ನವದೆಹಲಿ(ಜೂ.23): ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಎಂ.ಜಿ. ಮೋಟಾರ್ಸ್ ನೂತನ ಎಂ.ಜಿ.ಹೆಕ್ಟರ್ ಕಾರು ಬಿಡುಗಡೆ ಮಾಡುತ್ತಿದೆ. ಜೂನ್ 27ಕ್ಕೆ SUV ಕಾರು ಬಿಡುಗಡೆಯಾಗುತ್ತಿದೆ. ಬ್ರಿಟೀಷ್ ಮೂಲದ MG ಮೋಟಾರ್ಸ್ ಇದೇ ಮೊದಲ ಬಾರಿಗೆ ಭಾರತದಲ್ಲಿ ಕಾರು ಬಿಡುಗಡೆ ಮಾಡುತ್ತಿದೆ. ನೂತನ ಕಾರಿನಲ್ಲಿ ಹಲವು ವಿಶೇಷತೆಗಳಿವೆ. ವಾಯ್ಸ್ ರೆಕಗ್ನಿಶನ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ. ಇದನ್ನು ಹೊರತು ಪಡಿಸಿದರೆ, ಹೆಚ್ಚಾಗಿ ತಿಳಿದಿಲ್ಲದ 5 ಸ್ಪೆಷಾಲಿಟಿ ಈ ಕಾರಿನಲ್ಲಿದೆ.

ಇದನ್ನೂ ಓದಿ: ಟಾಟಾ ಹ್ಯಾರಿಯರ್ ಪ್ರತಿಸ್ಪರ್ಧಿ MG ಹೆಕ್ಟರ್ ಕಾರಿನ ಬೆಲೆ ಇಲ್ಲಿದೆ

ಅತೀ ದೊಡ್ಡ ಸನ್‌ರೂಫ್
MG ಹೆಕ್ಟರ್ ಅತೀ ದೊಡ್ಡ ಸನ್‌ರೂಫ್ ಹೊಂದಿದೆ. ಇತರ ಕಾರುಗಳಲ್ಲಿ ಮುಂಭಾಗದ ಸೀಟಿಗೆ ಮಾತ್ರ ಸೀಮಿತವಾಗಿರುವ ಸನ್‌ರೂಫ್, ಹೆಕ್ಟರ್ ಕಾರಿನಲ್ಲಿ ಹಿಂಭಾಗದ ಸೀಟ್ ವರೆಗೂ ಚಾಚಿದೆ. 

ರಿಕ್ಲೈನಿಂಗ್ ರೇರ್ ಸೀಟ್
ಎಲೆಕ್ಟ್ರಾನಿಕ್ ಎಡ್ಜಸ್ಟ್ ಮುಂಭಾಗ ಸೀಟ್ ಬಹುತೇಕ ಎಲ್ಲಾ ಕಾರುಗಳಿಲ್ಲಿವೆ. ಆದರೆ ರೇರ್ ಸೀಟ್ ಎಡ್ಜಸ್ಟ್ ಎಲ್ಲಾ ಕಾರುಗಳಲಿಲ್ಲ. ದುಬಾರಿ ಹಾಗೂ ಐಷಾರಾಮಿ ಕಾರುಗಳಲ್ಲಿ ಮಾತ್ರ ಇರುವ ರೇರ್ ಸೀಟ್ ರಿಕ್ಲೈನಿಂಗ್ ಸೌಲಭ್ಯವನ್ನು ಹೆಕ್ಟರ್ ಕಾರು ಹೊಂದಿದೆ. ಪ್ರಯಾಣಿಕರ ಅನೂಕೂಲಕ್ಕೆ ತಕ್ಕಂತೆ ಹಿಂಬದಿ ಸೀಟನ್ನು ಎಲೆಕ್ಟ್ರಾನಿಕ್ ಸ್ವಿಚರ್ ಮೂಲಕ ಎಡ್ಜಸ್ಟ್ ಮಾಡಿಕೊಳ್ಳಬಹುದು. 

ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನ ಬಳಕೆಗೆ ಮೋದಿ ಸರ್ಕಾರ ಹೊಸ ಯೋಜನೆ- ರಿಜಿಸ್ಟ್ರೇಶನ್ ಉಚಿತ!

8 ಬಣ್ಣದ ಮೂಡ್ ಲೈಟ್
ಹೆಕ್ಟರ್ ಕಾರಿನ ಇಂಟಿರೀಯರ್ ಲೈಟ್ ಪರಿಸ್ಥಿತಿಗೆ ತಕ್ಕಂತೆ ಬದಲಾಗುತ್ತೆ. ರಾತ್ರಿ ವೇಳೆ, ಸಂಜೆ, ಮುಂಜಾನೆ ಹಾಗೂ ಹಗಲಿಗೆ ಪೂರಕವಾದ ಲೈಟ್ ಸೌಲಭ್ಯವಿದೆ. ಇಷ್ಟೇ ಅಲ್ಲ ಪ್ರಯಾಣಿಕರ ಸಂತೋಷ, ನೆಮ್ಮದಿಗೆ ಅನುಗುಣವಾಗಿ ಲೈಟ್ ಬದಲಾಗಲಿದೆ. ಒಟ್ಟು 8 ಬಣ್ಣದ ಆ್ಯಂಬಿಯೆಂಟ್ ಮೂಡ್ ಲೈಟ್ ಸೌಲಭ್ಯವಿದೆ. 

ಗರಿಷ್ಠ ವೀಲ್‌ಬೇಸ್ ಹಾಗೂ ಬೂಟ್ ಸ್ಪೆಸ್
ಹೆಕ್ಟರ್ ಕಾರು 2,750mm ವೀಲ್‌ಬೇಸ್  ಹಾಗೂ  587 ಲೀಟರ್ ಬೂಟ್ ಸ್ಪೇಸ್ ಹೊಂದಿದೆ. ಇದು ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಸೇರಿದಂತೆ ಈ ಸೆಗ್ಮೆಂಟ್ ಕಾರಿನಲ್ಲಿ ಗರಿಷ್ಠವಾಗಿದೆ.

ಪವರ್ ಟೈಲ್‌ಗೇಟ್- 360 ಡಿಗ್ರಿ ಕ್ಯಾಮರ
ಹೆಕ್ಟರ್, ಜೀಪ್ ಕಂಪಾಸ್, ಹ್ಯಾರಿಯರ್ ಸೆಗ್ಮೆಂಟ್ ಕಾರುಗಳಲ್ಲಿ ಪವರ್ ಟೈಲ್‌ಗೇಟ್ ಹಾಗೂ 360 ಡಿಗ್ರಿ ಕ್ಯಾಮರ ಹೆಕ್ಟರ್ ಕಾರಿನಲ್ಲೇ ಮೊದಲು. ಟೈಲ್‌ಗೇಟ್ ತೆರೆಯಲು ಬಟನ್ ಪ್ರೆಸ್ ಮಾಡಿದರೆ ಸಾಕು, ತನ್ನಷ್ಟಕ್ಕೆ ತೆರೆಯಲಿದೆ. ಇಷ್ಟೇ ಅಲ್ಲ ಮುಚ್ಚಲು ಕೂಡ  ಬಟನ್ ಪ್ರೆಸ್ ಮಾಡಿದರೆ ಸಾಕು. 360 ಡಿಗ್ರಿ ಕ್ಯಾಮರಾ ಸಹಾಯದಿಂದ ಕಾರಿನೊಳಗೆ ಸುತ್ತಲಿನ ಸಂಪೂರ್ಣ ಚಿತ್ರಣ ಸಿಗಲಿದೆ. ಪಾರ್ಕಿಂಗ್, ಸೇರಿದಂತೆ ಹಲವು ಸುರಕ್ಷತೆಗೆ ಇದು ಸಹಕಾರಿಯಾಗಿದೆ.