ಹಣವಿದ್ದರೂ ಅಥವಾ ಸಾಲ ಸೌಲಭ್ಯವಿದ್ದರೂ ಕೆಲವರಿಗೆ ಸ್ವಂತ ಮನೆ ಕಟ್ಟುವ ಕನಸು ಈಡೇರುವುದಿಲ್ಲ. ಇಂತಹ ಅಡೆತಡೆಗಳನ್ನು ನಿವಾರಿಸಲು ವಾಸ್ತು ಶಾಸ್ತ್ರದಲ್ಲಿ ವಿಶೇಷ ಪರಿಹಾರವನ್ನು ಸೂಚಿಸಲಾಗಿದೆ. ಅರಳಿ ಮರದ ಕೆಳಗೆ ನಿರ್ದಿಷ್ಟ ವಸ್ತುಗಳನ್ನಿಟ್ಟು ಪೂಜಿಸುವುದರಿಂದ ಮನೆ ಕಟ್ಟುವ ಆಸೆ ಶೀಘ್ರದಲ್ಲೇ ನನಸಾಗಲಿದೆ.

ಮನೆ ಕಟ್ಟಬೇಕು ಎನ್ನುವುದು ಹಲವರ ಆಸೆ ಇರುತ್ತದೆ. ಆದರೆ ಯೋಗ ಕೂಡಿ ಬಂದ ಹೊರತೂ ಮನೆ ಕಟ್ಟುವುದು ಕನಸಿನ ಮಾತೇ ಆಗಿರುತ್ತದೆ. ತಮ್ಮದೊಂದು ಸ್ವಂತ ಸೂರು ಹೊಂದಬೇಕು ಎನ್ನುವ ಕನಸನ್ನು ಕಾಣುವವರು ಅಸಂಖ್ಯರಾದರೂ, ಯಾವುದ್ಯಾವುದೋ ಕಾರಣಕ್ಕೆ ಆ ಆಸೆ ಈಡೇರುವುದೇ ಇಲ್ಲ. ಕೆಲವರ ಬಳಿ ಹಣದ ಕೊರತೆ ಇರುವ ಕಾರಣ, ಮನೆ ಕಟ್ಟುವುದು ಕನಸೇ ಎಂದುಕೊಂಡು ಸುಮ್ಮನಾಗುತ್ತಾರೆ. ಆದರೆ ಮತ್ತೆ ಕೆಲವರ ಬಳಿ ಹಣವಿದ್ದರೂ ಅಥವಾ ಸಾಲ ಸೌಲಭ್ಯ ಸಿಗುವಂತೆ ಇದ್ದರೂ, ಅದ್ಯಾಕೋ ಕಾಲ ಕೂಡಿ ಬರುವುದೇ ಇಲ್ಲ. ಏನೆಲ್ಲಾ ಪ್ರಯತ್ನ ಪಟ್ಟರೂ ಮನೆಯ ಕನಸು ಕನಸಾಗಿಯೇ ಇದ್ದು ಬಿಡುತ್ತದೆ.

ಅವರವರ ನಂಬಿಕೆಗೆ...

ಎಲ್ಲಾ ಇದ್ದರೂ ಯಾಕೋ ಯಾವುದೋ ಸಮಸ್ಯೆಯಿಂದ ಮನೆಯ ಕನಸು ನನಸಾಗುತ್ತಿಲ್ಲ ಎಂದು ಅಂದುಕೊಳ್ಳುವವರಿಗಾಗಿಯೇ ಇಲ್ಲೊಂದು ವಾಸ್ತು ಟಿಪ್ಸ್​ ನೀಡಲಾಗಿದೆ. ವಾಸ್ತು ಶಾಸ್ತ್ರದಲ್ಲಿ ಕೆಲವೊಂದು ಸಲಹೆಗಳಿದ್ದು, ಅದನ್ನು ಪಾಲಿಸಿದರೆ ಮನೆ ಶೀಘ್ರದಲ್ಲಿ ಆಗುವುದು ಎಂಬ ನಂಬಿಕೆ ಇದೆ. ಮನೆಗಾಗಿಯೇ ಕೆಲವು ದೇಗುಲಗಳು, ಮಕ್ಕಳಿಗಾಗಿಯೇ ಕೆಲವು ದೇಗುಲಗಳು ಪ್ರಸಿದ್ಧಿ ಹೊಂದಿವೆ. ಇವುಗಳೆಲ್ಲಾ ಮೂಢ ನಂಬಿಕೆ ಎಂದು ಕೆಲವರು ಮೂಗು ಮುರಿದರೂ, ಅಲ್ಲಿಗೆ ಹೋಗಿ ಮನೆ, ಮಕ್ಕಳ ವರದಾನ ಪಡೆದು ಬಂದವರು ಇದ್ದಾರೆ. ಮಕ್ಕಳೇ ಆಗಲ್ಲ ಎಂದುವೈದ್ಯರು ಹೇಳಿದ ಮೇಲೂ ಸಂತಾನಪ್ರಾಪ್ತಿ ಆದವರು ಇದ್ದಾರೆ. ನಿಮ್ಮ ಜಾತಕದಲ್ಲಿ ಮನೆ ಕಟ್ಟುವ ಭಾಗ್ಯ ಇಲ್ಲ ಎಂದ ಮೇಲೆ ಕೆಲವೊಂದು ದೇಗುಲದಲ್ಲಿ ಪೂಜೆ ಸಲ್ಲಿಸಿದಾಗ ಅದನ್ನು ಸುಳ್ಳಾಗಿಸಿದವರು ಇದ್ದಾರೆ.

ಆದ್ದರಿಂದ ದೇವರು, ದಿಂಡರು, ಜ್ಯೋತಿಷ ಶಾಸ್ತ್ರ, ವಾಸ್ತುಶಾಸ್ತ್ರ ಎಲ್ಲವೂ ಅವರವರ ನಂಬಿಕೆಗೆ ಬಿಟ್ಟಂಥದ್ದು. ಯಾವುದೋ ಒಂದು ಅವ್ಯಕ್ತ ಶಕ್ತಿ ಇದೆ ಎಂದು ನಂಬುವವರಿಗೆ ಕೆಲವೊಮ್ಮೆ ಅಂದುಕೊಂಡದ್ದೆಲ್ಲಾಆಗುವುದು ಇದೆ. ಅದೇ ರೀತಿ ಮನೆಗಾಗಿಯೇ ಒಂದು ವಾಸ್ತು ಟಿಪ್ಟ್​ ನಮ್ಮ ಹಿರಿಯರು ನೀಡಿದ್ದಾರೆ.

ನೀವು ಮಾಡಬೇಕಿರುವುದು ಏನು?

ಅದೇನೆಂದರೆ, ಒಂದು ಮಣ್ಣಿನ ಚಿಕ್ಕ ಪಾತ್ರೆ ತೆಗೆದುಕೊಳ್ಳಿ. ಅದರಲ್ಲಿ ಹಾಲು, ಜೇನುತುಪ್ಪ, ಬೆಲ್ಲ ಮತ್ತು ಅಕ್ಕಿಯನ್ನು ಹಾಕಿ. ಅದನ್ನು ಅರಳಿ (ಅಶ್ವತ್ಥ) ಮರದ ಕೆಳಗೆ ಇಡಿ. ನಂತರ ಮರಕ್ಕೆ ಮನಸ್ಸಿನ ಇಚ್ಛೆಯನ್ನು ಹೇಳಿಕೊಂಡು ಪ್ರದಕ್ಷಿಣೆ ಹಾಕಿ. ಹೀಗೆ ಮಾಡಿದರೆ ನಿಮ್ಮ ಮನೆಯ ಕನಸು ನನಸಾಗುವುದು. ಅಷ್ಟಕ್ಕೂ ಅರಳಿ ಮರವು ಹಿಂದೂ ಸಂಪ್ರದಾಯದಲ್ಲಿ ಬಹಳ ಪ್ರಾಮುಖ್ಯತೆ ಪಡೆದಿರುವುದು ಗೊತ್ತೇ ಇದೆ. ಮಕ್ಕಳಾಗದವರು ಕೂಡ ಈ ಅಶ್ವತ್ಥ ಮರದ ಮೊರೆ ಹೋಗುವುದು ಇದೆ. ಅದೇ ರೀತಿ ಯಾವುದೋ ಕಾರಣಕ್ಕೆ ಮನೆ ಕಟ್ಟಲು ಏನಾದರೂ ತಡೆಯಾಗುತ್ತಿದ್ದರೆ ಹೀಗೆ ಮಾಡಿದರೆ, ನಿಮ್ಮ ಮನೆಯ ಕನಸು ನನಸಾಗಲಿದೆ ಎನ್ನುತ್ತದೆ ವಾಸ್ತು ಶಾಸ್ತ್ರ.