ದೇವರ ಮೂರ್ತಿಯಾದರೂ ಕೆಲವೊಂದನ್ನು ದರ್ಶನ ಮಾಡುವುದು ಅಶುಭ. ವಾಸ್ತು ಗ್ರಂಥದಲ್ಲಿ ಭಗವಂತನ ಮೂರ್ತಿಯ ದಿಕ್ಕು ಮತ್ತು ಸ್ಥಾನಕ್ಕೆ ಸಂಬಂಧಿಸಿದಂತೆ ಕೆಲವೊಂದು ವಿಷಯಗಳನ್ನು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ನಿಯಮಗಳನ್ನು ಪಾಲಿಸದಿದ್ದರೆ, ದೋಷಗಳು ಕಾಣಿಸಿಕೊಳ್ಳುತ್ತವೆ. ಹಾಗಿದ್ದರೆ ಯಾವ ರೀತಿಯ ಮೂರ್ತಿಯ ದರ್ಶನ ಪಡೆಯಬಾರದು ನೋಡಿ... 


- ಭಗವಂತನ ಮೂರ್ತಿಯ ಬೆನ್ನು ನಮಗೆ ಮುಖವಾಗಿರಬಾರದು. ದೇವರ ಬೆನ್ನು ನೋಡುವುದು ಅಶುಭ ಎಂದು ಹೇಳಲಾಗುತ್ತದೆ. 
- ಪೂಜಾ ಸ್ಥಳದಲ್ಲಿ ಒಂದೇ ದೇವರ ಎರಡು ಮೂರ್ತಿಗಳನ್ನು ಇಡಬಾರದು. ಒಂದೇ ಮೂರ್ತಿಗಳು ಜೊತೆಯಾಗಿ ಅಥವಾ ಎದುರು ಬದುರು ಇರಬಾರದು. ಇಂತಹ ಮೂರ್ತಿಗಳ ದರ್ಶಿಸುವುದರಿಂದ ಜಗಳ ಹೆಚ್ಚುತ್ತದೆ. 
- ಭಾವನಾತ್ಮಕ ಬಾಂಧವ್ಯವಿದೆ ಎಂದರೂ ತುಂಡಾದ ಮೂರ್ತಿಯನ್ನು ಇಡಬೇಡಿ. ಇದು ಅಶುಭದ ಸಂಕೇತ. 
- ಸೌಮ್ಯ ಮುಖ ಭಾವ ಹೊಂದಿರುವ ಆಶೀರ್ವಾದ ಮಾಡುವ ಮೂರ್ತಿಯನ್ನು ಪೂಜಿಸಬೇಕು. ಆದರೆ ರುದ್ರ ಅವತಾರ ಮತ್ತು ಚಂಚಲ ದೇವರ ಮೂರ್ತಿ ಪೂಜಿಸಬಾರದು. ಇದರಿಂದ ನಕಾರಾತ್ಮಕ ಶಕ್ತಿ ಸಂಚಾರವಾಗುತ್ತದೆ. 
- ಯುದ್ಧ ಮಾಡುತ್ತಿರುವ ದೇವರ ಫೋಟೋ ಅಥವಾ ಸಂಹಾರ ಮಾಡುತ್ತಿರುವ ಫೋಟೋವನ್ನು ಪೂಜಿಸಬೇಡಿ. ಇದರಿಂದ ದುಃಖ ಹೆಚ್ಚುತ್ತದೆ.

ವಾಸ್ತುವಿನಲ್ಲಿ ಸಮುದ್ರ ಉಪ್ಪಿನ ಮಹತ್ವ
ವಾಸ್ತು ದೋಷ: ದಿಕ್ಕು ಬದಲಿಸಿದ ದಿನೇಶ್ ಗುಂಡೂರಾವ್
ಸಚಿವ ರೇವಣ್ಣರಿಗೂ ವಾಸ್ತುವಿನದೇ ಚಿಂತೆ
ಉದ್ಯೋಗ ಜೀವನ ಉಜ್ವಲವಾಗಲು ವಾಸ್ತು ಟಿಪ್ಸ್
ಸ್ವಸ್ತಿಕ ಚಿಹ್ನೆಗಳಿದ್ದರೆ ಮನೆಗೆ ಶುಭ