ಇಶಾ ಅಂಬಾನಿ ಹಾಗೂ ಆನಂದ್ ಪೀರಾಮಲ್‌ರವರ ಉದಯ್ಪುರ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಬಾಲಿವುಡ್‌ನ ಹಲವಾರು ತಾರೆಯರು ಪಾಲ್ಗೊಂಡಿದ್ದಾರೆ. ಶಾರುಕ್, ಸಲ್ಮಾನ್, ಐಶ್ವರ್ಯಾ ರೈ, ದೀಪಿಕಾ ಹೀಗೆ ಬಹುತೇಕ ಎಲ್ಲಾ ಸ್ಟಾರ್ ನಟರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಕೆಲವರು ವೇದಿಕೆ ಏರಿ ಡಾನ್ಸ್ ಮಾಡಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರೆ, ಇನ್ನು ಕೆಲವರು ತಮ್ಮ ಡಾನ್ಸಿಂಗ್ ಸ್ಟೈಲ್ ನಿಂದಲೇ ಮನರಂಜನೆ ನೀಡಿದ್ದಾರೆ. ಇತ್ತೀಚೆಗಷ್ಟೇ ಅದ್ಧೂರಿಯಾಗಿ ಮದುವೆಯಾದ ದೀಪಿಕಾ ಹಾಗೂ ರಣವೀರ್ ಕೂಡಾ ಈ ಸಂಗೀತ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಈ ವೇಳೆ ಕೆಂಪು ಬಣ್ಣದ ಸೀರೆಯುಟ್ಟ ದೀಪಿಕಾ ಹಾಕಿದ ಸ್ಟೆಪ್ಸ್ ವಿಶೇಷ ಗಮನ ಸೆಳೆದಿದೆ.

ಮದುವೆ ಬಳಿಕ ದೀಪಿಕಾ ಹಾಗೂ ರಣವೀರ್ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು. ಬಾಲಿವುಡ್‌ನ ಈ ರೊಮ್ಯಾಂಟಿಕ್ ಜೋಡಿ, ಕಾರ್ಯಕ್ರಮದಲ್ಲೂ ಅಷ್ಟೇ ಮುದ್ದಾಗಿ ಕಾಣುತ್ತಿತ್ತು. ಇನ್ನು ಕಾರ್ಯಕ್ರಮಕ್ಕೆ ಸಮಬಂಧಿಸಿದಂತೆ ಸದ್ಯ ದೀಪಿಕಾರ ವಿಡಿಯೋ ತುಣುಕೊಂದು ವೈರಲ್ ಆಗಲಾರಂಭಿಸಿದೆ. ಈ ವಿಡಿಯೋದಲ್ಲಿ 'ಲವ್ ರಾತ್ರಿ' ಸಿನಿಮಾದ 'ಚೋಗಾಡ ತಾರಾ' ಹಾಡಿಗೆ ದೀಪಿಕಾ ದೇಸೀ ಸ್ಟೈಲ್ ನಲ್ಲಿ ಸ್ಟೆಪ್ಸ್ ಹಾಕಿದ್ದಾರೆ. ಮದುವೆ ದಿಬ್ಬಣದಲ್ಲಿ ಕುಣಿಯುವಂತೆ ಡಾನ್ಸ್ ಮಾಡಿದ ದೀಪಿಕಾ ಜೊತೆ ಪತಿ ರಣವೀರ್ ಸಿಂಗ್ ಕೂಡಾ ಸ್ಟೆಪ್ಸ್ ಹಾಕಿ ದೀಪಿಕಾಗೆ ಜೊತೆ ನೀಡಿದ್ದಾರೆ.

ದೀಪಿಕಾರನ್ನು ಹೊರತುಪಡಿಸಿ ಈ ಕರ್ಯಕ್ರಮಕ್ಕೆ ಹಲವಾರು ದಿಗ್ಗಜ ನಟ/ನಟಿಯರು ಅಗಮಿಸಿದ್ದು, ಅಭಿಮಾನಿಗಳ ಗಮನಸೆಳೆದಿದ್ದಾರೆ.