ಪುಣೆ(ಸೆ.20): ನಗರ ಪ್ರದೇಶಗಳಿಗೆ ಹೊಸದಾಗಿ ಬರುವರರು, ತೆರಳಬೇಕಾದ ಸ್ಥಳ, ದಾರಿ ತಿಳಿಯದೇ ಮೋಸ ಹೋಗುವುದು ಹೆಚ್ಚು. ಇದೀಗ ಬೆಂಗಳೂರು ಟಿಕ್ಕಿಯೊರ್ವ 18 ಕಿ.ಮೀ ಆಟೋ ಪ್ರಯಾಣ ಮಾಡಿ ಬರೋಬ್ಬರಿ 4,300ರೂಪಾಯಿ ನೀಡಿದ ಘಟನೆ ನಡೆದಿದೆ.

ಇದನ್ನೂ ಓದಿ: ಸೈಕಲ್‌ನಲ್ಲಿ ಬಂದ ವಿದ್ಯಾರ್ಥಿಗೂ ಬಿತ್ತು ಟ್ರಾಫಿಕ್ ಫೈನ್; ವಿಡಿಯೋ ವೈರಲ್!

ಬೆಂಗಳೂರಿ ಟಿಕ್ಕಿ ಕೆಲಸಕ್ಕಾಗಿ ಪುಣೆಗೆ ತೆರಳಿದ್ದಾನೆ. ಬೆಂಗಳೂರಿನಿಂದ ಬಸ್ ಮೂಲಕ ಪುಣೆ ತಲುಪಿದ ಟೆಕ್ಕಿ ಮುಂಜಾನೆ 4 ಗಂಟೆ ಹೊತ್ತಿಗೆ ಪುಣೆಯ ಕತ್ರಾಜ್ ಬಳಿ ಇಳಿದಿದ್ದಾರೆ. ಇಲ್ಲಿಂದ ಯೆರೆವಾಡಗೆ ತೆರಳು ಟೆಕ್ಕಿ ಆ್ಯಪ್ ಮೂಲಕ ಟ್ಯಾಕ್ಸಿ ಬುಕ್ ಮಾಡಲು ಪ್ರಯತ್ನಿಸಿದ್ದಾನೆ. ಆದರೆ ಯಾವುದೇ ಟ್ಯಾಕ್ಸಿ ಸಿಗದಿದ್ದ ಕಾರಣ, ಅದೇ ದಾರಿಯಲ್ಲಿ ಬರುತ್ತಿದ್ದ ಆಟೋರಿಕ್ಷಾ ಹತ್ತಿ ಯೆರೆವಾಡ ತೆರಳಲು ಸೂಚಿಸಿದ್ದಾನೆ. ಮೀಟರ್ ಚಾರ್ಜ್ ನೀಡುವಂತೆ ಆಟೋ ಚಾಲಕ  ಹೇಳಿದ್ದಾರೆ. ಟೆಕ್ಕಿ ಆಟೋ ಹತ್ತುವಾಗ ಮೀಟರ್ ಸೊನ್ನೆ ಇದೆಯಾ ಎಂದು ಪರೀಕ್ಷಿಸಿಲ್ಲ. ಎಡವಟ್ಟು ಆಗಿದ್ದು ಇಲ್ಲೆ.

ಇದನ್ನೂ ಓದಿ: ಹೆಲ್ಮೆಟ್ ಹಾಕಲ್ಲ, ಪೊಲೀಸರು ಹಿಡಿಯಲ್ಲ; ಈತ ಎಲ್ಲೇ ಹೋದ್ರು ದಂಡ ಇಲ್ಲ!

ಟೆಕ್ಕಿ ಹತ್ತಿದ ಆಟೋರಿಕ್ಷಾ ಚಾಲಕ ಕುಡಿದಿದ್ದ. ಹೀಗಾಗಿ ಹಿಂಬದಿ ಸೀಟಿನಲ್ಲಿ ಕುಳಿತಿದ್ದ, ಚಾಲಕನ ಗೆಳೆಯ ಆಟೋ ಚಾಲನೆ ಮಾಡುತ್ತಿದ್ದ. ಇಷ್ಟೇ ಅಲ್ಲ ಚಾಲಕ ಪೊಲೀಸರು ಇರೋ ದಾರಿಗಳಲ್ಲಿ ತೆರಳದಂತೆ ಆತನ  ಗೆಳೆಯನಿಗೆ ಸೂಚಿಸುತ್ತಿದ್ದ. ಬೆಂಗಳೂರು ಟೆಕ್ಕಿಗೆ ಯೆರೆವಾಡ ಬಳಿ ಇಳಿಸಿದ ಆಟೋ ಚಾಲಕ, ಒಟ್ಟು 4300 ರೂಪಾಯಿ ನೀಡಲು ಸೂಚಿಸಿದ್ದಾನೆ.

ಇದನ್ನೂ ಓದಿ: ಹವಾಯಿ ಚಪ್ಪಲ್, ಸ್ಲಿಪ್ಪರ್ ಹಾಕಿ ದ್ವಿಚಕ್ರ ವಾಹನ ಓಡಿಸಿದರೆ ಫೈನ್!

18 ಕಿ.ಮಿ ಪ್ರಯಾಣಕ್ಕೆ 4,300 ರೂಪಾಯಿ ಕೇಳಿದ್ದಕೆ ಆಕ್ರೋಶಗೊಂಡ ಟೆಕ್ಕಿ ವಾಗ್ವಾದ ನಡೆಸಿದ್ದಾನೆ. ಆಟೋ ಇಳಿದ ಸ್ಥಳ ಕತ್ತಲೆಯಿಂದ ಕೂಡಿತ್ತು. ಇಷ್ಟೇ ಅಲ್ಲ ಆಟೋ ಚಾಲಕ ಹಾಗೂ ಆತನ ಗೆಳೆಯ  ಇಬ್ಬರೂ ಹಲ್ಲೆಗೆ ಯತ್ನಿಸಲು ಮುಂದಾಗಿದ್ದಾರೆ. ಹೀಗಾಗಿ ಭಯಭೀತಗೊಂಡ ಟೆಕ್ಕಿ 4,300 ರೂಪಾಯಿ ನೀಡಿದ್ದಾನೆ. ಆಟೋ ರಿಕ್ಷಾ ನಂಬರ್ ನೋಟ್ ಮಾಡಿದ ಟೆಕ್ಕಿ ಬಳಿಕ ಸಮೀಪದ ಯೆರೆವಾಡ ಪೊಲೀಸ್ ಠಾಣೆಗೆ ತೆರೆಳಿ ದೂರು ನೀಡಿದ್ದಾನೆ.

ಬೆಂಗಳೂರು ಟೆಕ್ಕಿಯ ದೂರು ಸ್ವೀಕರಿಸಿದ್ದೇವೆ. ನಿಗದಿತ ಚೌಕಿ ಪೋಲೀಸರಿಗೆ ಕಳುಹಿಸಿದ್ದೇವೆ. ಶೀಘ್ರದಲ್ಲೇ ಕ್ರಮ ಕೈಗೊಳ್ಳಲಿದ್ದೇವೆ ಎಂದು ಯೆರೆವಾಡ ಪೊಲೀಸ್ ಠಾಣೆ ತಿಳಿಸಿದೆ. ಇತರ ನಗರ, ಇತರ ರಾಜ್ಯಕ್ಕೆ ತೆರಳಿದಾಗ ಎಚ್ಚರಿಕೆ ವಹಿಸುವುದು ಸೂಕ್ತ.