ಮುಂಬೈ[ಡಿ.12]: ರಿಲಯನ್ಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಪುತ್ರಿ ಇಶಾ ಅಂಬಾನಿ ಹಾಗೂ ಅನಂದ್‌ ಪಿರಮಾಳ್‌ ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಮುಂಬೈನಲ್ಲಿರುವ ವಿಶ್ವದ ಅತ್ಯಂತ ಐಷಾರಾಮಿ ನಿವಾಸಗಳಲ್ಲಿ ಒಂದಾದ ಆ್ಯಂಟಿಲಿಯಾದಲ್ಲಿ ವಿವಾಹ ಸಮಾರಂಭ ನೆರವೇರಲಿದೆ.

ಭಾರತದ ನಂ.1 ಶ್ರೀಮಂತನ ಮನೆ ಮದ್ವೆಯಲ್ಲಿ ಕಡು ಬಡವರಿಗೂ ಊಟ!

ಉದಯ್‌ಪುರದಲ್ಲಿ ನಡೆದ ವಿವಾಹ ಪೂರ್ವ ಸಮಾರಂಭಕ್ಕೆ ಅಮೆರಿಕದ ಪ್ರಥಮ ಮಹಿಳೆ ಹಿಲರಿ ಕ್ಲಿಂಟನ್‌, ಜಾಗತಿಕ ಉದ್ಯಮಿಗಳು, ಬಾಲಿವುಡ್‌ ನಟರು ಸೇರಿದಂತೆ ಹಲವು ಮಂದಿ ಗಣ್ಯರು ಭಾಗಿಯಾಗಿದ್ದರು. ಆದರೆ, ಮದುವೆಗೆ ಕುಟುಂಬ ಸದಸ್ಯರು ಹಾಗೂ ಕೆಲವೇ ಕೆಲವು ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ.

ಅಂಬಾನಿ ಮಗಳ ಸಂಗೀತ ಕಾರ್ಯಕ್ರಮದಲ್ಲಿ ದೀಪಿಕಾ ಭರ್ಜರಿ ಸ್ಟೆಪ್ಸ್

ಪ್ರಧಾನಿ ಮೋದಿ ಅವರು ವಿವಾಹಕ್ಕೆ ಆಗಮಿಸಲಿದ್ದಾರೆಯೇ ಇಲ್ಲವೇ ಎಂಬುದು ಖಚಿತಪಟ್ಟಿಲ್ಲ.