ಸ್ವಸ್ತಿಕ ಚಿಹ್ನೆ ಮನೆಯಲ್ಲಿದ್ದರೆ ಶುಭ

Swastik symbol for positive energy
Highlights

ಭಾರತೀಯ ಮನೆಗಳ ಪ್ರವೇಶ ದ್ವಾರದಲ್ಲಿ ಸ್ವಸ್ತಿಕ ಚಿಹ್ನೆ ಸಾಮಾನ್ಯವಾಗಿರುತ್ತದೆ. ಅನಾದಿ ಕಾಲದಿಂದಲೂ ಬಳಸುತ್ತಿರುವ ಈ ಚಿಹ್ನೆಗೆ ಹಿಂದೂ ಸಂಪ್ರದಾಯದಲ್ಲಿ ವಿಶೇಷ ಮಹತ್ವವಿದೆ. ಗಣೇಶನನ್ನು ಪ್ರತಿನಿಧಿಸುವ ಈ ಚಿಹ್ನೆಯ ವಿಶೇಷವೇನು? ವಾಸ್ತು ಶಾಸ್ತ್ರ ಏನು ಹೇಳುತ್ತದೆ?

ಭಾರತದಲ್ಲಿ ಅನಾದಿ ಕಾಲದಿಂದಲೂ ಬಳಸುತ್ತಿರುವ ಒಂದು ಶುಭ ಚಿಹ್ನೆ ಎಂದರೆ ಅದು ಸ್ವಸ್ತಿಕ. ಭಾರತದಲ್ಲಿ ಹುಟ್ಟಿದಂಥ ಈ ಚಿಹ್ನೆಗೆ 6000 ವರ್ಷದ ಇತಿಹಾಸವಿದೆ. ಇದು ಮನೆಯಲ್ಲಿ ಇದ್ದರೆ ಮಾಡುವ ಕೆಲಸಗಳು ಶುಭಪ್ರದವಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾದರೆ ಸ್ವಸ್ತಿಕದಿಂದ ಮನೆಗೆ ಯಾವ ರೀತಿ ಒಳಿತಾಗುತ್ತದೆ?

- ಸ್ವಸ್ತಿಕ ಸಂಪತ್ತು ಮತ್ತು ಸಮೃದ್ಧಿಯ ಸಂಕೇತ. ಈ ಚಿಹ್ನೆಯ ಎಡ ಬದಿ ಗಣೇಶ ಇರುವನೆಂದು ಸೂಚಿಸುತ್ತದೆ. ಸ್ವಸ್ತಿಕ ಮನೆಯಲ್ಲಿದ್ದರೆ  ಸಂಪತ್ತು ಮತ್ತು ಸಮೃದ್ಧಿ ಮನೆಯಲ್ಲಿ ಸದಾ ತುಂಬಿರುತ್ತದೆ ಎಂದರ್ಥ. 
- ನಕಾರಾತ್ಮಕತೆಯನ್ನು ದೂರ ಮಾಡುತ್ತದೆ. ಸ್ವಸ್ತಿಕ ಚಿಹ್ನೆ ಮನೆಯಲ್ಲಿ ಇರುವುದು ಶುಭ ಎಂದು  ವಾಸ್ತು ಶಾಸ್ತ್ರವೂ ಹೇಳುತ್ತದೆ. ಇದು ಮನೆಯಲ್ಲಿನ ನೆಗೆಟಿವ್ ಎನರ್ಜಿಯನ್ನು ಹೊರ ಹಾಕಿ, ಪಾಲಿಟಿವ್ ಎನರ್ಜಿಯನ್ನು ಹೆಚ್ಚಿಸುತ್ತದೆ. 
- ದುಷ್ಟ  ಶಕ್ತಿ ದಮನ: ಸ್ವಸ್ತಿಕ ಚಿಹ್ನೆಯನ್ನು ಮನೆ ಮುಂಭಾಗಿಲಿನಲ್ಲಿ ಹಾಕಿದರೆ, ದುಷ್ಟ ಶಕ್ತಿಗಳು ಮನೆಯೊಳಗೆ ಬರೋದಿಲ್ಲ ಎನ್ನಲಾಗುತ್ತದೆ. 
- ಸ್ವಸ್ತಿಕ್ ಲಾಂಛನದ ಮೇಲೆ ದೇವರ ತೀರ್ಥ ಗಂಗಾ ಜಲ ಮತ್ತು ಹಸುವಿನ ಗಂಜಲವನ್ನು ಚಿಮುಕಿಸುತ್ತಿದ್ದರೆ ಅದರ ಶಕ್ತಿ ಹೆಚ್ಚಾಗುತ್ತದೆ.
- ಸ್ವಸ್ತಿಕ್ ಲಾಂಛನವನ್ನು ಅಳವಡಿಸಿದ ನಂತರ ಧೂಳು ಬೀಳದೆ ಇರುವ ಹಾಗೆ ಆಗಾಗ ಒರೆಸುತ್ತಿರಬೇಕು.
- ಸ್ವಸ್ತಿಕ್ ಲಾಂಛನವು ಹಿತ್ತಾಳೆ ಅಥವಾ ಪಂಚಲೋಹದಿಂದ ಮಾಡಿದ್ದರೆ ಒಳ್ಳೆಯದು.
- ಸ್ವಸ್ತಿಕ್ ಲಾಂಛನವು ಮನೆಯಲ್ಲಿ ಸುಖ, ಸಂತೋಷ, ಶಾಂತಿ, ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ.
- ಸ್ವಸ್ತಿಕ್ ಲಾಂಛನವು ಮನೆಯ ಸುತ್ತಲಿನ ಜಾಗವನ್ನು ದುಷ್ಟ ಶಕ್ತಿಗಳಿಂದ ರಕ್ಷಿಸುತ್ತದೆ.
- ಮನೆಯ ಗೇಟ್ ಹಾಗೂ ಕಾಂಪೌಂಡ್ ಗೋಡೆ ಮೇಲೆ ಸ್ವಸ್ತಿಕ್ ಲಾಂಛನವನ್ನು ಹಾಕಬೇಕು

ಉದ್ಯೋಗಸ್ಥರು ಯಾವ ರೀತಿ ಸ್ಲಿಪ್ಪರ್ ಹಾಕಿಕೊಳ್ಳಬೇಕು?
ವಾಸ್ತು ಪ್ರಕಾರ ಪೂಜಿಸಿದ ಅರ್ಚಕರಿಗೆ ರೇವಣ್ಣ ಕ್ಲಾಸ್
ವಾಸ್ತುಗಾಗಿ ಮರ ಬಲಿ ಪಡೆದ ಅರ್ಚಕ
ಮನೆಯಲ್ಲಿ ಅಕ್ವೇರಿಯಂ ಎಲ್ಲಿದ್ದರೆ ಶುಭ?
ಮಲಗುವ ಕೋಣೆಯಲ್ಲಿ ದೇವರಿಡಬಹುದೇ? 

 

loader