Asianet Suvarna News Asianet Suvarna News

ನೇಪಾಳ ಎಂದು ಚೀನಾ ತಲುಪಿದ್ರು; ಭಾರತೀಯ ಬೈಕರ್ಸ್‌ಗೆ ಗಡಿಯಲ್ಲಿ ಸಂಕಷ್ಟ!

ಹಿಮಾಲಯ ರಸ್ತೆಗಳಲ್ಲಿ ಬೈಕ್ ಓಡಿಸಿದರೆ ಬೈಕರ್ಸ್‌ ಸಿಗೋ ಆನಂದ ಅಷ್ಟಿಷ್ಟಲ್ಲ. ಇದೇ ರೀತಿ ಹಿಮಾಲಯ ಮೂಲಕ ನೇಪಾಳಕ್ಕೆ ರೈಡ್ ಹೋದ ಭಾರತೀಯ ಬೈಕರ್ಸ್ ಕೊನೆಗೆ ಚೀನಾ ಪೊಲೀಸರ ಕೈಗೆ ಸಿಕ್ಕಿ ಸಂಕಷ್ಟ ಅನುಭವಿಸಿದ್ದಾರೆ. 

Indian bikers busted china police when they cross border milestone
Author
Bengaluru, First Published Sep 29, 2019, 1:44 PM IST

ನೇಪಾಳ(ಸೆ.29): ಭಾರತೀಯ ಬೈಕರ್ಸ್ ಹೆಚ್ಚಾಗಿ ಹಿಮಾಲಯ ರೈಡ್ ಹೋಗುವುದು ಸಾಮಾನ್ಯ. ಅಡ್ವೆಂಚರ್ ರೈಡ್‌ಗಾಗಿ ಹಿಮಾಲಯ, ಲೇಹ್ ಲಡಾಕ್ ಸೇರಿದಂತೆ ಅತ್ಯುತ್ತಮ ಹಾಗೂ ಚಾಲೆಂಜಿಂಗ್ ಸ್ಥಳಗಲ್ಲಿ ಬೈಕ್ ರೈಡಿಂಗ್ ಮಾಡುತ್ತಾರೆ. ಇದೇ ರೀತಿ ಹಿಮಾಲಾಯ ಮೂಲಕ ನೇಪಾಳ ಟ್ರಿಪ್ ತೆರಳಿದ ಭಾರತೀಯ ಬೈಕರ್ಸ್ ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ.

Indian bikers busted china police when they cross border milestone

ಇದನ್ನೂ ಓದಿ: 2 ಆ್ಯಪ್ ನಿಮ್ಮಲ್ಲಿದ್ದರೆ, ದುಬಾರಿ ದಂಡದಿಂದ ಬಚಾವ್!

ಹಿಮಾಲಯ ಮೂಲಕ ನೇಪಾಳಕ್ಕೆ ತೆರಳಿದ ಭಾರತೀಯ ಬೈಕರ್ಸ್ ತಂಡ ನೇಪಾಳ ಗಡಿ ಪ್ರದೇಶಕ್ಕೆ ತೆರಳಿದ್ದಾರೆ. ಈ ವೇಳೆ ಗಡಿಯಲ್ಲಿ ಹಾಕಿದ್ದ ಬಾರ್ಡರ್ ಮೈಲ್ ಸ್ಟೋನ್ ಗಮನಿಸದೇ ಅತ್ತ ಚೀನಾಗಡಿಯೊಳಕ್ಕೆ ಪ್ರವೇಶಿಸಿದ್ದಾರೆ. ಬಳಿಕ ಫೋಟೋ ತೆಗೆದು ಸಂಭ್ರಮಿಸಿದ್ದಾರೆ. ಕೆಲ ನಿಮಿಷದಲ್ಲಿ ಚೀನಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಎಲ್ಲರನ್ನು ವಶಕ್ಕೆ ಪಡೆದಿದ್ದಾರೆ.

Indian bikers busted china police when they cross border milestone

ಇದನ್ನೂ ಓದಿ: ಹವಾಯಿ ಚಪ್ಪಲ್, ಸ್ಲಿಪ್ಪರ್ ಹಾಕಿ ದ್ವಿಚಕ್ರ ವಾಹನ ಓಡಿಸಿದರೆ ಫೈನ್!

ನೀವು ಗಡಿ ಮೈಲ್ ಸ್ಟೋನ್ ದಾಟಿ ಬಂದಿದ್ದೀರಿ. ಈ ಮೈಲ್ ಸ್ಟೋನ್ ಅತ್ತ ನೇಪಾಳ, ಇತ್ತ ಚೀನಾ. ಈ ಮೈಲ್ ಸ್ಟೋನ್ ದಾಟುವಂತಿಲ್ಲ ಎಂದು ಚೀನಾ ಪೊಲೀಸರು ಎಚ್ಚರಿಸಿದ್ದಾರೆ. ಬಳಿಕ ಎಲ್ಲರ ಕ್ಯಾಮರ, ಮೊಬೈಲ್ ವಶಕ್ಕೆ ಪಡೆದು ಚೀನಾ ಪ್ರದೇಶದಲ್ಲಿ ಕ್ಲಿಕ್ಕಿಸಿಕೊಂಡ ಫೋಟೋ, ವಿಡಿಯೋ ಡಿಲೀಟ್ ಮಾಡಿದ್ದಾರೆ. ಇಷ್ಟೇ ಅಲ್ಲ ನೀವು ಗಂಭೀರ್ ಅಪರಾಧ ಮಾಡಿದ್ದೀರಿ. ಅನುಮತಿ ಇಲ್ಲದೆ ಗಡಿ ಪ್ರದೇಶದಲ್ಲಿ ನುಗ್ಗಿದ್ದೀರಿ ಎಂದಿದ್ದಾರೆ.

Indian bikers busted china police when they cross border milestone

ಇದನ್ನೂ ಓದಿ: 6 ಟ್ರಾಫಿಕ್ ನಿಯಮ; ತಿಳಿದುಕೊಳ್ಳಿ ದಂಡ ಕಟ್ಟೋ ಮುನ್ನ!

ಆಂಗ್ಲ ಭಾಷೆಯನ್ನೂ ಚೈನೀಸ್ ರೀತಿಯಲ್ಲಿ ಮಾತನಾಡುತ್ತಿದ್ದ ಪೊಲೀಸರಿಗೆ ಮನವಿ ಮಾಡಲು ಭಾರತೀಯ ಬೈಕರ್ಸ್ ಹರಸಾಹಸ ಮಾಡಿದ್ದಾರೆ.  ನಮಗರಿವಿಲ್ಲದೆ ನಾವು ಚೀನಾ ಪ್ರವೇಶಿಸಿದ್ದೇವೆ. ಫೆನ್ಸಿಂಗ್ ವರೆಗೆ ನೇಪಾಳ, ಅಲ್ಲಿಂದ ಚೀನಾ ಎಂದುಕೊಂಡೆವು. ಮೈಲ್ ಸ್ಟೋನ್ ದಾಟಬಾರದು ಅನ್ನೋ ಅರಿವು ಇರಲಿಲ್ಲ. ನಾವು ಭಾರತೀಯರು ಎಂದು ಐಡಿ, ಪಾಸ್‌ಪೋರ್ಟ್ ನೀಡಿದ್ದಾರೆ. ಖಡಕ್ ವಾರ್ನಿಂಗ್ ಪಡೆದ ಭಾರತೀಯ ಬೈಕರ್ಸ್ ಅಲ್ಲಿಂದ ವಾಪಾಸ್ಸಾಗಿದ್ದಾರೆ. ಪೊಲೀಸರ ಎಚ್ಚರಿಕೆ ಹೊರತು ಪಡಿಸಿದರೆ ಇನ್ಯಾವ ಪ್ರಕರಣ ಇವರ ಮೇಲೆ ಬೀಳಲಿಲ್ಲ.

ಸೆ.29ರ ಭಾನುವಾರ ಕಿಕ್ ಏರಿಸಿದ ಟಾಪ್ 10 ಸುದ್ದಿ ಇಲ್ಲಿವೆ!

Follow Us:
Download App:
  • android
  • ios