ನವದೆಹಲಿ(ಜೂ.22): ಭಾರತದಲ್ಲಿ ಇದೇ ಮೊದಲ ಬಾರಿಗೆ ಕಾರು ಬಿಡುಗಡೆ ಮಾಡಲು MG ಮೋಟಾರ್ಸ್ ಎಲ್ಲಾ ತಯಾರಿ ಮಾಡಿಕೊಂಡಿದೆ. ಬಹುನಿರೀಕ್ಷಿತ MG ಹೆಕ್ಟರ್ SUV ಕಾರು ಬಿಡುಗಡೆಗೆ ಸಜ್ಜಾಗಿದೆ. ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಕಾರಿಗೆ ಪ್ರತಿಸ್ಪರ್ಧಿಯಾಗಿರುವ  MG ಹೆಕ್ಟರ್, ಜೂನ್ 27 ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಮಾರುತಿ ಡಿಸೈರ್ BS-VI ಕಾರು ಬಿಡುಗಡೆ- ಬೆಲೆ ಬದಲಾವಣೆ!

MG ಹೆಕ್ಟರ್ ಕಾರು ಟಾಟಾ ಹ್ಯಾರಿಯರ್ ಕಾರಿಗಿಂತ ದೊಡ್ಡದಾಗಿದೆ. 5 ಸೀಟರ್ SUV ಕಾರು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಇದು ಭಾರತದ ಮೊದಲ ಇಂಟರ್‌ನೆಟ್ ಕಾರು ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದರಲ್ಲಿ ವಾಯ್ಸ್ ರೆಕಗ್ನಿಶನ್ ಸೌಲಭ್ಯವಿದೆ. MG ಎಸಿ ಆನ್ ಎಂದರೆ ತಕ್ಷಣ ಎಸಿ ಆನ್ ಆಗುತ್ತೆ. ವಾಯ್ಸ್ ಮೂಲಕ ಕಾರಿನ ಹಲವು ಫೀಚರ್ಸ್‌ಗಳು ಕಾರ್ಯನಿರ್ವಹಿಸುತ್ತದೆ.

 

ಇದನ್ನೂ ಓದಿ: ಕಿಯಾ ಸೆಲ್ಟೊಸ್ SUV ಅನಾವರಣ-ಇಲ್ಲಿದೆ ಕಾರಿನ ಬೆಲೆ, ವಿಶೇಷತೆ !

ಹೆಕ್ಟರ್ ಕಾರಿನಲ್ಲಿ ಆಟೋಮ್ಯಾಟಿಕ್ LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, LED ಫಾಗ್ ಲ್ಯಾಂಪ್ಸ್, ಪನೋರಮಿಕ್ ಸನ್‌ರೂಫ್, 360 ಡಿಗ್ರಿ ಸರೌಂಡ್ ಕ್ಯಾಮರ, ಹೀಟೆಡ್ ORVMs, ಕ್ರ್ಯೂಸ್ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ. ಇನ್ನು 6 ಏರ್‌ಬ್ಯಾಗ್,  ಟ್ರಾಕ್ಷನ್ ಕಂಟ್ರೋಲ್, ಹಿಲ್ ಆಸಿಸ್ಟ್, ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್), 360 ಡಿಗ್ರಿ ಕ್ಯಾಮರ ಹಾಗೂ ರೇರ್ ಪಾರ್ಕಿಂಗ್ ಸೆನ್ಸಾರ್ ಮೂಲಕ ಗರಿಷ್ಠ ಸುರಕ್ಷತೆ ನೀಡಲಿದೆ.

ಇದನ್ನೂ ಓದಿ: ಸ್ವಂತ ಕಾರನ್ನೇ ಕದ್ದು ಅರೆಸ್ಟ್ ಆದ ಉದ್ಯಮಿ-ಕಾರಣ ವಿಚಿತ್ರ!

ಹೆಕ್ಟರ್ ಪೆಟ್ರೋಲ್ ಎಂಜಿನ್ 1.5-ಲೀಟರ್ ಹೊಂದಿದ್ದು,  143 PS ಪವರ್ ಹಾಗೂ 250 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.  2.0 ಲೀಟರ್ ಡೀಸೆಲ್ ಮಲ್ಟಿಜೆಟ್ ಎಂಜಿನ್,  170 PS ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ನೂತನ ಕಾರಿನ ಬೆಲೆ 15 ರಿಂದ 20 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.