Asianet Suvarna News Asianet Suvarna News

ವಾಸ್ತು ಶಾಸ್ತ್ರದಲ್ಲಿ ಸಮುದ್ರ ಉಪ್ಪಿನ

ಮನೆಯಲ್ಲಿ ಶಾಂತಿ, ಸಮೃದ್ಧಿ, ನೆಮ್ಮದಿ ನೆಲೆಸಲು ವಾಸ್ತು ಶಾಸ್ತ್ರದಲ್ಲಿ ಹಲವಾರು ಟಿಪ್ಸ್‌ಗಳಿವೆ. ಅದರಲ್ಲಿಯೂ ಉಪ್ಪು ಮನೆಯಲ್ಲಿನ ನೆಗಟಿವ್ ಎನರ್ಜಿಯನ್ನು ಕಡಿಮೆ ಮಾಡುತ್ತದೆ. ಅದರಲ್ಲಿಯೂ ಸಮುದ್ದರ ಉಪ್ಪಿನಿಂದೇನು ಪ್ರಯೋಜನ?
Benefits of salt in daily life
Author
Bengaluru, First Published Jul 22, 2018, 1:42 PM IST
ವಾಸ್ತು ಶಾಸ್ತ್ರವು ಒಂದು ಪ್ರಾಚೀನ ವಿಜ್ಞಾನವಾಗಿದ್ದು, ಕಟ್ಟಡಗಳ ನಿರ್ಮಾಣದಲ್ಲಿ ಇದನ್ನು ಬಳಸಲಾಗುತ್ತದೆ. ವಾಸ್ತು ಶಾಸ್ತ್ರ ಮನೆಯಲ್ಲಿ ಸಂತೋಷ, ನೆಮ್ಮದಿ, ಸಂಪತ್ತು, ಶಾಂತಿ ವೃದ್ಧಿಯಾಗಲು ನೆರವಾಗುತ್ತದೆ, ಎಂಬ ನಂಬಿಕೆ ಭಾರತೀಯರಲ್ಲಿದೆ. ಈ ಶಾಸ್ತ್ರದಲ್ಲಿ ಸಮುದ್ರ ಉಪ್ಪು ಅಥವಾ ಕಲ್ಲುಪ್ಪಿಗೂ ತನ್ನದೇ ಆದ ಮಹತ್ವವಿದೆ. ರಾಸಾಯನಿಕವಾಗಿ ಸೋಡಿಯಂ ಕ್ಲೊರೈಡ್ ಎಂದು ಹೇಳುವ ಇದನ್ನು ಬಳಸುವುದು ಹೇಗೆ?
- ಸಮುದ್ರ ಉಪ್ಪನ್ನು ಕೈಯಲ್ಲಿ ತೆಗೆದುಕೊಂಡು ಎರಡು ಕೈಗಳನ್ನು ಗಟ್ಟಿಯಾಗಿ ಮುಚ್ಚಿ, ಸ್ವಲ್ಪ ಸಮಯದ ನಂತರ ಅದನ್ನು ವಾಷ್ ಬೇಸಿನ್‌ಗೆ ಬಿಸಾಡಿದರೆ ಖಿನ್ನತೆ, ಭಯದ ಸಮಸ್ಯೆ ದೂರವಾಗುತ್ತದೆ. 

- ಸಮುದ್ರದ ಉಪ್ಪನ್ನು ಒಂದು ಡಬ್ಬದಲ್ಲಿ ಹಾಕಿ ಮನೆಯ ವಿವಿಧ ಭಾಗಗಳಲ್ಲಿಟ್ಟರೆ ಮನೆಯ ವಾಸ್ತು ದೋಷ ನಿವಾರಣೆಯಾಗುತ್ತದೆ. 

- ಮನೆಯಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿದ್ದರೂ, ನೀರಿಗೆ ಸಮುದ್ರದ ಉಪ್ಪನ್ನು ಬೆರೆಸಿ ಹಾಕಿ, ನೆಲವನ್ನು ಚೆನ್ನಾಗಿ ತೊಳೆಯಬೇಕು. ಇದರಿಂದ ಮನೆಯಲ್ಲಿ ಅಡಗಿರುವ ನಕಾರಾತ್ಮಕ ಶಕ್ತಿ ಹೊರ ಹೋಗುತ್ತದೆ. 

- ಶುಕ್ರವಾರ ಉಪ್ಪನ್ನು ತಂದು ಅದೇ ದಿನ ಅದನ್ನು ಡಬ್ಬದಲ್ಲಿ ಹಾಕಿಟ್ಟರೆ ಅದರಿಂದ ಸಂಪತ್ತು ವೃದ್ಧಿಯಾಗುತ್ತದೆ ಹಾಗು ಸಾಲ ನಿವಾರಣೆಯಾಗುತ್ತದೆ. 

- ಸಮುದ್ರ ಉಪ್ಪನ್ನು ಒಂದು ಬಾಕ್ಸ್ ನಲ್ಲಿ ಹಾಕಿ ಅದನ್ನು ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡುವ ಕೋಣೆಯಲ್ಲಿಟ್ಟರೆ ಉತ್ತಮ ಶಕ್ತಿ ಮನೆಯನ್ನು ಆವರಿಸಿಕೊಳ್ಳುತ್ತದೆ. 

- ಸಮುದ್ರ ಉಪ್ಪನ್ನು ಮನೆಯಲ್ಲಿ ಬಳಸಿದರೆ, ಮನೆಗೆ ಶುಭವಾಗುತ್ತದೆ ಎಂದು ಹೇಳುತ್ತಾರೆ. 

 

Follow Us:
Download App:
  • android
  • ios