ಮಳೆಗಾಲಕ್ಕೆ ಒಂದಷ್ಟು ಸಿಂಪಲ್ ಗಾರ್ಡನಿಂಗ್ ಟಿಪ್ಸ್
ಮಳೆಗಾಲ ಬಂತೆಂದರೆ ಸಾಕು. ತಂಪಾದ ಹೆಚ್ಚು ತೇವಾಂಶ, ಬಿಸಿಲಿನ ತಾಪವಿಲ್ಲದ ಹವಾಗುಣ ಗಿಡ-ಮರಗಳಿಗೆ ಹೇಳಿ ಮಾಡಿಸಿದಂತೆ ಇರುತ್ತದೆ. ಸಸ್ಯ ಪ್ರೇಮಿಗಳಿಗೆ ತಮ್ಮ ಮನೆಯ ಮುಂದಿನ ಗಾರ್ಡನ್‌ನಲ್ಲಿ ಇನ್ನೂ ಹೆಚ್ಚು ಹೆಚ್ಚು ಗಿಡ ಮರಗಳನ್ನೂ ನೆಡೆಲು ಸರಿಯಾದ ಕಾಲ. ಮಳೆಗಾಲದ ಸಮಯದಲ್ಲಿ ನಿಮ್ಮ ಹೂದೋಟದ ಕಾಳಜಿಗಾಗಿ ಕೆಲವು ಮುಖ್ಯ ಅಂಶಗಳನ್ನು ಪಾಲಿಸಿದರೆ ಸಾಕು ವರ್ಷವಿಡೀ ಸುಂದರವಾದ ಗಾರ್ಡನ್ ಅನ್ನು ಅಸ್ವಾದಿಸಬಹದು.
ಮರ ಗಿಡಗಳನ್ನು ನೆಡಲು ಅತ್ಯಂತ ಉತ್ತಮವಾದ ಕಾಲ ಮಾನ್ಸೂನ್ .
ಮಳೆಯಿಂದ ಹೊಸದಾಗಿ ನೆಟ್ಟ ಗಿಡಗಳು ಸುಲಭವಾಗಿ ಚಿಗರುತ್ತವೆ.
ಆದರೆ ನೀರು ಸರಿಯಾಗಿ ಬೇರಿನ ಮೂಲವನ್ನು ತಲುಪಿ, ಬೇರುಗಳನ್ನು ಸಂಪೂರ್ಣವಾಗಿ ಹೈಡ್ರೇಟ್ ಮಾಡುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಗಿಡ-ಮರಗಳ ಬುಡಗಳಲ್ಲಿ ನೀರು ನಿಲ್ಲದ ಹಾಗೆ ನೋಡಿಕೊಳ್ಳಿ. ಹರಿಯದೆ ನಿಂತ ನೀರಿನಿಂದ ಗಿಡಗಳು ಕೊಳೆಯುತ್ತವೆ.
ಪಾಟ್‌ಗಳಲ್ಲಿರುವ ಗಿಡಗಳಿಗೆ ಸರಿಯಾದ ಪ್ರಮಾಣದಲ್ಲಿ ಹೊಸ ಮಣ್ಣು ಗೊಬ್ಬರ ಹಾಕಿ ರೀ-ಪಾಟ್ ಮಾಡಿ.
ಹಾಗೆ ಜೀನಿಯಾ, ಚೆಂಡು ಹೂವು, ಕಾಕ್ಸ್ ಕುಂಬ್‌ಗಳ ಹೂವಿನ ಜೀಜ ಹಾಕಲು ಮಳೆಗಾಲ ಅತಿಯಾಗಿ ಹೊಂದುವ ಸಮಯ. ಆದರೆ ಹೂವಿನ ಬೀಜಗಳು ನೀರಿನಲ್ಲಿ ಕೊಚ್ಚಿಹೋಗದ ಹಾಗೆ ಕಾಳಜಿ ವಹಿಸಬೇಕಾಗುತ್ತದೆ.
ಗುಲಾಬಿ, ದಾಸವಾಳ, ಮಲ್ಲಿಗೆ, ಡೇರೆ, ಲಿಲ್ಲಿ, ಗ್ಲಾಡಿಯೊಲಸ್‌ಗಳು ಮಳೆಗಾಲಕ್ಕೆ ಹೇಳಿ ಮಾಡಿಸಿದ ಹೂವಿನ ಗಿಡಗಳು
ಇನ್ನೂ ಮಾವು, ಸೇಬು, ಕಿತ್ತಳೆ, ಮುಸುಂಬಿ, ನಿಂಬೆ ಮುಂತಾದ ಹಣ್ಣಿನ ಗಿಡಗಳನ್ನೂ ನೆಡಬಹುದು.
ನಿಮ್ಮ ಗಾರ್ಡನ್‌ನಲ್ಲಿ ತರಕಾರಿ ಬೆಳೆಯಲು ಇಷ್ಟ ಪಡುವವರು ಸೌತೆಕಾಯಿ, ಬೀನ್ಸ್, ಮೂಲಂಗಿಳಂತಹ ತರಕಾರಿಗಳನ್ನು ಬೆಳೆಯಲು ಆರಿಸಿಕೊಳ್ಳಬಹುದು.
ದಾಸವಾಳ, ಗುಲಾಬಿ, ಮಲ್ಲಿಗೆ ಮುತಾಂದ ಗಿಡಗಳ ಕೊಂಬೆಗಳನ್ನು ಕತ್ತರಿಸಿ, ಟ್ರೀಮ್ ಮಾಡಿ.
ಮನೆಯ ಒಳಗೆ ಇರಿಸಿದ ಪಾಠ್‌ಗಳನ್ನು ಮಳೆಯಲ್ಲಿ ಸ್ಪಲ್ಲ ಕಾಲ ಇಟ್ಟರೆ. ಗಿಡಗಳ ಬೆಳವಣಿಗೆ ಹೆಚ್ಚು ಉಪಯುಕ್ತ. ಇದರಿಂದ ಗಿಡಗಳು ಸ್ವಾಭಾವಿಕವಾಗಿ ನೀರು ಪಡೆಯುತ್ತವೆ.
ಮರ-ಗಿಡಗಳ ಬುಡದ ಮಣ್ಣನ್ನು ಕೊಚ್ಚಿ, ಗೊಬ್ಬರ ನೀಡಿ. ನಂತರ ಅದರ ಮೇಲೆ ಮಣ್ಣು ಹರಡಿ. ಇಲ್ಲವೇ ಮರ ಗಿಡಗಳ ಹಳೆಯ ಎಲೆಗಳನ್ನು ಹಾಕಿ ಮಣ್ಣು ಮುಚ್ಚಿ. ಇದು ಗಿಡಗಳಿಗೆ ಉತ್ತಮ ಪೋಷಕಾಂಶವನ್ನು ಒದಗಿಸಿ ಬೆಳವಣಿಗೆ ಸಹಾಯವಾಗುತ್ತದೆ.
ಈ ಸರಳವಾದ ಟಿಪ್ಸ್ ಪಾಲಿಸಿ ಈ ಮಳೆಗಾಲದಲ್ಲಿ ಗಾರ್ಡನಿಂಗ್ ಅನ್ನೂ ಎಂಜಾಯ್ ಮಾಡಿ. ಮನೆಯ ಸೌಂದರ್ಯದ ಜೊತೆಗೆ ಮನಸ್ಸಿಗೂ ತುಂಬಾ ಮುದ ನೀಡುತ್ತದೆ ಈ ಹವ್ಯಾಸ.