತರುಣ್ ಮೆಹ್ತಾ, ವರನು ರಿಜ್ಟಾದಲ್ಲಿ ತನ್ನ ಬಾರಾತ್ ಪ್ರವೇಶವನ್ನು ಮಾಡಲು ಬಯಸಿದನು. ಹೀಗಾಗಿ ಕಂಪನಿಯು ಅದನ್ನು ಒದಗಿಸಿತು ಎಂದು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋಗೆ ನೆಟ್ಟಿಗರು ನಾನಾ ರೀತಿ ಪ್ರತಿಕ್ರಿಯಿಸಿದ್ದಾರೆ. @peakbengaluru 'ಮದುವೆಗಳಲ್ಲಿ ಕುದುರೆಗಳ ಬದಲು ಅಥರ್ ಸ್ಕೂಟರ್‌ ಬಳಕೆಯಾಗುತ್ತಿದೆ' ಎಂದು ಬರೆದಿದ್ದಾರೆ. 'ಮದುವೆಯ ದಿನಕ್ಕಾಗಿ, ಅಥರ್ ಸವಾರಿ ಮಾಡಿ ಮತ್ತು ಅದನ್ನು ಸ್ವಚ್ಛವಾಗಿಡಿ,' ಎಂದು ಇವಿ ತಯಾರಕರು ಬರೆದಿದ್ದಾರೆ. 'ಬೆಂಗಳೂರಿನ ಹುಡುಗ ಮಾತ್ರ ಇದನ್ನು ಮಾಡಬಹುದು" ಎಂದು ಉದ್ಯಮಿ ಜೈದೇವ್ ಪ್ರತಿಕ್ರಿಯಿಸಿದ್ದಾರೆ. 'ಶೂನ್ಯ ಎಮಿಷನ್ ಹಾರ್ಸ್' ಎಂದು ಹೂಡಿಕೆದಾರರಾದ ದೀಪಕ್ ಗುಪ್ತಾ ಹೇಳಿದ್ದಾರೆ.

ಮದುವೆಯಾಗಿ 12 ದಿನವಾದ್ರೂ ಸಿಗ್ಲಿಲ್ಲ ಆ ಭಾಗ್ಯ…ಕೊನೆಯಲ್ಲಿ ರಿವೀಲ್ ಆಯ್ತು ಕಹಿ ಸತ್ಯ

ಅಥರ್ ರಿಜ್ಟಾ ಫ್ಯಾಮಿಲಿ ಎಲೆಕ್ಟ್ರಿಕ್ ವಾಹನವನ್ನು ಕಳೆದ ತಿಂಗಳು ಬಿಡುಡೆ ಮಾಡಲಾಗಿತ್ತು. ಇದರ ಬೆಲೆ 1.10 ಲಕ್ಷ ರೂ. ಬುಕ್ಕಿಂಗ್‌ಗಳು 999ರಿಂದ ಪ್ರಾರಂಭವಾಗುತ್ತದೆ. ದ್ವಿಚಕ್ರ ವಾಹನವು ಜುಲೈನಿಂದ ವಿತರಣೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.

Scroll to load tweet…