Asianet Suvarna News Asianet Suvarna News

ಉದ್ಯೋಗ ಜೀವನ ಉಜ್ವಲವಾಗಲು ವಾಸ್ತು ಟಿಪ್ಸ್

ವಾಸ್ತು ಪ್ರತಿಯೊಬ್ಬರ ಜೀವನದಲ್ಲಿ ಒಂದು ಮುಖ್ಯವಾದ ಪಾತ್ರ ವಹಿಸುತ್ತದೆ. ವಾಸ್ತು ಶಾಸ್ತ್ರ ಎಂಬುದು ಒಂದು ವಿಜ್ಞಾನವಾಗಿದ್ದು ಇದು ಅದೃಷ್ಟ, ಸಂತೋಷ, ಸಂಪತ್ತು ಹೆಚ್ಚಿಸುವಲ್ಲಿ ಸಹಕರಿಸುತ್ತದೆ. ಸರಿಯಾದ ವಾಸ್ತು ಮನೆ ಹಾಗೂ ಕಚೇರಿಯಲ್ಲಿ ಆರ್ಥಿಕತೆ ಹೆಚ್ಚುವಂತೆ ಮಾಡಿದರೆ, ಕೆಟ್ಟ ವಾಸ್ತು ಹಣದ ವ್ಯತ್ಯಯ ಉಂಟಾಗುವಂತೆ ಮಾಡುತ್ತದೆ. ಮನೆಯಲ್ಲಿ ಹಾಗೂ ಕಚೇರಿಯಲ್ಲಿ ಉತ್ತಮ ಲಾಭ ಬರಬೇಕಿದ್ದರೆ ಹಾಗು ಅದೃಷ್ಟ ಸಿಗಬೇಕೆಂದಿದ್ದರೆ ಇವಗಳನ್ನು ಪಾಲಿಸಿ....

Vastu tips for successful life

ಇರೋ ಪುಟ್ಟು ಮನೆಯಲ್ಲಿ ಅಡುಗೆ ಮನೆ ಇರಬೇಕು, ಕೋಣೆಯೊಂದು ಇರಬೇಕು, ಬಾತ್ ರೂಂ, ಟಾಯ್ಲೆಟ್ ಅಂತೂ ಇರಲೇ ಬೇಕು. ಆದರೂ ಇವಕ್ಕೂ ವಾಸ್ತು ಶಾಸ್ತ್ರದಲ್ಲಿ ಕೆಲವು ನಿಮಯಗಳಿವೆ. ಏನವು?

  • ಮನೆಯಲ್ಲಿ ಐದು ರಾಡ್‌ನ ಮೆಟಲ್ ವಿಂಡ್ ಚೈಮ್ ಇಟ್ಟರೆ ಪಾಸಿಟಿವ್ ಎನರ್ಜಿ ಮನೆಯೆಡೆಗೆ ಆಕರ್ಷಿತವಾಗುತ್ತದೆ. 
  • ಮನೆಯ ವಾಯುವ್ಯ ದಿಕ್ಕಿನಲ್ಲಿ ಮೆಟಲ್ ವಸ್ತು ಅಥವಾ ಕ್ರಿಸ್ಟಲ್ ಬಾಲ್ ಇಡಬೇಕು. ಇದರಿಂದ ದುಷ್ಟ ಶಕ್ತಿ ಮನೆ ಪ್ರವೇಶ ಮಾಡುವುದಿಲ್ಲ. 
  • ಆಗ್ನೇಯ ದಿಕ್ಕಿನಲ್ಲಿ ಕಾರಂಜಿ ಅಥವಾ ನೀರಿನ ಪಾಟ್ ಇರಿಸಿ. 
  • ಮನೆಯ ಆಗ್ನೇಯ ದಿಕ್ಕಿಗೆ ನೀಲಿ ಬಣ್ಣವನ್ನು ಹಚ್ಚಿ ಹಾಗೂ ಕನ್ನಡಿಯನ್ನು ಉತ್ತರ ಭಾಗದಲ್ಲಿ ಇಟ್ಟರೆ ಉತ್ತಮ. 
  • ಸರಿಯಾದ ಸಮಯಕ್ಕೆ ಪ್ರಮೋಷನ್ ಆಗಬೇಕಾದರೆ ಬೆಡ್ ರೂಮ್ ನೈಋತ್ಯ ದಿಕ್ಕಿನಲ್ಲಿ ಇಡಿ. 
  • ಮನೆಯ ಮುಂಬಾಗಿಲಿನ ಬಳಿ ಚಿನ್ನದ ನಾಣ್ಯಗಳನ್ನು ಹೊತ್ತ ಲಾಫಿಂಗ್ ಬುದ್ಧನ ಮೂರ್ತಿಯನ್ನು ಇರಿಸಿ. ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಭಾಗ್ಯ ನೆಲೆಸುವುದು. 
  • ಅಮೂಲ್ಯವಾದ ವಸ್ತುಗಳನ್ನು ಅಂದರೆ ಹಣ, ಚಿನ್ನ ಮೊದಲಾದ ವಸ್ತುಗಳನ್ನು ನೈಋತ್ಯ ದಿಕ್ಕಿನಲ್ಲಿ ಇಡಿ. ತಿಜೋರಿ ಬಾಗಿಲು ಉತ್ತರ ದಿಕ್ಕಿಗೆ ತೆರೆದುಕೊಳ್ಳುವಂತಿರಬೆಕು. 
Follow Us:
Download App:
  • android
  • ios