ವೈವಾಹಿಕ ಸಮಸ್ಯೆಯೇ? ಹಾಗಾದ್ರೆ ಮನೇಲಿ ಇರಲಿ ಈ ಪೋಟೋ...

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 10, Jan 2019, 3:20 PM IST
Radha krishna photo solves miss understanding in Living Room
Highlights

ಗಂಡ-ಹೆಂಡತಿ ಎಂದ ಮೇಲೆ ಜಗಳ ಸಹಜ. ಆದರೆ, ಜಗಳವೇ ಜೀವನವಾಗಬಾರದು. ಮನೆಯಲ್ಲಿ ಜಗಳವಾಡುತ್ತಿದ್ದರೆ ಮನಸ್ಸಿನ ನೆಮ್ಮದಿ ಮರೆಯಾಗುತ್ತದೆ. ಜಗಳ ನಿಲ್ಲಿಸಲು ಇಲ್ಲಿವೆ ವಾಸ್ತು ಟಿಪ್ಸ್...

ಪತಿ -ಪತ್ನಿ ನಡುವೆ ಅನ್ಯೋನ್ಯತೆ ಇಲ್ಲದಿದ್ದರೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಕಾಡುತ್ತವೆ. ದಾಂಪತ್ಯ ಜೀವನದ ಸಮಸ್ಯೆ ದೂರವಾಗಬೇಕೆಂದರೆ ಬೆಡ್ ರೂಮಿನಲ್ಲಿ ರಾಧಾ ಕೃಷ್ಣನ ಫೋಟೋ ಇಡಬೇಕು. ಇದರ ಹಿಂದೆ ಮನೋವೈಜ್ಞಾನಿಕ ಕಾರಣವೂ ಇವೆ.

ರಾಧಾ -ಕೃಷ್ಣ ಪ್ರೇಮದ ಸಂಕೇತ. ಅದಕ್ಕೆ ಈ ಮೂರ್ತಿಗೆ ಎಲ್ಲೆಡೆ ವಿಶೇಷ ಸ್ಥಾನ. ಪ್ರತಿ ದಿನ ವ್ಯಕ್ತಿ ಅದೇ ಫೋಟೋವನ್ನು ನೋಡುತ್ತಿದ್ದರೆ ಅವರ ಮನದಲ್ಲಿಯೂ ತಮ್ಮ ಜೀವನ ಸಂಗಾತಿ ಮೇಲೆ ಪ್ರೀತಿ ಹುಟ್ಟುತ್ತದೆ.

ಸತ್ತವರ ಫೋಟೋ ದೇವರ ಮನೆಯಲ್ಲಿಡಬಹುದಾ?

ರಾಧಾ -ಕೃಷ್ಣ ನಿಸ್ವಾರ್ಥ ಪ್ರೇಮದ ಪ್ರತೀಕ. ಇಂಥದ್ದೇ ಪ್ರೇಮವನ್ನು ಪತಿ -ಪತ್ನಿಯರಲ್ಲಿಯೂ ಚಿಗುರಿದರೆ ಹಲವು ಸಮಸ್ಯೆಗಳು ದೂರವಾಗುತ್ತವೆ.

ಪ್ರೇಮದ ಪ್ರತೀಕವಾದ ರಾಧಾ -ಕೃಷ್ಣರ ಸುಂದರ ಫೋಟೋವನ್ನು ಬೆಡ್ ರೂಮ್ ಗೋಡೆ ಮೇಲೆ ಹಾಕಬೇಕು. ಫೋಟೋ ಪ್ರೀತಿಯ ಪ್ರತೀಕವಾದ ಕೆಂಪು ಬಣ್ಣದ ಫ್ರೇಮ್‌ನಲ್ಲಿದ್ದರೆ ಒಳಿತು. ಯಾಕೆಂದರೆ ಕೆಂಪು ಪ್ರೀತಿಯ ಸಂಕೇತವಾಗಿದೆ. ಇದರಿಂದ ಪತಿ ಪತ್ನಿಯ ನಡುವಿನ ಸಮಸ್ಯೆಯನ್ನು ದೂರ ಮಾಡುತ್ತದೆ.

ಬೆಡ್ ರೂಮ್‌ನಲ್ಲಿ ಕಣ್ಣಿಗೆ ಸದಾ ಎದುರು ಕಾಣುವಂಥ ಜಾಗದಲ್ಲಿ ಫೋಟೋ ಇರಿಸಿ. ಇದರಿಂದಲೂ ಪತಿ ಪತ್ನಿಯ ನಡುವೆ ಪ್ರೇಮ ಉಕ್ಕುತ್ತದೆ. ರಾಧಾ -ಕೃಷ್ಣರ ಫೋಟೋ ಇಡುವಾಗ ಅಲ್ಲಿ ಗೋಪಿಕೆಯರು ಇಲ್ಲದೆ ಇರುವ ಫೋಟೋ ಇರಿಸಿ.

ದೇವಸ್ಥಾನದ ಒಳಗೆ ಚಪ್ಪಲಿ ಹಾಕಬಾರದೇಕೆ?


 

loader