ವಾಸ್ತು ದೋಷ: ದಿಕ್ಕು ಬದಲಿಸಿದ ದಿನೇಶ್ ಗುಂಡೂರಾವ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 17, Jul 2018, 6:18 PM IST
KPCC President Changed Place for Vastu Dosha From His Chamber
Highlights

  • ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆದರೂ ಪರಮೇಶ್ವರ್ ಗೆ ಸಿಎಂ ಭಾಗ್ಯ ದೊರೆಯಲಿಲ್ಲ
  • ದಕ್ಷಿಣಕ್ಕೆ ಚೇರ್ ಹಾಕಿ ಉತ್ತರದ ಕಡೆ ಮುಖ ಮಾಡಿ ಕುಳಿತುಕೊಳ್ಳುತ್ತಿರುವ ದಿನೇಶ್ ಗುಂಡೂರಾವ್  

ಬೆಂಗಳೂರು[ಜು.17]: ಕೆಪಿಸಿಸಿ ನೂತನ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೂ ವಾಸ್ತು ದೋಷ ಶುರುವಾಗಿದೆ.

ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು 8 ವರ್ಷ ಕೆಪಿಸಿಸಿ ಅಧ್ಯಕ್ಷರಾದರೂ ಸಿಎಂ ಆಗಲಿಲ್ಲ. ಸಿಎಂ ಸ್ಥಾನ ಸಿಗದಿರಲು ಪರಮೇಶ್ವರ್ ಗೆ ವಾಸ್ತು ದೋಷವೇ ಕಾರಣವಂತೆ. ಅಲ್ಲದೆ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆದರೂ ಪರಮೇಶ್ವರ್ ಗೆ ಸಿಎಂ ಭಾಗ್ಯ ದೊರೆಯಲಿಲ್ಲ. ಈ ಕಾರಣದಿಂದ ದಿನೇಶ್ ಗುಂಡೂರಾವ್ ಅವರಿಗೂ ವಾಸ್ತು ಸಮಸ್ಯೆ ಶುರುವಾಗಿದೆ.

ಪರಮೇಶ್ವರ್ ಅವರು ಕೆಪಿಸಿಸಿ ಅದ್ಯಕ್ಷರಾಗಿದ್ದಾಗ ಪಶ್ಚಿಮಕ್ಕೆ ಮುಖ ಮಾಡಿ ಕುಳಿತುಕೊಳ್ಳುತ್ತಿದ್ದರು. ಈ ಎಲ್ಲ ಕಾರಣ ಗಮನಿಸಿದ ದಿನೇಶ್ ಗುಂಡೂರಾವ್ ಅವರು ಪಶ್ಚಿಮದ ಬದಲು ದಕ್ಷಿಣಕ್ಕೆ ಚೇರ್ ಹಾಕಿ ಉತ್ತರದ ಕಡೆ ಮುಖ ಮಾಡಿ ಕುಳಿತುಕೊಳ್ಳುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದವರು ಮುಂದೆ ಪಕ್ಷ ಅಧಿಕಾರಕ್ಕೆ ಬಂದರೆ ಸಿಎಂ ಆಗ್ತಾರೆ ಎಂಬ ವಾಡಿಕೆಯಿದೆ. ಇವೆಲ್ಲ ಕಾರಣದಿಂದ ಸ್ಥಳ ಬದಲಾಯಿಸಲಾಗಿದೆ ಎಂಬ ಗುಸುಗುಸು ಕಚೇರಿಯಲ್ಲಿ ಶುರುವಾಗಿದೆ.

 

loader