ಟ್ರಾಫಿಕ್ ಪೊಲೀಸ್‌ನೊಳಗೊಬ್ಬ ಗೂಂಡಾ; ರಸೀದಿ ಕೇಳಿದ್ದಕ್ಕೆ ಗೂಸ!
ಟ್ರಾಫಿಕ್ ನಿಯಮ ತಿದ್ದುಪಡಿಯಲ್ಲಿ ಟ್ರಾಫಿಕ್ ಪೊಲೀಸರ ಇತಿಮಿತಿಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದರೆ ಇಂತಹ ಘಟನೆಗಳು ಮರುಕಳಿಸುತ್ತಿರಲಿಲ್ಲ. ಹೊಸ ನಿಯಮ ಜಾರಿಯಾದ ಮೇಲೆ ಟ್ರಾಫಿಕ್ ಪೊಲೀಸರ ದರ್ಪ ಹೆಚ್ಚಾಗುತ್ತಿದೆ. ವಾಹನ ಸವಾರ ಮೇಲೆ ಹಲ್ಲೆ ನಡೆಸಿದ ಪಟ್ಟಿಗೆ ಇದೀಗ ಮತ್ತೊಂದು ಸೇರ್ಪಡೆಯಾಗಿದೆ.
ಚಿಕ್ಕಮಗಳೂರು(ಸೆ.29): ಹೊಸ ಟ್ರಾಫಿಕ್ ನಿಯಮ ಜಾರಿಯಾದ ಮೇಲೆ ವಾಹನ ಸವಾರರು ನಿಯಮ ಉಲ್ಲಂಘನೆ ಮಾಡುವುದು ಕಡಿಮೆಯಾಗಿದೆ. ಆದರೆ ಟ್ರಾಫಿಕ್ ಪೊಲೀಸರ ದರ್ಪ ಹೆಚ್ಚಾಗಿದೆ. ಸವಾರರ ಮೇಲೆ ಹಲ್ಲೆ ನಡೆಸಿದ ಘಟನೆಗಳು ಹೆಚ್ಚಾಗುತ್ತಿದೆ. ಇದೀಗ ದಂಡ ಕಟ್ಟಿದ ವಾಹನ ಸವಾರ, ರಸೀದಿ ಕೇಳಿದ್ದಕ್ಕೆ ಪೊಲೀಸಪ್ಪ ಗೂಸ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಕಮಿಷನರ್ ಸಾಹೇಬ್ರೇ... ಇದೇನಾ ಟ್ರಾಫಿಕ್ ಪೊಲೀಸಿಂಗ್ ಅಂದ್ರೆ?
ಚಿಕ್ಕಮಗಳೂರಿನಲ್ಲಿ ವಾಹನ ಸವಾರ ನಿಯಮ ಉಲ್ಲಂಘಿಸಿದ್ದ. ತಕ್ಷಣವೇ ಪೊಲೀಸರು ವಾಹನ ಸವಾರನನ್ನು ಹಿಡಿದು ದಂಡ ಹಾಕಿದ್ದಾರೆ. ದಂಡ ಕಟ್ಟಿದ ಸವಾರ ಬಳಿಕ ಪೊಲೀಸರಲ್ಲಿ ತನ್ನ ದಂಡದ ರಸೀದಿ ಕೇಳಿದ್ದಾರೆ. ಅಷ್ಟೇ ನೋಡಿ. ಪೊಲೀಸಪ್ಪ ಉಗ್ರ ರೂಪ ತಾಳಿದ್ದಾನೆ. ರಸೀದಿ ನೀಡಲು ನಿರಾಕರಿಸಿದ್ದಲ್ಲದೆ, ಸವಾರನ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.
ಇದನ್ನೂ ಓದಿ: ಅಂದು ಟ್ರಕ್; ಇಂದು ಬಸ್ ಚಾಲಕನ ಮೇಲೆ ಟ್ರಾಫಿಕ್ ಪೊಲೀಸಪ್ಪನ ಅಟ್ಟಹಾಸ!
ಈ ರೀತಿ ಹಲ್ಲೆಗೆ ಮುಂದಾದ ಟ್ರಾಪಿಕ್ ಪೊಲೀಸ್ ಪೇದೆ ಮಂಗಲ್‌ದಾಸ್ ವಿರುದ್ದ ಆಕ್ರೋಷ ವ್ಯಕ್ತವಾಗಿದೆ. ಜೊತೆಗಿದ್ದ ಪೊಲೀಸರು ಪೇದೆ ಮಂಗಲ್‌ದಾಸ್ ಸಮಧಾನ ಪಡಿಸಲು ಮುಂದಾದರೂ ಮಂಗಲ್‌ದಾಸ್ ಹಲ್ಲೆ ನಡೆಸಿದ್ದಾನೆ. ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದೀಗ ಪೇದೆ ಮಂಗಲ್‌ದಾಸ್ ವಿರುದ್ದ ಸ್ಥಳೀಯರು ಆಕ್ರೋಷ ವ್ಯಕ್ತಪಡಿಸಿದ್ದಾರೆ.