ದೇಶದ ಅತಿ ದೊಡ್ಡ ಶ್ರೀಮಂತ ಮನೆತನ ಅಂಬಾನಿ ಕುಟುಂಬದಲ್ಲಿ ಬುಧವಾರದಂದು ಮದುವೆ ಸಂಭ್ರಮ ಕಳೆಗಟ್ಟಿದೆ. ಮುಕೇಶ್ ಅಂಬಾನಿಯ ಮುದ್ದಿನ ಮಗಳು ಇಶಾ ಅಂಬಾನಿ, ಆನಂದ್ ಪೀರಾಮಲ್ ರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇತ್ತ ದೇಶದ ಪ್ರಸಿದ್ದ ಹಾಸ್ಯ ಕಲಾವಿದ ಹಾಗೂ ಬಾಲಿವುಡ್ ನಟ ಕಪಿಲ್ ಶರ್ಮಾ ಕೂಡಾ ಡಿಸೆಂಬರ್ 12 ರಂದೇ ಗಿನ್ನೀ ಚತ್‌ರತ್ ರೊಂದಿಗೆ ವಿವಾಹವಾಗುತ್ತಿದ್ದಾರೆ. ಹೀಗಂತ ದೇಶದಲ್ಲಿ ಇಬ್ಬರು ದಿಗ್ಗಜರ ಮದುವೆ ಒಂದೇ ದಿನ ನಡೆಯುತ್ತಿರುವುದು ಕಾಕತಾಳೀಯವಲ್ಲ, ಇದರ ಹಿಂದೆ ಬಹುದೊಡ್ಡ ಕಾರಣವಿದೆ.

ಅಂಬಾನಿ ಮಗಳ ಮದುವೆಗೆ ಮೋದಿ ಹೋಗ್ತಾರಾ?

ಜ್ಯೋತಿಷ್ಯ ಶಾಸ್ತ್ರಗಳ ಅನ್ವಯ ಹೇಳುವುದಾದರೆ ಡಿಸೆಂಬರ್ 12 ರಂದು ಮದುವೆಯಾಗಲು ಒಳ್ಳೆಯ ಮುಹೂರ್ತವಿದೆ ಎನ್ನಲಾಗಿದೆ. ಈ ಶುಭ ಮುಹೂರ್ತದ ಕಾರಣದಿಂದಲೇ ಕಾರಣದಿಂದಲೇ ದೇಶದಾದ್ಯಂತ ಮದುವೆ ವಾಲದ ಸದ್ದು ಜೋರಾಗಿದೆ. ಇಂದು ಬಹುತೇಕ ಮಂದಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹೀಗಿರುವಾಗ ಮುಕೇಶ್ ಅಂಬಾನಿ ತಮ್ಮ ಮುದ್ದಿನ ಮಗಳಿಗಾಗಿ ಇಂತಹ ದಿನ ಆರಿಸದೇ ಇರುತ್ತಾರಾ?

ಭಾರತದ ನಂ.1 ಶ್ರೀಮಂತನ ಮನೆ ಮದ್ವೆಯಲ್ಲಿ ಕಡು ಬಡವರಿಗೂ ಊಟ!

ಕಪಿಲ್ ಶರ್ಮಾ ಹಾಗೂ ಗಿನ್ನೀ ಮದುವೆ ಹಿಂದಿನ ಕಾರಣ ಕೂಡಾ ಇದೇ ಆಗಿದೆ. ಈ ಜೋಡಿಯೂ ಈ ವರ್ಷದ ಅತ್ಯಂತ ಒಳ್ಳೆಯ ಮುಹೂರ್ತ ಮಿಸ್ ಮಾಡಿಕೊಳ್ಳಲು ಇಷ್ಟವಿಲ್ಲ. ವಾಸ್ತವವಾಗಿ ಇದು ಮಾರ್ಗಶಿರ ತಿಂಗಳ ಪಂಚಮಿ ತಿಥಿಯಾಗಿದೆ. ರಾಮಚರಿತ ಮಾನಸದ ಅನ್ವಯ ಈ ತಿಥಿ ಮದುವೆಯಾಗಲು ಅತ್ಯುತ್ತಮ, ಇದೇ ತಿಥಿಯಲ್ಲಿ ತ್ರೇತಾಯುಗದಲ್ಲಿ ಶ್ರೀ ರಾಮ ಹಾಗೂ ಸೀತೆಯ ವಿವಾಹವಾಗಿತ್ತು ಎಂಬ ನಂಬಿಕೆ ಇದೆ. 
ಅಂಬಾನಿ ಮಗಳ ಸಂಗೀತ ಕಾರ್ಯಕ್ರಮದಲ್ಲಿ ದೀಪಿಕಾ ಭರ್ಜರಿ ಸ್ಟೆಪ್ಸ್

ಜೋತಿಷ್ಯ ಶಾಸ್ತ್ರದ ಅನ್ವಯ, ಮದುವೆಯಾಗಲು ಭಗವಂತ ವಿಷ್ಣು ಎಚ್ಚರವಾಗಿರುವುದು ಹಾಗೂ ಗುರು ಉದಯಿಸುವುದು ಅತ್ಯಗತ್ಯ. ವಿಷ್ಣು ಭಗವಂತ ಕೂಡಾ ಡಿಸೆಂಬರ್ 19ರಂದು ದೇವಪ್ರಭೋದಿನಿ ಏಕಾದಶಿಯಂದು ಎಚ್ಚರಗೊಂಡಿದ್ದಾರೆ. ಹೀಗಿರುವಾಗ ಡಿಸೆಂಬರ್ 12 ಮದುವೆಯಾಗಲು ಅತ್ಯುತ್ತಮ ದಿನಾವಗಿದೆ.