ಶಿವಲಿಂಗವನ್ನು ಎಲ್ಲರೂ ಪೂಜಿಸುತ್ತಾರೆ. ಆದರೆ, ಎಲ್ಲಾದರೂ ದಿನದಿಂದ ದಿನಕ್ಕೆ ದೈತ್ಯ ಗಾತ್ರ ಹೊಂದುವ ಶಿವಲಿಂಗವನ್ನು ನೋಡಿದ್ದೀರಾ? ಹೌದು ಛತ್ತೀಸ್‌ಗಡದ ಗಾರಿಯಾಬ್ಯಾಂಡ್ ಜಿಲ್ಲೆಯ ಮರೌದ ಗ್ರಾಮದಲ್ಲಿ ಅಂಥದ್ದೊಂದು ಶಿವಲಿಂಗವಿದೆ. ಈ ಲಿಂಗ ವರ್ಷದಿಂದ ವರ್ಷಕ್ಕೂ ಬೆಳೆಯುತ್ತಿದೆ. 

ಈ ವಿಶೇಷ ಶಿವಲಿಂಗವನ್ನು ಯಾರೂ ಕೆತ್ತಿಲ್ಲ. ಬದಲಾಗಿ ನೈಸರ್ಗಿಕವಾಗಿ ಸೃಷ್ಟಿಯಾದ ಶಿವಲಿಂಗವಿದು. ಈ ಶಿವಲಿಂಗವನ್ನು ಭೂತೇಶ್ವರ ನಾಥ್ ಎನ್ನುತ್ತಾರೆ. ಪ್ರತಿ ವರ್ಷವೂ 6 ರಿಂದ 8 ಇಂಚು ಬೆಳೆಯುವುದು ಈ ಲಿಂಗದ ವಿಶೇಷತೆ. ಇದರಲ್ಲಿ ಯಾರ ಕೈವಾಡವೂ ಇಲ್ಲ. ಇದೊಂದು ಚಮತ್ಕಾರವೇ ಸರಿ. 

ರಾಕ್ಷಸಿ ಹಿಡಿಂಬಿಗೂ ಇದೆ ಮನಾಲಿಯಲ್ಲಿ ದೇವಸ್ಥಾನ!

ಹಿನ್ನೆಲೆ ಏನು?

ಈ ಶಿವಲಿಂಗದ ಹಿಂದೊಂದು ಕಥೆ ಇದೆ.  ಈ ಕಥೆಯಲ್ಲಿ ತಿಳಿಸಿದಂತೆ ನೂರು ವರ್ಷಗಳ ಹಿಂದೆ ಈ ಜಾಗದಲ್ಲಿ ಶೋಭಾ ಸಿಂಹ ಎಂಬುವವರು ತನ್ನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ. ಒಂದಿನ ಹೊಲದ ಬಳಿ ಕಾಡು ಪ್ರಾಣಿಯ ಶಬ್ದ ಕೇಳಿಸುತ್ತದೆ. ಹಳ್ಳಿ ಜನರೆಲ್ಲರೂ ಅದನ್ನು ಹುಡುಕಲು ಆರಂಭಿಸುತ್ತಾರೆ. ಆದರೆ ಆ ಪ್ರಾಣಿ ಸಿಗೋದೇ ಇಲ್ಲ. ಆದರೆ ಅಲ್ಲಿ ಒಂದು ಸಣ್ಣ ಶಿವಲಿಂಗ ಕಾಣಿಸುತ್ತದೆ. ಅದನ್ನು ನೋಡುತ್ತಿದ್ದಂತೆ ಜನರ ಮನಸ್ಸಿನಲ್ಲಿ ಭಕ್ತಿ ಭಾವ ಹುಟ್ಟುತ್ತದೆ.  ನಂತರ ಅದಕ್ಕೆ ಪೂಜೆ ಅರ್ಚನೆ ಮಾಡಲು ಆರಂಭಿಸುತ್ತಾರೆ. ಅಂದಿನಿಂದ ಇಂದಿನವರೆಗೆ ಇಲ್ಲಿನ ಶಿವ ಲಿಂಗ ಬೆಳೆಯುತ್ತಿದೆ.

ಧಾರ್ಮಿಕತೆ, ರಹಸ್ಯದ ಒಡಲು ಯಮುನೇತ್ರಿ ಯಾತ್ರೆ!

ಪುರಾಣದಲ್ಲಿಯೂ ಶಿವಲಿಂಗದ ಉಲ್ಲೇಖವಿದೆ. ಈ ಶಿವನನ್ನು ಭಕುರ ಮಹಾದೇವಾ ಎನ್ನುತ್ತಾರೆ. ಈ ದೇವಾಲಯದ ಬಗ್ಗೆ ದೇಶ ವಿದೇಶದಲ್ಲೂ ಪ್ರಸಿದ್ಧವಾಗಿದೆ. ಇದು ಕಾಡಿನ ಮಧ್ಯದಲ್ಲಿದ್ದರೂ ಶಿವನನ್ನು ನೋಡಲು ಜನರು ಸದಾ ಸಾಗರೋಪಾದಿಯಲ್ಲಿ ಸೇರಿರುತ್ತಾರೆ. ಈ ಅದ್ಭುತವನ್ನು ನೋಡಲು ನೀವೂ ಛತ್ತೀಸ್‌ಗಡಕ್ಕೆ ತೆರಳಬಹುದು.