ದೇವರ ಪೂಜೆ ಸಲ್ಲಿಸಿ ಸ್ವತಃ ತಾನೇ ದೇವರನಾದ ತಪಸ್ವಿ.!
- ಮಳೆ-ಬೆಳೆ ಬಗ್ಗೆ ನಿಖರ ಭವಿಷ್ಯ ನುಡಿಯೋ ಅಜ್ಜ, ಭಕ್ತರ ಹರಕೆ ಈಡೇರಿಸ್ತಾನೆ..!
- ಎಂಥವರನ್ನು ಚಕಿತಗೊಳಿಸುವ ಅಜ್ಜನ ಪವಾಡ..!
- ಪವಾಡ ಪುರುಷ ನಾಗಠಾಣದ ಗೂಳಪ್ಪ ಅಜ್ಜನ ಸಂಭ್ರಮದ ಜಾತ್ರೆ.
- ದೇವರ ಪೂಜೆ ಸಲ್ಲಿಸಿ ಸ್ವತಃ ತಾನೇ ದೇವರನಾದ ತಪಸ್ವಿಯ ವರದಿ ಇಲ್ಲಿದೆ!
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್..
ವಿಜಯಪುರ (ಜುಲೈ 29) : ಅಜ್ಜ ಆ ಊರಿನ ದೇವಸ್ಥಾನದ ಪಟ್ಟದ ಪೂಜಾರಿ. ದೇವರ ಪೂಜೆ ಮಾಡುತ್ತಲೇ ದೈವೀ ಶಕ್ತಿ ಪಡೆದು ಪವಾಡಗಳನ್ನು ಮಾಡುತ್ತಲೇ ದೇವರ ಸ್ಥಾನ ಪಡೆದರು. ಮುಂದೆ ಆ ಅಜ್ಜ ಲಿಂಗೈಕ್ಯರಾದರು. ಭಕ್ತರು ಆ ಅಜ್ಜನವರ ಮೇಲಿನ ಭಕ್ತಿಯಿಂದ ಜಾತ್ರೆಯನ್ನು ಕಳೆದ ಹಲವು ವರ್ಷಗಳಿಂದ ಜಾತಿ ಮತ ಬೇಧವಿಲ್ಲದೇ ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ದೇವರ ಪೂಜಿಸಿ ದೇವರಾದ ಪವಾಡ ಪುರುಷ..!
ಬಸವನಾಡು(Basavanadu) ವಿಜಯಪುರ(Vijayapura) ಜಿಲ್ಲೆ ಹೇಳಿ ಕೇಳಿ ಶರಣರ, ಮಹಾತ್ಮರ ಹಾಗೂ ಪವಾಡ ಪುರುಷರ ನೆಲೆ ನಾಡು. ವಿಜಯಪುರ ಜಿಲ್ಲೆಯ ನಾಗಠಾಣ(NagaThana) ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಒಬ್ಬ ಪವಾಡಪುರುಷರ ಜಾತ್ರೆ ಆಚರಿಸಲಾಗುತ್ತಿದೆ. ಜಾತ್ರೆಯ ಹಿನ್ನೆಲೆ ನೊಡೊದಾದ್ರೆ ಪವಾಡಗಳನ್ನು ಮಾಡಿದ್ದ ಮಹಾ ಪುರುಷ ರೊಬ್ಬರನ್ನು ಆರಾಧಿಸುವದೇ ಈ ಜಾತ್ರೆಯ ವಿಶೇಷ. ನಾಗಠಾಣ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನ(Bheeralingeshwar Temple)ಕ್ಕೆ ಪಟ್ಟದ ಪೂಜಾರಿಯಾಗಿ ಗೂಳಪ್ಪ(Goolappa) ಎನ್ನುವವರನ್ನು ನೇಮಿಸಲಾಗಿತ್ತು. ಗೂಳಪ್ಪ ಸುದೀರ್ಘ42 ವರ್ಷಗಳ ಕಾಲ ಬೀರಲಿಂಗೇಶ್ವರ ಪೂಜೆ ಮಾಡುತ್ತಾ ಬೀರಲಿಂಗೇಶ್ವರ ಅನುಗ್ರಹಕ್ಕೆ ಪಾತ್ರರಾಗಿ ಪವಾಡಗಳನ್ನು ಮಾಡೋ ಮೂಲಕ ಸ್ವತಃ ತಾವೇ ದೇವರು ಎನಿಸಿಕೊಂಡಿದ್ದರು..
ದೇವರಿಗಾಗಿ ದೇವರಿಂದಲೇ ಹುಡುಕಾಟ! ಹುತ್ತದಲ್ಲಿ ಸಿಕ್ತು ಪುರಾತನ ವಿಗ್ರಹ!
ಎಂಥವರನ್ನು ಚಕಿತಗೊಳಿಸುವ ಅಜ್ಜನ ಪವಾಡ..!
1968 ರಲ್ಲಿ ಭಾರಿ ಮಳೆಯಾಗಿತ್ತು ಆಗ ನಾಗಠಾಣ ಗ್ರಾಮದ ಸುತ್ತಲೂ ಹಳ್ಳ ತುಂಬಿತ್ತು. ದೀಪಾವಳಿ(Deepawali) ಸಮಯದಲ್ಲಿ ಬೀರಲಿಂಗೇಶ್ವರ ಜಾತ್ರೆ ನಡೆಯುವುದು ವಾಡಿಕೆ. ತುಂಬಿದ ಹಳ್ಳದಲ್ಲಿ ಹಾಯ್ದು ಹೋಗಲು ಆಗುವದಿಲ್ಲ ಎಂದು ಗ್ರಾಮಸ್ಥರು ಹೇಳಿದಾಗ ಗೂಳಪ್ಪ ಇವರು ತುಂಬಿದ ಹಳ್ಳದ ವಿರುದ್ದ ಬೀರಲಿಂಗೇಶ್ವರ ಚೌಕಿ ಹೊತ್ತು ಕೊಂಡು ಹಳ್ಳದ ವಿರುದ್ದ ನಡೆದಾಗ ಇಡೀ ಹಳ್ಳ ಶಾಂತವಾಗಿ ಬೀರಲಿಂಗೇಶ್ವರ ಜಾತ್ರೆ ನಡೆಯಲು ಅನುವು ಮಾಡಿಕೊಟ್ಟಿತಂತೆ. ಹೀಗೆ ಹತ್ತು ಹಲವು ಪವಾಡಗಳನ್ನು ಮಾಡಿದ ಗೂಳಪ್ಪ ಮುತ್ಯಾ 8-8-2002 ರಲ್ಲಿ ಲಿಂಗೈಕ್ಯರಾದರು. ಅಂದಿನಿಂದ ಇಂದಿನವರೆಗೂ ಜಾತ್ರೆಯನ್ನು ನಾಗಠಾಣ ಗ್ರಾಮಸ್ಥರು ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ನಾಗರ ಪಂಚಮಿಯಂದು ಅಜ್ಜನ ಸಡಗರದ ಜಾತ್ರೆ..!
ನಾಗರ ಅಮಾವಾಸ್ಯೆ(Nagara amavasye) ದಿನದಂದು ಪವಾಡ ಪುರುಷ ಗೂಳಪ್ಪ ಮುತ್ಯಾ ಅವರ ಜಾತ್ರೆಯು ಸಡಗರ ಸಂಭ್ರಮದಿಂದ ಜರುಗಿತು. ಡೊಳ್ಳಿನ ವಾಲಗದೊಂದಿಗೆ ಭೀರಸಿದ್ದೇಶ್ವರ, ಕಗ್ಗೊಡದ ತಿಪರಾಯ ದೇವರ, ಲಾಯಮ್ಮ ದೇವಿ, ತಿಡಗುಂದಿಯ ಭೀರಲಿಂಗೇಶ್ವರ ದೇವರ, ಮಾಳಿಂಗರಾಯ ದೇವರ ಪಲ್ಲಕ್ಕಿಗಳು ಭಕ್ತರ ಜಯ ಘೋಷಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಂಚರಿಸಿ ಗಂಗಾ ಪೂಜೆ ನೆರವೇರಿಸಲಾಯಿತು.ನಂತರ ಬಜಾರದ ನಡುಕಟ್ಟೆಯ ಮೇಲೆ ಎಲ್ಲ ಪಲ್ಲಕ್ಕಿಗಳನ್ನಿರಿಸಲಾಯಿತು.
ಹರಕೆ ಕಟ್ಟುವ ಭಕ್ತರು, ಬೇಡಿಕೆ ಇಡೇರಿಸುವ ಅಜ್ಜ!
ಜಾತ್ರೆ ಬರುವ ಮಹಿಳೆಯರು, ತರುಣರು, ಮದುವೆಯಾಗಿ ಮಕ್ಕಳೆ ಆಗದಿರುವವರು, ಅನಿರುಧ್ಯೋಗಿಗಳು ಇಲ್ಲಿಗೆ ಬಂದು ಹರಕೆ ಕಟ್ಟಕೊಳ್ತಾರೆ.. ತನ್ಮ ಇಚ್ಛೆಗಳು ಈಡೇರಿದರೆ ಸ್ಥಾನಕ್ಕೆ ಬಂದು ಹರಕೆ ತೀರಿಸುವುದಾಗಿ ಬೇಡಿಕೊಳ್ತಾರೆ.. ಬಳಿಕ ಒಂದೇ ವರ್ಷದೊಳಗೆ ಹರಕೆ ಈಡೇರುತ್ತೆ ಎನ್ನುವ ನಂಬಿಕೆ ಇದೆ..
ಸರ್ಪ ರಕ್ಷಣೆಯಲ್ಲಿದ್ದ ತ್ರಿಮೂರ್ತಿ ವಿಗ್ರಹ 200 ವರ್ಷಗಳ ನಂತರ ಪತ್ತೆ!
ಅಜ್ಜನ ದೇಗುಲಕ್ಕೆ ಬರುವ ಅಸಂಖ್ಯಾತ ಭಕ್ತರು:
ಹಿರಿಯರು, ಮಹಿಳೆಯರು, ಮಕ್ಕಳಾದಿಯಾ ಅಲ್ಲಿಗೆ ಬಂದು ನೈವೇದ್ಯ ಸಲ್ಲಿಸಿ, ಕಾಯಿ ಕರ್ಪುರ ಸಲ್ಲಿಸುವದು ಸಾಮಾನ್ಯ ದೃಶ್ಯವಾಗಿತ್ತು. ಎಲ್ಲ ಭಕ್ತರಿಗೆ ದರ್ಶನ ಭಾಗ್ಯ ಸಿಕ್ಕಿತ್ತಲ್ಲದೇ ಅಲ್ಲಿ ಬಳಗಾನೂರ,ಸಾರವಾಡ ಗ್ರಾಮದ ಯುವಕರು ಗ್ರಾಮೀಣ ಕಲೆಗಳನ್ನು ಪ್ರದರ್ಶಿಸಿ ಜನಮನ ಗೆದ್ದರು. ಇದೇ ಸಂದರ್ಭದಲ್ಲಿ ಭಕ್ತರು ತಮ್ಮ ಹರಕೆಗಳನ್ನು ತೀರಿಸುವರು. ಎಲ್ಲ ಧರ್ಮಿಯರು ಒಂದಾಗಿ ಈ ಜಾತ್ರೆಯಲ್ಲಿ ಪಾಲ್ಗೊಳ್ಳುವದು ಗ್ರಾಮದ ವಿಶೇಷವಾಗತ್ತು. ಗೊಂಬೆ ಕುಣಿತ,ಕರಡಿ ಮಜಲುದಂತಹ ಅನೇಕ ಪ್ರದರ್ಶನಗಳು ಜನರನ್ನು ಆಕರ್ಷಿಸಿದವು. ಭಾರ ಎತ್ತುವ ಸ್ಪರ್ಧೆ ಮೈನವಿರೇಳಿಸುವಂತೆ ನಡೆಯಿತು.ಅಪ್ಪಟ ಗ್ರಾಮೀಣ ಪರಂಪರೆಯನ್ನು ಬಿಂಬಿಸುವ ಈ ಜಾತ್ರೆಯು ಗೂಳಪ್ಪ ಮುತ್ಯಾ ಜಾತ್ರೆ ಎಂದೇ ಪ್ರಸಿದ್ಧವಾಗಿದೆ. ನಿರಂತರವಾಗಿ ವಿವಿಧ ತಂಡಗಳಿಂದ ಡೊಳ್ಳಿನ ಹಾಡಿಕೆಗಳು ನಡೆದು,ಜನರನ್ನು ತನ್ನತ್ತ ಸೆಳೆಯಿತು.
ಮಳೆ-ಬೆಳೆಯ ಭವಿಷ್ಯ ನುಡಿಯುವ ಪವಾಡ ಪುರುಷ.:
ಭಕ್ತರು ದೇವರಲ್ಲಿ ಮಳೆ-ಬೆಳೆಯ ಕುರಿತು ಹೇಳಿಕೆ ಕೇಳುವದು ಪ್ರತಿವರ್ಷದ ರೂಢಿಯಾಗಿದೆ. ಅನೇಕ ಪವಾಡಗಳನ್ನು ಮಾಡಿದ ಗೂಳಪ್ಪ ಮುತ್ಯಾ ಜನರ ಆರಾಧ್ಯ ದೇವರಾಗಿದ್ದಾರೆ. ಒಟ್ನಲ್ಲಿ ಗೂಳಪ್ಪ ಮುತ್ಯಾ ಬೇರೆ ಬೇರೆ ಗ್ರಾಮ,ಜಿಲ್ಲೆ, ರಾಜ್ಯಗಳಿಂದ ಭಕ್ತರು ಜಾತ್ರೆಗೆ ಆಗಮಿಸಿದ್ದರು ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವ ಈ ಜಾತ್ರೆಯು ಜನಮಾನಸದಲ್ಲಿ ಅಚ್ಚಳಿಯದೇ ಉಳಿಯಿತು. ಜಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಕೃತಾರ್ಥರಾದರು.