ಪ್ರತಿಯೊಬ್ಬರೂ ತಮ್ಮ ಪ್ರೇಮಿ ಅಥವಾ ಪತಿ/ ಪತ್ನಿಯೊಂದಿಗಿನ ಸಂಬಂಧ ಜನ್ಮ ಜನ್ಮಾಂತರದ್ದಾಗಿರಬೇಕು ಎಂದು ಬಯಸುತ್ತಾರೆ. ಜೊತೆಗೆ ಆ ಸಂಬಂಧದಲ್ಲಿ ಯಾವುದೇ ಸಮಸ್ಯೆಗಳು  ಬರಬಾರದೆಂದು ಬೇಡಿಕೊಳ್ಳುತ್ತಾರೆ. ಆದರೆ ನಿಮಗೊತ್ತಾ? ಎರಡು ರಾಶಿಗಳ ಜನ ಜೊತೆಯಾದರೆ ಆ ರಾಶಿಗಳ ಕಪಲ್ ಬೆಸ್ಟ್ ಕಪಲ್‌ಗಳಾಗುತ್ತಾರೆ. ಹಾಗಿದ್ದರೆ ಯಾವೆರಡು ರಾಶಿಯವರು ಬೆಸ್ಟ್?

ಮಿಥುನ ಮತ್ತು ತುಲಾ ರಾಶಿ: ಈ ಎರಡು ರಾಶಿಯ ಜೋಡಿಗಳ ಸಂಬಂಧ ತುಂಬಾನೇ ಸುಮಧುರವಾಗಿರುತ್ತದೆ. ಒಬ್ಬರ ಮೇಲೆ ಇನ್ನೊಬ್ಬರು ದೂರು ಹೇಳುವ ಸಂದರ್ಭ ಬರುವ ಚಾನ್ಸೇ ಇರೋಲ್ಲ. ಈ ರಾಶಿಯ ಕಪಲ್ ಒಬ್ಬರಿಗೊಬ್ಬರು ಶಾರೀರಿಕ ಮತ್ತು ಮಾನಸಿಕವಾಗಿ ಎಲ್ಲಾ ರೀತಿಯಲ್ಲೂ ಹೊಂದಿ ಕೊಂಡಿರುತ್ತಾರೆ.

ರಾಶಿಗನುಗುಣವಾಗಿ ಸಂಗಾತಿ ವ್ಯಕ್ತಿತ್ವ ಪರೀಕ್ಷೆ ಹೇಗೆ...?

ತುಲಾ ಮತ್ತು ಸಿಂಹ: ಇವರಿಬ್ಬರ ಜೋಡಿಯೂ ಬೆಸ್ಟ್ ಎನಿಸಕೊಳ್ಳಲಿದೆ. ಈ ರಾಶಿಯವರ ಆಲೋಚನೆ, ವಿಚಾರ, ಗುಣ ಎಲ್ಲವೂ ಒಬ್ಬರಿಗೊಬ್ಬರಿಗೆ ಸರಿಯಾಗಿ ಮ್ಯಾಚ್ ಆಗುತ್ತದೆ. ಆದುದರಿಂದ ಈ ಎರಡು ರಾಶಿಯವರ ರಿಲೇಷನ್‌ಶಿಪ್ ನಲ್ಲಿ ಯಾವುದೇ ಸಮಸ್ಯೆಯೂ ಇರೋಲ್ಲ. ಎರಡೂ ರಾಶಿಯವರು ತುಂಬಾ ಸೋಷಿಯಲ್ ಆಗಿರುತ್ತಾರೆ.  ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಈ ರಾಶಿ ಜನ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗುತ್ತಾರೆ. 

ಸಿಂಹ ಮತ್ತು ಧನು: ಈ ಎರಡು ರಾಶಿಯವರಿಗೂ ಆತ್ಮವಿಶ್ವಾಸ ಹೆಚ್ಚು. ಇದರಿಂದ ಒಬ್ಬರಿಗೊಬ್ಬರು ಆಕರ್ಷಿತರಾಗುತ್ತಾರೆ. ಸಿಂಹ ರಾಶಿಯವರು ಧನು ರಾಶಿಯವರಿಗೆ ಹೆಚ್ಚಿನ ಸಪೋರ್ಟ್ ನೀಡುತ್ತಾರೆ. ಒಬ್ಬರಿಗೊಬ್ಬರು ಎಲ್ಲ ವಿಷಯದಲ್ಲಿಯೂ ಸಪೋರ್ಟ್ ಮಾಡುತ್ತಾರೆ. ಇವರು ಪರ್ಫೆಕ್ಟ್ ಕಪಲ್ ಆಗಿರುತ್ತಾರೆ. 

ದುಡ್ಡು ಬೇಕಂದ್ರೆ ಜೇಬಲ್ಲಿ ಇವನ್ನ ಇಡ್ಬೇಡಿ...

ಮೇಷ ಮತ್ತು ಕುಂಭ: ಸಾಹಸಿಪ್ರವೃತ್ತಿಯುಳ್ಳ ಇವರಿಬ್ಬರೂ ಪ್ರೀತಿಯಲ್ಲಿ ಬಿದ್ದರೆ ತುಂಬಾ ರೊಮ್ಯಾಂಟಿಕ್ ಆಗಿರುತ್ತಾರೆ. ಅಪಾಯಕಾರಿ ಜಾಗಕ್ಕೆ ಪ್ರಯಣಿಸಲು ಇವರಿಗಿಷ್ಟ. ಸೋತರು ಪ್ರಯತ್ನಿಸುವುದೂ ಈ ಎರಡು ರಾಶಿಯವರ ಸ್ವಭಾವ. ಒಬ್ಬರಿಗೊಬ್ಬರು ತುಂಬಾ ಪ್ರೀತಿಯಿಂದ ಇರುತ್ತಾರೆ. 

ಕನ್ಯಾ ಮತ್ತು ಮಕರ: ಕನ್ಯಾ ರಾಶಿಯವರಿಗೆ ಮಕರ ರಾಶಿಯವರು ಬೆಸ್ಟ್ ಸಂಗಾತಿಯಾಗುತ್ತಾರೆ. ಒಬ್ಬರಿಗೊಬ್ಬರು ತುಂಬಾ ನಂಬಿಕಸ್ಥರಾಗಿರುತ್ತಾರೆ. ಆದುದರಿಂದ ಇವರ ಸಂಬಂಧ ತುಂಬಾನೇ ಸ್ಟ್ರಾಂಗ್ ಆಗಿರುತ್ತದೆ. 

ಧನ ಲಾಭಕ್ಕೆ ಇರಲಿ ಈ ವಸ್ತುಗಳು ಮನೆಯಲ್ಲಿರಲಿ...