Asianet Suvarna News Asianet Suvarna News

ಈ ರಾಶಿಯವರಿಗೆ 2024 ಅದೃಷ್ಟವೋ ಅದೃಷ್ಟ; ಹೊಸ ಅವಕಾಶಗಳು ಸಿಗೋದು ಪಕ್ಕಾ!

2024ರ ಹೊಸ ಸಂವತ್ಸರದಲ್ಲಿ ಕೆಲವು ರಾಶಿಗಳಿಗೆ ಭಾರೀ ಅದೃಷ್ಟ ಕಾದಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 4 ರಾಶಿಗಳ ಜನರು ಈ ಬಾರಿ ಉತ್ತಮ ಅದೃಷ್ಟಶಾಲಿಗಳಾಗಿದ್ದಾರೆ. ಬಯಸಿದ್ದೆಲ್ಲ ಕೈಗೂಡಿ, ನಿಮ್ಮ ಪ್ರತಿಭೆಗಳಿಗೆ ಪ್ರೋತ್ಸಾಹ ದೊರೆಯುವ ಜೀವನದ ಉತ್ತಮ ಸಮಯ ಇದಾಗಿದೆ. 
 

zodiac signs have luck on 2024 and new opportunites would come for them sum
Author
First Published Apr 25, 2024, 5:46 PM IST | Last Updated Apr 25, 2024, 5:46 PM IST

ಹೊಸ ವರ್ಷದಲ್ಲಿ ಜೀವನ ಹೇಗಿರುತ್ತದೆ ಎನ್ನುವ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಹೊಸ ಸಂವತ್ಸರದಲ್ಲಿ ಈ ಬ್ರಹ್ಮಾಂಡ ನಮಗೇನು ಕಾದಿರಿಸಿದೆ ಎನ್ನುವ ಬಗ್ಗೆ ತಿಳಿದುಕೊಳ್ಳುವ ಆಸೆಯೂ ಸಾಮಾನ್ಯ. 2024ರ ಆರಂಭ ನಿಮ್ಮ ಜೀವನದಲ್ಲಿ ಹೇಗಾಗಿದೆಯೋ ಗೊತ್ತಿಲ್ಲ. ಅದರ ಏನನ್ನಿಸಿದೆಯೋ ಗೊತ್ತಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2024ನೇ ವರ್ಷದಲ್ಲಿ ನಾಲ್ಕು ರಾಶಿಗಳ ಜನರಿಗೆ ಹೆಚ್ಚು ಅದೃಷ್ಟ ಕಾದಿದೆ. ಈ ಬಾರಿಯ ಭವಿಷ್ಯದ ಬಗ್ಗೆ ಕೊಂಚ ಮುನ್ಸೂಚನೆ ಪಡೆಯೋಣ ಎನ್ನುವ ಕುತೂಹಲಿಗಳಿಗೆ ಈ ಸುದ್ದಿಯಿಂದ ಖುಷಿಯಾಗಬಹುದು. ಈ ನಾಲ್ಕರಲ್ಲಿ ನಿಮ್ಮ ರಾಶಿಯಿದ್ದರಂತೂ ಖುಷಿ ಗ್ಯಾರೆಂಟಿ, ನಿಮ್ಮ ರಾಶಿ ಇಲ್ಲವಾದರೂ ಬೇಸರ ಬೇಡ. ಏಕೆಂದರೆ, ಬ್ರಹ್ಮಾಂಡ್ ಶಕ್ತಿ, ಎನರ್ಜಿಗಳ ಪ್ರಭಾವ ಎಲ್ಲರ ಮೇಲೆಯೂ ಯಾವಾಗಲೂ ಇದ್ದೇ ಇರುತ್ತದೆ. ಅದನ್ನು ಸರಿಯಾಗಿ ನಮ್ಮೆಡೆಗೆ ತಿರುಗಿಸಿಕೊಳ್ಳುವ ಕಲೆಯನ್ನು ನಾವು ಅಭ್ಯಾಸ ಮಾಡಿಕೊಳ್ಳಬೇಕು ಅಷ್ಟೆ. ಈ ಸಂವತ್ಸರದಲ್ಲಿ ಹೆಚ್ಚು ಅದೃಷ್ಟವಂತ ರಾಶಿಗಳೆಂದು ನಾಲ್ಕು ರಾಶಿಗಳನ್ನು ಗುರುತಿಸಲಾಗಿದೆ. ಹೀಗಾಗಿ, ಬ್ರಹ್ಮಾಂಡದ ಕೃಪೆ ನಿಮ್ಮ ಮೇಲೆ ಈ ಬಾರಿ ಹೆಚ್ಚಾಗಿದೆ. ಅದನ್ನು ಬಳಸಿಕೊಂಡು ಹೆಚ್ಚು ಪ್ರಗತಿಯತ್ತ ಸಾಗುವುದರ ಬಗ್ಗೆ ಗಮನ ಹರಿಸಿ. 

ಮೇಷ (Aries)
ಅದೃಷ್ಟವಂತ (Lucky) ರಾಶಿಗಳ ಪೈಕಿ ಮುಂಚೂಣಿಯಲ್ಲಿರುವ ರಾಶಿ ಎಂದರೆ ಮೇಷ. ಈ ರಾಶಿಯ (Sign) ಜನ ಸಹಜವಾಗಿ ಧೈರ್ಯವಂತರು (Courage) ಹಾಗೂ ತಮ್ಮ ಬದ್ಧತೆಗೆ ಹೆಸರುವಾಸಿ ಆಗಿದ್ದಾರೆ. ಮುನ್ನುಗ್ಗುವ ಸ್ವಭಾವದ ಮೇಷ ರಾಶಿಯ ಜನ ತಮ್ಮ ಜೀವನದ ಪಥದಲ್ಲಿ ಎದುರಾಗುವ ಅವಕಾಶಗಳನ್ನು (Opportunity) ಬಹಳ ಚೆನ್ನಾಗಿ ಹಿಡಿದುಕೊಳ್ಳಬಲ್ಲರು. ವೃತ್ತಿ, ಸಂಬಂಧಗಳು, ಯಾವುದೇ ಖಾಸಗಿ ವಿಚಾರಗಳಲ್ಲಿ ಈ ಬಾರಿ ಅವರಿಗೆ ಅದೃಷ್ಟ ಸಾಕಷ್ಟಿದೆ. ಬ್ರಹ್ಮಾಂಡ್ ಅವರಿಗೆ ಫೇವರ್ (Favour) ಆಗಿದೆ. ಹೀಗಾಗಿ, ಮೇಷ ರಾಶಿಯ ಜನರು ಹೊಸ ವಿಚಾರಗಳಿಗೆ ಸಿದ್ಧರಾಗಬಹುದು, ಯಶಸ್ಸು (Success) ನಿಮಗೆ ಈ ಬಾರಿ ಕಟ್ಟಿಟ್ಟ ಬುತ್ತಿ. ಹಿಂದೇಟು ಹಾಕಬೇಡಿ.

ಬೆಕ್ಕು ನೋಡಿದ್ರೆ ಅಪ ಶಕುನ, ಬೆಳ್ಳಂ ಬೆಳಗ್ಗೆ ನವಿಲು ನೋಡಿದ್ರೆ ಶುಭವೋ, ಅಶುಭವೋ?

ಸಿಂಹ (Leo)
ಅದೃಷ್ಟವಂತ ರಾಶಿಗಳ ಪೈಕಿ 2ನೇ ಸ್ಥಾನದಲ್ಲಿರುವುದು ಸಿಂಹ ರಾಶಿ. ಇವರ ವ್ಯಕ್ತಿತ್ವದಲ್ಲೇ ಅಪರಿಮಿತ ಎನರ್ಜಿ (Energy) ಯಿದೆ, ಛಾತಿಯಿದೆ. 2024ನೇ ವರ್ಷದುದ್ದಕ್ಕೂ ಇವರು ಕೇಂದ್ರಬಿಂದುವಾಗಿರುತ್ತಾರೆ. ಅವರ ಪ್ರತಿಭೆಗಳಿಗೆ (Talent) ಮನ್ನಣೆ ದೊರೆಯುತ್ತದೆ. ಹೊಸ ಸಂಪರ್ಕಗಳನ್ನು ಮಾಡಿಕೊಳ್ಳುತ್ತಾರೆ. ಹೊಸ ಸಾಹಸಗಳಿಗೆ ಸಾಕ್ಷಿಯಾಗುತ್ತಾರೆ. ಸಿಂಹ ರಾಶಿಯವರು ಈ ಬಾರಿ ಯಶಸ್ಸಿನ ಅಲೆಯಲ್ಲಿ ತೇಲುತ್ತಾರೆ ಎಂದರೆ ಉತ್ಪ್ರೇಕ್ಷೆ ಎನಿಸುವುದಿಲ್ಲ. ನೀವು ಸಿಂಹ ರಾಶಿಯಾಗಿದ್ದರೆ ಅವಕಾಶಗಳನ್ನು ಬಳಸಿಕೊಳ್ಳಲು ಹಿಂದೇಟು ಹಾಕಬೇಡಿ. ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದು ಬೆಳಗುತ್ತದೆ. 

ಧನು (Sagittarius)
ಅಪರಿಮಿತತೆ ಮತ್ತು ಅನಂತ ಸಾಹಸಕ್ಕೆ (Adventure) ಧನು ರಾಶಿಯ ಜನ ಈ ಬಾರಿ ಸಿದ್ಧರಾಗಬೇಕು. ಈ ರಾಶಿಯವರ ಆಶಾವಾದಿ (Optimistic) ದೃಷ್ಟಿಕೋನ ಹಾಗೂ ಸಾಹಸಮಯ ಸ್ಪೂರ್ತಿಯಿಂದಾಗಿ ಈ ಬಾರಿ ಹೊಸ ಅನುಭವಗಳು ಹಾಗೂ ಅವಕಾಶಗಳನ್ನು ಪಡೆಯುತ್ತಾರೆ. ದೂರದ ಸ್ಥಳಗಳಿಗೆ ಪ್ರವಾಸ ಗೈಯ್ಯುವಲ್ಲಿ, ಉನ್ನತ ಶಿಕ್ಷಣದಲ್ಲಿ ಅಥವಾ ಇತರ ಯಾವುದೇ ರೀತಿ ತಮ್ಮ ವಿಸ್ತರಣೆಯಲ್ಲಿ ಅವರಿಗೆ ಗೆಲುವು ಖಚಿತ. 2024ರಲ್ಲಿ ಅವರು ತಮ್ಮ ಪೂರ್ಣ ಜೀವನವನ್ನು ಅನುಭವಿಸುತ್ತಾರೆ. ಧನು ರಾಶಿಯ ಜನರು ನೀವಾಗಿದ್ದರೆ, ನಿಮ್ಮ ಯಶಸ್ಸಿನ ಪ್ರಯಾಣಕ್ಕೆ ಸಜ್ಜಾಗಿ, ಬ್ರಹ್ಮಾಂಡ (Universe) ನಿಮಗೆ ನೀಡುತ್ತಿರುವ ಅವಕಾಶದ ಮೇಲೆ ನಂಬಿಕೆಯಿಟ್ಟು ನಿಮ್ಮದಾಗಿಸಿಕೊಳ್ಳಿ.

ಈ ದಿನಾಂಕದಲ್ಲಿ ಹುಟ್ಟಿದವರು ಜೋಕ್‌ ಮಾಡುವುದರಲ್ಲಿ ನಂಬರ್ ಒನ್, ಎಲ್ಲರಿಗೂ ಇವರೆಂದರೆ ಇಷ್ಟ

ಮೀನ (Pisces)
ಮೀನ ರಾಶಿಯ ಜನರು ಸಹ ಈ ಬಾರಿಯ ಅದೃಷ್ಟವಂತ ರಾಶಿಯ ಜನರಾಗಿದ್ದಾರೆ. ಅಂತಪ್ರಜ್ಞೆ (Intuition) ಹಾಗೂ ಕ್ರಿಯಾಶೀಲತೆಯ (Creativity) ಮೀನ ರಾಶಿಯ ಜನ  ಬಾರಿ ಹೆಚ್ಚು ಸ್ಫೂರ್ತಿ ಮತ್ತು ಅಪರಿಮಿತ ಪ್ರೇರಣೆಗೆ ಒಳಗಾಗುತ್ತಾರೆ. ಅವರಲ್ಲಿರುವ ಕಲಾತ್ಮಕ ಪ್ರತಿಭೆಗೆ ಮನ್ನಣೆ ದೊರೆಬಹುದು, ಆಧ್ಯಾತ್ಮಿಕ ಅಭ್ಯಾಸಗಳನ್ನು ಇನ್ನಷ್ಟು ಆಳವಾಗಿಸಲು ಸಾಧ್ಯವಾಗಬಹುದು. ಈ ಬಾರಿ ಮೀನ ರಾಶಿಯವರು ಸಂಪೂರ್ಣತೆಯ ಭಾವನೆಯಲ್ಲಿ ಮಿಂದೇಳುವುದು ಗ್ಯಾರೆಂಟಿ. ನಿಮ್ಮ ಅಂತಃಪ್ರಜ್ಞೆಯನ್ನು ನಂಬಿ ಮುಂದೆ ಸಾಗಿ, ನಿಮ್ಮ ಕಲ್ಪನೆಗಳು ವಿಜೃಂಭಿಸಲು ಅವಕಾಶ ನೀಡಿ.  
 

Latest Videos
Follow Us:
Download App:
  • android
  • ios