Asianet Suvarna News Asianet Suvarna News

ಹಣಕಾಸಿನ ಸಂಬಂಧ ಎಚ್ಚರ : ಮತ್ತೊಂದು ರಾಶಿಗೆ ಬಂಪರ್ - ವಾರ ಭವಿಷ್ಯ

ವಾರ ಭವಿಷ್ಯ, ಯಾವ ರಾಶಿಗೆ ಯಾವ ಫಲ, ಹೇಗಿದೆ ಈ ವಾರದ ಭವಿಷ್ಯ 

Weekly Horcsope 13 October 2019
Author
Bengaluru, First Published Oct 13, 2019, 7:17 AM IST


ಹಣಕಾಸಿನ ಸಂಬಂಧ ಎಚ್ಚರ : ಮತ್ತೊಂದು ರಾಶಿಗೆ ಬಂಪರ್ - ವಾರ ಭವಿಷ್ಯ

ಮೇಷ
ಕೆಲಸದಲ್ಲಿ ಆಲಸಿಗಳಾಗದಿರಿ. ಸಂಕಷ್ಟ ಬಂದಾಗ
ವೆಂಕಟರಮಣನನ್ನು ನೆನೆಯದೆ ಮೊದಲೇ
ಅದಕ್ಕೆ ತಯಾರಿ ಮಾಡಿಕೊಳ್ಳುವುದು
ಒಳ್ಳೆಯದು. ಹಣಕಾಸಿನ ವ್ಯವಹಾರದಲ್ಲಿ ಎಚ್ಚರ ಇರಲಿ.
ಈ ವಾರ ಖರ್ಚು ವೆಚ್ಚಗಳು ಹೆಚ್ಚಾಗೇ ಇರಲಿದೆ. ಆದಷ್ಟು
ಹಿಡಿತವಿದ್ದರೆ ಒಳ್ಳೆಯದು. ದೂರ ಪ್ರಯಾಣ ಸಾಧ್ಯತೆ.

ವೃಷಭ
ಕಳೆದ ವಾರದ ಪ್ರವಾಸದಿಂದ ಆಯಾಸ
ಹೆಚ್ಚಾಗಿಯೇ ಇದೆ. ಊಟ, ತಿಂಡಿ, ನಿದ್ರೆ ಸರಿ
ಇಲ್ಲದ ಕಾರಣ ಈ ವಾರ ನಿಮಗೆ ರೆಸ್ಟ್‌ನ
ಅನಿವಾರ್ಯತೆ ಇದೆ. ನೆಗ್ಲೆಕ್ಟ್ ಮಾಡಿದಲ್ಲಿ ಆರೋಗ್ಯ
ಹದಗೆಡಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ
ಕಾಣಲಿದ್ದು, ಕ್ರೀಡೆಯಲ್ಲಿ ಆಸಕ್ತಿ ಹೆಚ್ಚಲಿದೆ.

ಮಿಥುನ
ವಾತಾವರಣ ಏರುಪೇರಿರುವುದರಿಂದ
ಆರೋಗ್ಯ ಹದಗೆಡುವ ಸಾಧ್ಯತೆ ಇದೆ.
ಮನೆಯಲ್ಲಿ ಶುಭ ಕಾರ್ಯಕ್ರಮ ನಡೆಯದೆ
ಬಹಳ ವರ್ಷಗಳಾಗಿದೆ. ನಿಮ್ಮ ಮುಂದಾಳತ್ವದಿಂದ ಈ
ಬಾರಿ ಸಾಧ್ಯವಾಗಲಿದೆ. ಇದರಿಂದ ಮನೆಯಲ್ಲಿ ಸಂತಸ
ನೆಲೆಸಲಿದೆ. ಮಕ್ಕಳ ವಿಚಾರದಲ್ಲಿ ಎಚ್ಚರಿಕೆ ಇರಲಿ.

ಕಟಕ
ಬಹಳ ಜಿಪುಣತನ ಒಳ್ಳೆಯದಲ್ಲ. ಎಷ್ಟೇ
ಕೂಡಿಟ್ಟರೂ, ಕೊನೆಗೆ ಎಲ್ಲವನ್ನು ಇಲ್ಲಿಯೇ
ಬಿಟ್ಟು ಹೋಗುವ ಕಾಲ ಬಂದೇಬರುತ್ತೆ. ಮಕ್ಕಳ
ಓದಿನ ವಿಚಾರದಲ್ಲಿ ಅವರಿಗೆ ಗೊಂದಲ ಇರಬಹುದು. ಈ
ಸಮಯದಲ್ಲಿ ನಿಮ್ಮ ಅಗತ್ಯವಿದ್ದು, ಅವರೊಂದಿಗಿದ್ದು
ಸಮಸ್ಯೆ ನಿವಾರಿಸಿ. ವಾರಾಂತ್ಯದಲ್ಲಿ ಸಿಹಿ ಸುದ್ದಿ ಕೇಳುವಿರಿ.

ಸಿಂಹ
ಮಾತಿನಲ್ಲಿ ಹಿಡಿತವಿರಲಿ. ಒಂದು ಮಾತು
ಆಡುವಾಗ ಸಾವಿರ ಬಾರಿ ಯೋಚಿಸಿ ಎಚ್ಚರಿಕೆ
ಯ ಹೆಜ್ಜೆ ಇಟ್ಟರೆ ಒಳಿತು. ಇಲ್ಲವೇ ನಿಮ್ಮ ಕೆಲಸ
ಕ್ಕೆ ನೀವೇ ಕಂಟಕ ತಂದುಕೊಂಡಂತೆ. ನಿಮ್ಮ ನೇರ ನುಡಿ
ಯೇ ನಿಮಗೆ ಮುಳುವಾಗಬಹುದು. ಆದಷ್ಟು ಶಾಂತ
ವಾಗಿರಲು ಪ್ರಯತ್ನಿಸಿ. ಧ್ಯಾನ ಮಾಡಿ, ಪುಸ್ತಕ ಓದಿ.

ಕನ್ಯಾ
ಧಾರ್ಮಿಕ ಕ್ಷೇತ್ರಗಳಿಗೆ ಕುಟುಂಬ ಸಮೇತ ಈ
ವಾರ ಭೇಟಿ ನೀಡುವಿರಿ. ಮಕ್ಕಳ
ವಿದ್ಯಾಭ್ಯಾಸದಲ್ಲಿ ಏರಿಳಿತ ಉಂಟಾಗಲಿದ್ದು,
ವಾರಾಂತ್ಯದಲ್ಲಿ ಸರಿಹೋಗಲಿದೆ. ಹೊಸ ಸ್ನೇಹಿತರ
ಪರಿಚಯದಿಂದ ಅವರ ಸಲಹೆ ಸೂಚನೆಯಿಂದಾಗಿ ನಿಮ್ಮ
ಕೆಲಸಗಳಲ್ಲಿ ಒಂದಷ್ಟು ಬದಲಾವಣೆ ಸಾಧ್ಯತೆ.

ತುಲಾ
ಕಲೆಯನ್ನು ನಮ್ಮಲ್ಲೇ ಹುದುಗಿಸಿ ಇಟ್ಟುಕೊ
ಳ್ಳುವ ಬದಲು ಅದರ ಅನಾವರಣ ಮಾಡಿದಾಗ
ಇನ್ನೊಬ್ಬರಿಗೂ ಸ್ಫೂರ್ತಿ ತುಂಬಲು ಸಾಧ್ಯ.
ಆಸಕ್ತಿ, ಶ್ರದ್ಧೆ ಇದ್ದಲ್ಲಿ ಈ ಎಲ್ಲವೂ ಸಾಧ್ಯ. ಅದು ನಿಮ್ಮಲ್ಲಿ
ದ್ದು ದೃಢ ಮನಸ್ಸು ಮಾಡಿದರೆ ಫಲಿಸುತ್ತೆ. ಗೌರವಕ್ಕೂ
ಪಾತ್ರರಾಗುವಿರಿ. ವಾರಾಂತ್ಯದಲ್ಲಿ ಕಹಿ ಸುದ್ದಿ ಕೇಳುವಿರಿ.

ವೃಶ್ಚಿಕ
ಮನುಷ್ಯ ತಪ್ಪು ಮಾಡಿದಾಗ ಅದನ್ನು ತಿದ್ದುವ
ಕೆಲಸ ಹಿರಿಯರಿಂದ ಆಗಬೇಕು. ಅದನ್ನು
ತಿದ್ದುಕೊಂಡು ಮುನ್ನಡೆಯಬೇಕು.
ಅಂದುಕೊಂಡ ಕೆಲಸ ಕಾರ್ಯಗಳು ಈ ವಾರ
ಸುಗಮವಾಗಿ ನೆರವೇರಲಿದೆ. ಗುರುತು ಪರಿಚಯ
ಇಲ್ಲದವರ ಜೊತೆ ಹಣಕಾಸಿನ ವ್ಯವಹಾರ ಬೇಡ.

ಧನಸ್ಸು
ಎಲ್ಲವೂ ಸರಿ ಹೋಗುತ್ತಿರುವ ನಿಮ್ಮ
ಜೀವನದಲ್ಲಿ ಈ ವಾರ ಕಹಿ ಸುದ್ದಿ ಕೇಳುವಿರಿ.
ನಿಮ್ಮ ಕ್ರಿಯಾಶೀಲ ಚಟುವಟಿಕೆಗಳಿಗೆ
ಮರಳುವಿರಿ. ಸೇವಾ ಮನೋಭಾವ ನಿಮ್ಮಲ್ಲಿದ್ದು ಈ ವಾರ
ತೃಪ್ತಿ ಭಾವನೆ ಮೂಡಲಿದೆ. ದೂರ ಪ್ರಯಾಣ ಸಾಧ್ಯತೆ.

ದಸರಾ ಬಗ್ಗೆ ನೀವು ತಿಳಿದಿರಬೇಕಾದ 5 ಇಂಟರೆಸ್ಟಿಂಗ್ ವಿಷಯಗಳು

ಮಕರ
ಓದುವ ಅಥವಾ ಉದ್ಯೋಗ ವಿಚಾರದಲ್ಲಿ
ಸ್ನೇಹಿತರಿಂದ ಸೂಕ್ತ ಸಲಹೆ ಪಡೆದುಕೊಳ್ಳುವಿರಿ.
ಕೆಲಸದಲ್ಲಿ ಒತ್ತಡ ಹೆಚ್ಚಲಿದ್ದು, ಆರೋಗ್ಯದಲ್ಲಿ
ಏರುಪೇರು. ಮಹಿಳೆಯರು ಉಳಿತಾಯದ ವಿಚಾರದಲ್ಲಿ
ಈ ವಾರ ಎಲ್ಲರ ಮೆಚ್ಚುಗೆ ಪಡೆದುಕೊಳ್ಳಲಿದ್ದಾರೆ. 

ಕುಂಭ
ಕುಟುಂಬಕ್ಕೆ ಸಂಬಂಧಿಸಿದ ಕಲಹಕ್ಕೆ ಮುಕ್ತಿ
ಸಿಗಲಿದೆ. ಉದ್ಯೋಗದಲ್ಲಿ ಪ್ರಗತಿ ಕಾಣಲಿದ್ದೀರಿ.
ಕ್ರಿಯಾಶೀಲ ವ್ಯಕ್ತಿಯಾದ ನೀವು ಹೊಸತನವನ್ನು
ಹುಡುಕುವಿರಿ ಹಾಗೂ ಅದರಲ್ಲಿ ಯಶಸ್ಸೂ ಗಳಿಸುವಿರಿ.
ಹಿಗ್ಗದೆ ಕುಗ್ಗದೆ ನಿಮ್ಮ ಕೆಲಸ ನೀವು ಮಾಡಿದ್ದಲ್ಲಿ ಮನಸ್ಸಿಗೆ
ನೆಮ್ಮದಿ, ಸಂತೋಷ ಹೊಂದುವಿರಿ. 

ಜಾತಕದಲ್ಲಿ ನೀಚ ಭಂಗ ರಾಜಯೋಗ ಅಂದ್ರೆ ಏನು..?...

ಮೀನ
ಸತತ ಸೋಲಿನಿಂದ ಗೆಲುವು ಕಂಡ ನಿಮಗೆ
ಒಂದು ಕಡೆ ಸಂತೋಷವಾದರೂ, ಮತ್ತೊಂದು
ಕಡೆ ಸಂಕಷ್ಟ ಎದುರಾಗಲಿದೆ. ಗಟ್ಟಿ ಮನಸ್ಸಿನಿಂದ
ಎಲ್ಲವನ್ನು ಎದುರಿಸುವಿರಿ. ಇದರಿಂದ ಸೂಕ್ತ ರೀತಿಯಲ್ಲಿ
ಹೊರಬರುವಿರಿ. ಬಂಧುಗಳ ಆಗಮನ ಸಾಧ್ಯತೆ.

Follow Us:
Download App:
  • android
  • ios