Asianet Suvarna News Asianet Suvarna News

ಮನೆಯಲ್ಲಿರುವ ಈ ವಸ್ತುಗಳನ್ನು ಕೂಡಲೇ ಸ್ವಚ್ಛಗೊಳಿಸಿ!

ನಮ್ಮ ನೆಗ್ಲಿಜನ್ಸ್‌ನಿಂದ ಹುಟ್ಟಿಕೊಳ್ಳುವ ಸೈಲೆಂಟ್ ಕಿಲ್ಲರ್‌ಗಳು ಮನೆಯಲ್ಲಿ ಹಲವಿವೆ. ಅವುಗಳ ಸ್ವಚ್ಛತೆ ನಮ್ಮ ಆದ್ಯತೆಯಾಗಬೇಕು. ಮನೆಯ ದಿನಬಳಕೆಯ ಹಲವಾರು ವಸ್ತುಗಳು ಬ್ಯಾಕ್ಟೀರಿಯಾಗಳ ಅಡಗುದಾಣ. ಅವು ಎಷ್ಟೊಂದು ಕೊಳಕಾಗಿದ್ದರೂ ಕಣ್ಣಿಗೆ ಕಾಣದಿರುವುದರಿಂದ ಸ್ವಚ್ಛತೆಯಿಂದ ದೂರಾಗಿ ಹಾಗೆ ಉಳಿದುಬಿಡುತ್ತವೆ. ಅವುಗಳಿಂದ ನಮಗೆ ಕಾಯಿಲೆಗಳು ಹರಡುತ್ತಿವೆ ಎಂಬ ಗುಟ್ಟನ್ನೂ ಬಿಟ್ಟುಕೊಡುವುದಿಲ್ಲ. ಇಂಥ ವಸ್ತುಗಳು ಯಾವುವು ತಿಳ್ಕೋಬೇಕಾ?

Things in your home you must clean right now
Author
Bangalore, First Published May 13, 2019, 10:24 AM IST

ಕಿಚನ್ ಸಿಂಕ್

ಅಡುಗೆ ಪಾತ್ರೆಗಳ ಎಲ್ಲ ಜಿಡ್ಡು, ಉಳಿಕೆ ಆಹಾರ ತಾಗಿ ತಾಗಿ ಕಿಚನ್ ಸಿಂಕ್ ಬ್ಯಾಕ್ಟೀರಿಯಾಗಳಿಗೆ ಬಾ ಬಾ ಎಂದು ಕರೆಯುತ್ತವೆ. ಹೀಗಾಗಿ, ಪ್ರತಿ ರಾತ್ರಿ ಸಿಂಕ್ ಸ್ವಚ್ಛಗೊಳಿಸುವುದು ಅಗತ್ಯ. 

ಮೇಕಪ್ ಬ್ರಶ್‌ಗಳು

ನಿಮ್ಮ ತ್ವಚೆಯನ್ನು ಇನ್ಫೆಕ್ಷನ್‌ನಿಂದ ದೂರ ಇಡಬೇಕೆಂದರೆ ಮೇಕಪ್ ಬ್ರಶ್‌ಗಳನ್ನು ವಾರಕ್ಕೊಮ್ಮೆಯಾದರೂ ಕ್ಲೀನ್ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.ಬಾಗಿಲ ಚಿಲಕಗಳು ದಿನಕ್ಕೆ ಹತ್ತು ಬಾರಿ ಹತ್ತು ಕೈಗಳು ಬಾಗಿಲುಗಳ ಚಿಲಕಗಳನ್ನು ಮುಟ್ಟುತ್ತಲೇ ಇರುತ್ತವೆ. ಹೀಗಾಗಿ, ಅವುಗಳ ಮೇಲೆ ಕೊಳಕು ಮತ್ತು ಕ್ರಿಮಿ ಜಮೆಯಾಗುತ್ತಲೇ ಹೋಗುತ್ತದೆ. ವಿನೆಗರ್ ಬಳಸಿ ದಿನಕ್ಕೊಮ್ಮೆ ಚಿಲಕಗಳನ್ನು ಒರೆಸಿ.

ದುಡ್ಡು ಬೇಕಂದ್ರೆ ಜೇಬಲ್ಲಿ ಇವನ್ನ ಇಡ್ಬೇಡಿ...

ರಿಮೋಟ್ ಕಂಟ್ರೋಲ್

ಮನೆಯಲ್ಲಿ ಪ್ರತಿನಿತ್ಯ ಎಲ್ಲರ ಕೈಯಿಂದ ಕೈಗೆ ಓಡಾಡುವ ವಸ್ತು ರಿಮೋಟ್ ಕಂಟ್ರೋಲ್. ಅವುಗಳಲ್ಲಿ ನಮ್ಮ ಕೈಯ್ಯ ಬೆವರು ಹಾಗೂ ಧೂಳು ಕುಳಿತು ಅದೆಷ್ಟು ಬ್ಯಾಕ್ಟೀರಿಯಾಗಳು ಮನೆ ಮಾಡಿರುತ್ತವೆಯೋ ದೇವರೇ ಬಲ್ಲ. ಅವುಗಳನ್ನು ಸ್ವಚ್ಛಗೊಳಿಸದಿದ್ದಲ್ಲಿ ಕಾಯಿಲೆಗಳು ನಿಮ್ಮನ್ನು ಅರಸಿಕೊಂಡು ಬಂದರೂ ಕಾರಣ ತಿಳಿಯದು. ತಕ್ಷಣವೇ ವೆಟ್ ವೈಪ್ಸ್ ಹಾಗೂ ಬಟ್ಟೆ ಬಳಸಿ ರಿಮೋಟ್ ಕಂಟ್ರೋಲ್ ಕ್ಲೀನ್ ಮಾಡಿ.

ಸೆಲ್ ಫೋನ್ಸ್

ಟಾಯ್ಲೆಟ್‌ನಿಂದ ಕಿಚನ್‌ವರೆಗೂ ಓಡಾಡುವ ಸೆಲ್ ಫೋನ್‌ಗಳು ಬ್ಯಾಕ್ಟೀರಿಯಾಗಳ ಫೇವರೇಟ್  ಜಾಗ ಎಂಬುದನ್ನು ಹಲವಾರು ಅಧ್ಯಯನಗಳು ಸಿದ್ಧಪಡಿಸಿವೆ. ಪ್ರತಿದಿನವೂ ತಪ್ಪಿಸದೆ ಫೋನ್ ಸ್ವಚ್ಛಗೊಳಿಸಿ.

ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಮಲಗೋ ದಿಕ್ಕು ಹೀಗಿರಲಿ...

ಸ್ಪಾಂಜ್‌ಗಳು

ಸ್ವಚ್ಛಗೊಳಿಸಲೆಂದೇ ಇರುವ ಸ್ಪಾಂಜ್‌ಗಳು ಬೇರೆಲ್ಲವನ್ನೂ ಸ್ವಚ್ಛ ಮಾಡಿ ಕೊಳೆಯನ್ನು ತಮ್ಮ ಮೈಗೆ ಅಂಟಿಸಿಕೊಳ್ಳುತ್ತವೆ. ಅವನ್ನು ಬಿಸಿನೀರಿನಲ್ಲಿ ಹಾಕಿ ಕ್ಲೀನ್ ಮಾಡಿ.

Follow Us:
Download App:
  • android
  • ios