ಎಲ್ಲ ಸಂಪ್ರದಾಯದದವರ ಮನೆಯಲ್ಲಿಯೂ ದೇವರ ಕೋಣೆ ಇರುತ್ತದೆ. ಮನೆಯಲ್ಲಿ ನೆಮ್ಮದಿ, ಶಾಂತಿ ಸಿಗುವ ಸ್ಥಳ ಇದಾಗಿದ್ದು, ಮನೆಯ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಕೆಲವೊಂದು ಅಡಚಣೆಗಳಿಂದ ಮನೆ ಮತ್ತು ಮನೆ ಮಂದಿಗೆ ಕೆಟ್ಟದಾಗಬಹುದು. ಆದರೆ, ಅದರ ಹಿಂದಿನ ಕಾರಣ ತಿಳಿದಿರುವುದು ಅಗತ್ಯ. ದೇವರ ಮನೆಯಲ್ಲಿಯೇ ಕೆಲವು ಬೇಡದ ವಸ್ತುಗಳನ್ನು ಬಳಸುವುದರಿಂದ ಮನೆಯವರು ಅನಾರೋಗ್ಯದಿಂದ ಬಳಲಬಹುದು. ಮಾನಸಿಕ ಕಿರಿಕಿರಿ ಅನುಭವಿಸುವಂತಾಗಬಹುದು. ಹಾಗಾದರೆ ದೇವರ ಮನೆಯಲ್ಲಿ ಏನಿಡಬಾರದು?

  • ಲೆದರ್ ಬ್ಯಾಗ್: ಪ್ರಾಣಿಗಳ ಚರ್ಮ ಬಳಸಿ ತಯಾರಿಸುವ ಲೆದರ್ ಬ್ಯಾಗ್ ದೇವರಿರುವ ಸ್ಥಳದಿಂದ ದೂರವಿರಲಿ. ಪ್ರಾಣಿಯ ಚರ್ಮವೆಂದರೆ, ಅದರಲ್ಲಿ ನೋವಿದೆ. ಹಾಗಾಗಿ ಇಂಥ ಬ್ಯಾಗ್‌ಗಳು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವುದಿಲ್ಲ. 
  • ದೇವರ ವಿಗ್ರಹ: ಮನೆಯಲ್ಲಿಡುವ ವಿಗ್ರಹದ ಎರಡು ಕಾಲು ಮತ್ತು ಕೈಗಳು ಕಾಣಿಸುವಂತಿರಬೇಕು. ಕಣ್ಣು ನೇರ ದೃಷ್ಟಿ ಹೊಂದಿರಬೇಕು. 
  • ಕೃತಕ ಹೂವು ಬಳಸಬಾರದು: ನೈಜ ಹೂವಿರದೇ ಹೋದರೂ, ದೇವರ ಕೋಣೆಯಲ್ಲಿ ಸ್ವಚ್ಛವಾಗಿಟ್ಟರೆ ಸಾಕು, ಧನಾತ್ಮಕ ಶಕ್ತಿ ಪಸರಿಸುತ್ತದೆ.
  • ಸತ್ತವರು ಅಥವಾ ಹಿರಿಯರು ದೇವರಿಗೆ ಸಮಾನ ಹೌದು. ಹಾಗಂಥ ದೇವರೇ ಆಗುವುದಿಲ್ಲ. ಆದರೆ, ಈ ತರಹದ ಫೋಟೋಗಳನ್ನು ದೇವರ ಮನೆಯಲ್ಲಿಡಬೇಡಿ. 
  • ಮುರಿದ ವಿಗ್ರಹವನ್ನಾಗಲಿ ಅಥವಾ ಫೋಟೊವನ್ನಾಗಲಿ ಅಪ್ಪಿತಪ್ಪಿಯೂ ದೇವರ ಮನೆಯನ್ನು ಅಲಂಕಿಸಬಾರದು. 
  • ದೇವರ ಮನೆ ಮುಂದೆ ಚಪ್ಪಲಿಯಂಥ ವಸ್ತುಗಳನ್ನಿಡಬೇಡಿ.
  • ಸದಾ ನಂದಾ ದೀಪ ದೇವರನ್ನು ಬೆಳಗುತ್ತಿರಲಿ.
  • ಅನಗತ್ಯ ವಸ್ತುಗಳು ದೇವರ ಮನೆಯಲ್ಲಿ ಬೇಡ. ದೇವರಿಗೆ ಸಂಬಂಧಿಸಿದಂತೆ ವಸ್ತುಗಳು ಮಾತ್ರವಿರಲಿ. 
  • ಆದಷ್ಟು ಪ್ಲಾಸ್ಟಿಕ್ ವಸ್ತುಗಳನ್ನು ದೇವರ ಮನೆಯಿಂದ ದೂರವಿಡಿ. ಹಿತ್ತಾಳೆ, ಕಂಚು ಹಾಗೂ ಬೆಳ್ಳಿ ವಸ್ತುಗಳನ್ನು ಹೆಚ್ಚು ಬಳಸಿ. ಹಾಗೂ ಈ ವಸ್ತುಗಳನ್ನು ಶುಭ್ರವಾಗಿಡಿ.