ದೇಶಾದ್ಯಂತ ಇದೀಗ ನೀರಿನಲ್ಲಿ ಅರಿಶಿಣ ಹಾಕಿ ರೀಲ್ಸ್​ ಮಾಡುವ ಟ್ರೆಂಡ್​ ಹೆಚ್ಚಾಗುತ್ತಿದೆ. ಇದು ವಿನಾಶಕಾಲೇ ವಿಪರೀತ ಬುದ್ಧಿ ಆಗ್ತಿದ್ಯಾ? ರೀಲ್ಸ್​ ಮಾಡುವವರಿಗೆ ಅಪಾಯ ಏನು ಎಂದು ಖ್ಯಾತ ಜ್ಯೋತಿಷಿ ಹೇಳಿದ್ದಾರೆ ಕೇಳಿ! 

ಯಾವುದಾದರೂ ಹಾಡು, ರೀಲ್ಸ್​, ಡಾನ್ಸ್​ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್​ ಆಗೋದು ಮಾಮೂಲೇ. ಯಾರೋ ಮಾಡಿದ್ದನ್ನು ನೋಡಿ ಇನ್ನೊಬ್ಬರು ಮಾಡೋದು, ಅದನ್ನು ನೋಡಿ ಮತ್ತೊಬ್ಬರು, ಮಗದೊಬ್ಬರು... ಹೀಗೆ ಕೆಲವು ರೀಲ್ಸ್​ಗಳು ಟ್ರೆಂಡ್​ ಆಗುತ್ತವೆ. ಇದೇ ರೀತಿ ರೀಲ್ಸ್​ನಲ್ಲಿಯೇ ಹುಚ್ಚಾಟ ಹೆಚ್ಚಾದಾಗ ಅದು ಮಾನಸಿಕ ರೋಗಕ್ಕೂ ಕಾರಣವಾಗುತ್ತದೆ ಎಂದು ಇದಾಗಲೇ ಖ್ಯಾತ ಮಾನಸಿಕ ತಜ್ಞರು ಕೂಡ ಹೇಳಿದ್ದಾರೆ. ಹಾಕಿದ ರೀಲ್ಸ್​, ವಿಡಿಯೋಗಳು ಹೆಚ್ಚಿಗೆ ವ್ಯೂವ್ಸ್​ ತಂದಿಲ್ಲ ಎಂದರೆ ಖಿನ್ನತೆಗೆ ಜಾರುವುದು, ಇನ್ನಷ್ಟು ವ್ಯೂವ್ಸ್​ಗಾಗಿ ಇನ್ನೇನೋ ಹುಚ್ಚಾಟ ಮಾಡುವುದು, ಪ್ರಾಣವನ್ನೇ ಅಪಾಯಕ್ಕೆ ಒಡ್ಡುವುದು ಇಲ್ಲವೇ ಅಶ್ಲೀಲತೆಯ ಪರಮಾವಧಿಯನ್ನು ಮೀರುವುದು... ಹೀಗೆ ಏನೇನೋ ಮಾಡಿ ಕೊನೆಗೆ ಮಾನಸಿಕ ರೋಗಿಗಳಾಗುವುದು ನಡೆಯುತ್ತಲೇ ಇವೆ ಎನ್ನುತ್ತಾರೆ ಅವರು.

ಅದೇ ರೀತಿ ಈಗ ಇನ್ನೊಂದು ಟ್ರೆಂಡ್​ಶುರುವಾಗಿದೆ. ಅದೇನೆಂದರೆ, ರಾತ್ರಿ ಅಥವಾ ಕತ್ತಲೆಯಲ್ಲಿ ಬಾಟಲಿಯಲ್ಲಿ ನೀರು ಹ ಹಾಕಿ ಅದಕ್ಕೆ ಅರಿಶಿಣ ಬೆರೆಸುವ ರೀಲ್ಸ್​ಗಳು. ಇದನ್ನು ಬಹುತೇಕ ಮಂದಿ ಮಾಡುತ್ತಿದ್ದಾರೆ. ಅದರಲ್ಲಿಯೂ ಹೆಚ್ಚು ಯುವತಿಯರೇ ಆಗಿದ್ದಾರೆ. ಮೊಬೈಲ್​ ಲೈಟ್​ನಲ್ಲಿ ಬಾಟಲಿಯಲ್ಲಿ ಅರಿಶಿಣ ಹಾಕಿ ನೋಡುವುದು ಅಷ್ಟೇ. ಕೆಲವೊಮ್ಮೆ ಯಾವುದು ಯಾಕೆ ಟ್ರೆಂಡ್ ಆಗುತ್ತದೆ ಎಂದು ಹೇಳುವುದೇ ಕಷ್ಟ. ಏನೂ ಇರದಿದ್ದರೂ ಅದು ಹೆಚ್ಚೆಚ್ಚು ಜನರು ಮಾಡಿದ್ದಾರೆ ಎನ್ನುವ ಕಾರಣಕ್ಕೆ ತಾವೂ ಮಾಡೋಣ ಎನ್ನಿಸಿ, ಮತ್ತಷ್ಟು ಮಂದಿ ಮಾಡುತ್ತಿದ್ದಾರೆ. ಆದರೆ, ಬೇರೆ ರೀಲ್ಸ್​ಗಳು ಏನೇ ಇರಲಿ. ಆದರೆ ಈ ಅರಿಶಿಣ ನೀರಿನ ಟ್ರೆಂಡ್​ ಮಾತ್ರ ಭಾರಿ ಅಪಾಯವನ್ನು ತಂದೊಡ್ಡುತ್ತದೆ ಎಂದಿದ್ದಾರೆ ಖ್ಯಾತ ಜ್ಯೋತಿಷಿ ಅರುಣ್ ಕುಮಾರ್ ವ್ಯಾಸ್.

ಅವರು ಹೇಳಿರುವ ಪ್ರಕಾರ, ಇದು ಸಾಮಾನ್ಯ ಪ್ರಕ್ರಿಯೆ ಅಲ್ಲ. ತಾಂತ್ರಿಕ ಆಚರಣೆಯಾಗಿದೆ. ಇದು ತುಂಬಾ ಅಪಾಯಕಾರಿ. ನೀರಿನಲ್ಲಿ ಅರಿಶಿಣ ಹಾಕುವ ಕ್ರಮವನ್ನು ಬ್ಲ್ಯಾಕ್​ ಮ್ಯಾಜಿಕ್​ ಸಂದರ್ಭದಲ್ಲಿ ಬಳಸಲಾಗುತ್ತದೆ. ಅರಿಯದೇ ಈ ರೀತಿ ರೀಲ್ಸ್​ ಮಾಡಿದರೆ, ಅಂಥವರು ತಮಗೆ ತಾವೇ ತೊಂದರೆಯನ್ನು ಆಹ್ವಾನಿಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ದಯವಿಟ್ಟು ಇದನ್ನು ಅಪ್ಪಿತಪ್ಪಿಯೂ ಪ್ರಯತ್ನಿಸಬೇಡಿ. ಇದರಿಂದ ನಿಮ್ಮ ಮನೆಯಲ್ಲಿ ಎಂದು ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶಿಸಲು ಅವಕಾಶ ನೀಡುವುದಲ್ಲದೆ, ಈ ಕ್ರಿಯೆಯು ದೆವ್ವಗಳನ್ನು ಆಹ್ವಾನಿಸಿದಂತೆ ಎಚ್ಚರಿಸಿದ್ದಾರೆ. ದೆವ್ವ, ಭೂತ, ಪ್ರೇತಗಳನ್ನು ನಂಬಿ-ಬಿಡಿ. ಆದರೆ ನಕಾರಾತ್ಮಕ ಶಕ್ತಿಯೊಂದು ಇದೆ ಎನ್ನುವುದಂತೂ ಸುಳ್ಳಲ್ಲವಲ್ಲ. ಇಂಥ ಕ್ರಿಯೆಯಿಂದ ನಿಮ್ಮ ಜೀವನವನ್ನು ನೀವೇ ನಕಾರಾತ್ಮಕತೆಗೆ ತಳ್ಳಿಕೊಂಡಂತೆ ಎಂದಿದ್ದಾರೆ ಅವವರು.

ಅಷ್ಟೇ ಅಲ್ಲದೇ, ಜ್ಯೋತಿಷಿ ಅರುಣ್ ಕುಮಾರ್ ವ್ಯಾಸ್ ಅವರ ಪ್ರಕಾರ, ನೀವು ಈ ರೀತಿ ಮಾಡಿದರೆ ಅದು ನಿಮ್ಮ ಜಾತಕದ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಚಟುವಟಿಕೆಗಳು ಜನ್ಮ ಕುಂಡಲಿಯಲ್ಲಿ ಚಂದ್ರ ಮತ್ತು ಗುರು ಗ್ರಹಗಳನ್ನು ದುರ್ಬಲಗೊಳಿಸುವ ಸಾಧ್ಯತೆ ಇದೆ. ಇದರಿಂದಾಗಿ ನಿಮ್ಮ ಅದೃಷ್ಟದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದಿದ್ದಾರೆ. ಮಾತ್ರವಲ್ಲದೇ ಇದು ನಿಮ್ಮ ಮಾನಸಿಕ ಸ್ಥಿತಿಯನ್ನು ಹಾಳು ಮಾಡಬಹುದು ಎಂದಿರುವ ಅವರು, ಇದು ಸಂಪೂರ್ಣವಾಗಿ ಹಾನಿಕಾರಕ ಪ್ರಕ್ರಿಯೆಯಾಗಿದೆ. ನಿಮ್ಮ ಮನೆ, ಮನಸ್ಸು, ಭವಿಷ್ಯ ಎಲ್ಲದಕ್ಕೂ ವಿಪತ್ತು ತರಬಹುದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

View post on Instagram