ಚೈನೀಸ್ ವರ್ಷದ ಪ್ರಕಾರ ನಿಮ್ಮ ಈ ವರ್ಷದ ಭವಿಷ್ಯ ಹೇಗಿರುತ್ತೆ?

ನಮ್ಮಲ್ಲಿ ಮೇಷ, ವೃಷಭ, ಮಿಥುನ ಅಂತೆಲ್ಲ ಜನ್ಮರಾಶಿಗಳು ಇವೆಯಲ್ಲ. ಅದೇ ರೀತಿ ಚೀನಾದಲ್ಲೂ ಹನ್ನೆರಡು ಜನ್ಮರಾಶಿಗಳು ಇವೆ.  ನಿಮ್ಮ ಚೈನೀಸ್ ಜನ್ಮರಾಶಿ, ಭವಿಷ್ಯ ನಿಮಗ್ಗೊತ್ತಾ?

Know your chinese zodiac signs and horoscope of the year

ನಮ್ಮಲ್ಲಿ ಮೇಷ, ವೃಷಭ, ಮಿಥುನ ಅಂತೆಲ್ಲ ಜನ್ಮರಾಶಿಗಳು ಇವೆಯಲ್ಲ. ಅದೇ ರೀತಿ ಚೀನಾದಲ್ಲೂ ಹನ್ನೆರಡು ಜನ್ಮರಾಶಿಗಳು ಇವೆ. ನಮ್ಮಲ್ಲಿನ ಥರ ಅಲ್ಲಿ ಜನ್ಮನಕ್ಷತ್ರಕ್ಕೆ ಹೊಂದಿಕೊಂಡು ರಾಶಿ ಬರೋದಿಲ್ಲ. ಬದಲಾಗಿ, ನೀವು ಹುಟ್ಟಿದ ವರ್ಷಕ್ಕೆ ಸರಿಯಾಗಿ ನಿರ್ಧಾರ ಆಗುತ್ತೆ.

ಉದಾಹರಣೆಗೆ, ಜನವರಿ ೨೫ಕ್ಕೆ ಅಲ್ಲಿ ಹೊಸ ಚೈನೀಸ್ ವರ್ಷ ಶುರು. ಈ ವರ್ಷ 'ರ್ರ್ಯಾಟ್ ಇಯರ್ ಅರ್ಥಾತ್ 'ಇಲಿ ವರ್ಷ.' ಹಾಗಾಗಿ ಈ ವರ್ಷ ಹುಟ್ಟಿದವರೆಲ್ಲ ಇಲಿ ರಾಶಿಯವರು. ಬುಧ ಗ್ರಹ ಎಲ್ಲಿದೆ ಎಂಬುದರ ಮೇಲೆ ಆಯಾ ವರ್ಷದ ರಾಶಿ ನಿರ್ಧಾರ ಆಗುತ್ತೆ. ಒಟ್ಟು ಹನ್ನೆರಡು ರಾಶಿಗಳಿದ್ದು, ಅವು ರಿಪೀಟ್ ಆಗ್ತಾ ಇರ್ತವೆ. ನಮ್ಮಲ್ಲಿ ಅರುವತ್ತು ಸಂವತ್ಸರಗಳಿದ್ದ ಹಾಗೆ. ಆ ಹನ್ನೆರಡು ರಾಶಿಗಳು ಹೀಗಿವೆ: ಇಲಿ, ಎತ್ತು, ಹುಲಿ, ಮೊಲ, ಡ್ರ್ಯಾಗನ್, ಹಾವು, ಕುದುರೆ, ಆಡು, ಮಂಗ, ಹುಂಜ, ನಾಯಿ, ಹಂದಿ. ಬನ್ನಿ, ಯಾವ್ಯಾವ ವರ್ಷ ಹುಟ್ಟಿದವರದು ಯಾವ ರಾಶಿ, ಈ ವರ್ಷ ಅವರ ಭವಿಷ್ಯ ಏನು ತಿಳಿಯೋಣ.

 

ಇಲಿ

1936, 1948, 1960, 1972, 1984, 1996, 2008, 2020ರಲ್ಲಿ ಜನಿಸಿದವರು ಇಲಿ ವರ್ಷಕ್ಕೆ ಸೇರುತ್ತಾರೆ. ಇವರು ಇಲಿಯಂತೆ ಚುರುಕು, ಜಾಣ್ಮೆಯಿಂದ ಕೆಲಸ ಸಾಧಿಸಿಕೊಳ್ಳುವವರು. ಈ ವರ್ಷ ಇವರಿಗೆ ಹಲವು ಸವಾಲುಗಳನ್ನು ಒಡ್ಡಲಿದೆ. ಧನಾತ್ಮಕ ನಿಲುವಿನಿಂದ ಕೆಲಸಗಳು ಆಗುತ್ತವೆ. ನೆಗೆಟಿವ್ ಯೋಚನೆ ಬಿಡಬೇಕು.

 

ಎತ್ತು

1937, 1949, 1961, 1973, 1985, 1997, 2009, 2021ರಲ್ಲಿ ಜನಿಸಿದವರು ಎತ್ತು ರಾಶಿಯವರು. ಇವರು ಎತ್ತಿನಂತೆ ಗಂಭೀರ ಮತ್ತು ತಾಳ್ಮೆಯಿಂದ ಕೆಲಸ ಮಾಡುವವರು. ಇವರು ಸತತವಾಗಿ ನಮ್ಮನ್ನ ಚಾಲೆಂಜ್ ಮಾಡಿಕೊಳ್ಳುತ್ತಲೇ ಇರಬೇಕು. ಈ ವರ್ಷ ಇವರ ರೊಮ್ಯಾಂಟಿಕ್ ಲೈಫ್ ಕಳೆಗಟ್ಟುತ್ತದೆ.

 

ಹುಲಿ

1938, 1950, 1962, 1974, 1986, 1998, 2010, 2022ರಲ್ಲಿ ಜನಿಸಿದವರು ಹುಲಿ ರಾಶಿಯವರು. ಸಾಕಷ್ಟು ಶಕ್ತಿ ಸಾಮರ್ಥಗಳನ್ನು ಹಾಗೂ ಅದೃಷ್ಟವನ್ನು ಈ ವರ್ಷ ನಿಮಗೆ ತಂದುಕೊಡುತ್ತೆ. ಬಂದ ಅವಕಾಶ ಉಪಯೋಗಿಸಿಕೊಳ್ಳಲು ಮರೆಯಬೇಡಿ. ಕೆಲವು ಅವಕಾಶಗಳನ್ನು ಹೊಂಚಿ ಕುಳಿತು ಬೇಟೆಯಾಡಬೇಕಾದೀತು.

 

ಮೊಲ

1939, 1951, 1963, 1975, 1987, 1999, 2011, 2023ರಲ್ಲಿ ಜನಿಸಿದವರು ಮೊಲದ ರಾಶಿಯವರು. ಈ ವರ್ಷ ಇವರಿಗೆ ಅದೃಷ್ಟದ ಮಹಾಭಾಗ್ಯದ ವರ್ಷ. ಚುರುಚುರುಕಾಗಿ, ಕಳೆಕಳೆಯಾಗಿ ಓಡಾಡಿಕೊಂಡಿರುವ ಇವರು ತಮ್ಮ ಸುತ್ತಮುತ್ತಲೂ ಆನಂದ ಸೃಷ್ಟಿಸುತ್ತಾರೆ. ಕೆಲವೊಮ್ಮೆ ಗೊಂದಲ ಹುಟ್ಟಿಸಲೂಬಹುದು.

 

ಡ್ರ್ಯಾಗನ್‌

1940, 1952, 1964, 1976, 1988, 2000, 2012, 2024ರಲ್ಲಿ ಜನಿಸಿದವರು ಡ್ರ್ಯಾಗನ್‌ ರಾಶಿಗೆ ಸೇರಿದವರಾಗಿರುತ್ತಾರೆ. ಇವರಿಗೆ ಈ ವರ್ಷ ವೃತ್ತಿ ಜೀವನದಲ್ಲಿ ಬಹಳ ಅಚ್ಚರಿಗಳು ಕಾದಿರಬಹುದು ಬಡ್ತಿ, ಸ್ಥಾನೋನ್ನತಿಗಳು ಸಿಗಬಹುದು. ಅದಕ್ಕೆ ತಕ್ಕಂತೆ ನಿಮ್ಮ ನಡೆನುಡಿಗಳನ್ನು ಇನ್ನಷ್ಟು ನಯವಿನಯದಿಂದ ಬಳಸಬೇಕಾದೀತು.

 

ಎಷ್ಟು ಓದಿದರೂ ಕೆಲವರಿಗೆ ತಲೆಗೆ ಹತ್ತೋಲ್ಲ, ಅವರ ಜಾತಕದಲ್ಲಿ ಈ ದೋಷ

 

ಹಾವು

1941, 1953, 1965, 1977, 1989, 2001, 2013, 2025ರಲ್ಲಿ ಹುಟ್ಟಿದವರು ಹಾವಿನ ರಾಶಿಗೆ ಸೇರಿದವರೆನ್ನಬಹುದು. ಈ ವರ್ಷಗಳಂದು ಹುಟ್ಟಿದವರು, ಮುಂಬರುವ ವರ್ಷದಲ್ಲಿ ತಮ್ಮ ಲೈಫೇ ಚೇಂಜ್‌ ಆಗುವಂಥ ಕೆಲವು ಘಟನೆಗಳನ್ನು ಕಾಣಬಹುದು. ಈಗ ನಿಮ್ಮ ಲೈಫಿನ ಡೈರೆಕ್ಷನ್‌ ನಿರ್ಧಾರ ಮಾಡಿಕೊಳ್ಳಲು ಸಕಾಲ. ಕೆರಿಯರ್‌ ಚೇಂಜ್‌ ಮಾಡುವಾಗ ತುಂಬ ಹುಷಾರಾಗಿರಿ.

 

ಕುದುರೆ

1942, 1954, 1966, 1978, 1990, 2002, 2014, 2026ರಲ್ಲಿ ಹುಟ್ಟಿದವರು ಕುದುರೆ ರಾಶಿಗೆ ಸೇರಿದವರಾಗುತ್ತಾರೆ. ಇವರು ಸಾಕಷ್ಟು ಆಶಾವಾದಿಗಳು, ಭವಿಷ್ಯದಲ್ಲಿ ಒಳ್ಳೆಯ ದಿನಗಳು ಕಾದಿವೆ. ಆದರೆ ಅತಿ ಆಶಾವಾದ ಬೇಡ. ನೀವು ಸ್ವತಂತ್ರ ವ್ಯಕ್ತಿತ್ವದವರು. ಆದರೆ ಈ ವರ್ಷ ಕೆಲವರ ಬೆಂಬಲವಿಲ್ಲದೆ ಮುನ್ನಡೆಯಲು ಸಾಧ್ಯವಿಲ್ಲ. ಮನೆ ಕಟ್ಟಿಸಲು ಹೊರಟಿದ್ದರೆ ಹುಷಾರಾಗಿರಬೇಕು.

 

ಆಡು

1943, 1955, 1967, 1979, 1991, 2003, 2015, 2027ರಲ್ಲಿಹುಟ್ಟಿದವರು ಆಡಿನ ರಾಶಿಯವರು. ಈ ವರ್ಷ ನಿಮಗೆ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ, ಅದನ್ನು ಹೊಂದಿಕೊಂಡು ಬೇರೆ ಪ್ಲಾನ್ ಮಾಡಬಹುದು. ಸುತ್ತಾಟಗಳು, ಪ್ರವಾಸ ಸಾಕಷ್ಟು ಮಾಡಬೇಕಾಗಬಹುದು. ವೃತ್ತಿ ಸುಲಭವಾಗಿರುತ್ತದೆ.

 

ಮಂಗ

1944, 1956, 1968, 1980, 1992, 2004, 20106ರಲ್ಲಿ ಹುಟ್ಟಿದವರು ಮಂಗನ ಜನ್ಮರಾಶಿ ಹೊಂದಿದವರು. ನಿಮಗೆ ಸಾಕಷ್ಟು ಅವಕಾಶಗಳು ಈ ವರ್ಷ ಲಭ್ಯವಾಗುವುದರಲ್ಲಿ ಸಂಶಯವಿಲ್ಲ. ಆದರೆ ಎಲ್ಲದಕ್ಕೂ ಸಮಯ ಹೊಂದಿಸಿಕೊಳ್ಳುವುದೇ ಕಷ್ಟವಾಗಬಹುದು. ಈ ವರ್ಷದ ನಿರ್ಧಾರಗಳು ಮುಂದಿನ ಹತ್ತು ವರ್ಷ ಪರಿಣಾಮ ಬೀರಬಹುದು.

 

ಜಾತಕದಲ್ಲಿ ಮಾಂದಿ ಕಾಟವಿದ್ದರೆ ಮನುಷ್ಯ ಮಾನಿನಿ ದಾಸನಾಗುತ್ತಾನೆ!

 

ಹುಂಜ

1945, 1957, 1969, 1981, 1993, 2005, 2017ರಲ್ಲಿ ಹುಟ್ಟಿದವರಿಗೆ ಹುಂಜವೇ ಜನ್ಮರಾಶಿಯ ಸಂಕೇತ. ನಿಮಗೆ ಸ್ವಲ್ಪ ಶೋಆಫ್ ಸ್ವಭಾವವಿದೆ. ಅದನ್ನು ಹೊರತುಪಡಿಸಿದರೆ, ನಿಮ್ಮ ವೈಯಕ್ತಿಕ ಬಾಂಧವ್ಯಗಳು ಹಾಗೂ ಸಂಗಾತಿಯ ಜೊತೆಗಿನ ಸಂಬಂಧ ಈ ವರ್ಷ ಗ್ರೇಟ್‌ ಅನ್ನಿಸುವ ಹಾಗಿರುತ್ತದೆ. ಸ್ವಾರ್ಥ ಬಿಡಿ.

 

ನಾಯಿ

1946, 1958, 1970, 1982, 1994, 2006, 2018ರಲ್ಲಿ ಹುಟ್ಟಿದವರನ್ನು ಜನ್ಮರಾಶಿಯಲ್ಲಿ ನಾಯಿ ಪ್ರತಿನಿಧಿಸುತ್ತದೆ. ನಿಷ್ಠೆ ನಿಮ್ಮ ಗುರುತು. ಪ್ರಾಮಾಣಿಕತೆ ನಿಮ್ಮ ಸ್ವಭಾವ, ಈ ಸ್ವಭಾವಗಳು ನಿಮ್ಮನ್ನು ಈ ವರ್ಷ ಕೈಹಿಡಿಯಲಿವೆ. ಕೆಲಸ ಬದಲಾಯಿಸಬೇಡಿ, ಸಂಗಾತಿಗಳಿಂದ ಹೆಚ್ಚಿನ ಸುಖ ಸಿಗಬಹುದು.

 

ಹಂದಿ

1947, 1959, 1971, 1983, 1995, 2007, 2019ರಲ್ಲಿ ಹುಟ್ಟಿದವರು ಹಂದಿಯನ್ನು ಜನ್ಮರಾಶಿಯಾಗಿ ಪಡೆದಿರುತ್ತಾರೆ. ನಿಮ್ಮನ್ನು ಇತರರು ಬಳಸಿಕೊಳ್ಳುತ್ತಿದ್ದಾರೋ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ನಿಮ್ಮ ಗುಣಸ್ವಭಾವಗಳನ್ನು ಇತರರಿಗೆ ಸ್ಪಷ್ಟಪಡಿಸಲು ಇದು ಸಕಾಲ, ನಿಮ್ಮ ನೋವುಗಳಿಗೆ ಕೊನೆ ಹಾಡುವ ಕಾಲವಿದು.

Latest Videos
Follow Us:
Download App:
  • android
  • ios