Asianet Suvarna News Asianet Suvarna News

ಗುರುವಿಗೆ ಶರಣಾದರೆ ಸನ್ಮಾರ್ಗ ದೊರೆಯಲು ಸಾಧ್ಯ: ರಾಮಾನಂದ ಭಾರತಿ ಶ್ರೀ

 ಗುರುವಿಗೆ ಶರಣಾದಾಗ ಮಾತ್ರ ಜೀವನದಲ್ಲಿ ಸನ್ಮಾರ್ಗ ದೊರೆಯಲು ಸಾಧ್ಯ. ಬದುಕಿನಲ್ಲಿ ಪುಣ್ಯ ಸಂಪಾದಿಸಿದವರ ಪುಣ್ಯಾರಾಧನೆ ಮಾತ್ರ ಮಾಡಲಾಗುತ್ತದೆ. ಜೀವದ ಬಳ್ಳಿಯನ್ನು ಕತ್ತರಿಸಿ, ಪುಣ್ಯದ ಬಳ್ಳಿಯನ್ನು ಬೆಳೆಸಬೇಕಿದೆ ಎಂದು ಹುಬ್ಬಳ್ಳಿ ಶ್ರೀ ಜಡೇಸಿದ್ದೇಶ್ವರ ಮಠದ ಶ್ರೀ ರಾಮಾನಂದ ಭಾರತಿ ಶ್ರೀಗಳು ಹೇಳಿದರು.

If you surrender to Guru you can get the right path says ramananda swamiji rav
Author
First Published Nov 19, 2022, 8:06 AM IST

ಚಿತ್ರದುರ್ಗ (ನ.19) : ಗುರುವಿಗೆ ಶರಣಾದಾಗ ಮಾತ್ರ ಜೀವನದಲ್ಲಿ ಸನ್ಮಾರ್ಗ ದೊರೆಯಲು ಸಾಧ್ಯವೆಂದು ಹುಬ್ಬಳ್ಳಿ ಶ್ರೀ ಜಡೇಸಿದ್ದೇಶ್ವರ ಮಠದ ಶ್ರೀ ರಾಮಾನಂದ ಭಾರತಿ ಶ್ರೀಗಳು ತಿಳಿಸಿದರು. ನಗರದ ಕಬೀರಾನಂದ ಆಶ್ರಮದ ಆವರಣದಲ್ಲಿ ಹಮ್ಮಿಕೊಂಡಿದ್ದ ಶ್ರೀ ಸದ್ಗುರು ಕಬೀರಾನಂದ ಶ್ರೀಗಳ 65ನೇ ಮತ್ತು ಶ್ರೀ ಸದ್ಗುರು ಕಬೀರೇಶ್ವರ ಶ್ರೀಗಳ 55ನೇ ಪುಣ್ಯಾರಾಧನೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಪ್ರಪಂಚದಲ್ಲಿ ಎಲ್ಲವೂ ಇದೆ ನಮಗೆ ಹಿತವಾದದನ್ನು ಮಾತ್ರ ನಾವು ಬಳಸಬೇಕಿದೆ ಎಂದರು.

ಬದುಕಿನಲ್ಲಿ ಪುಣ್ಯ ಸಂಪಾದಿಸಿದವರ ಪುಣ್ಯಾರಾಧನೆ ಮಾತ್ರ ಮಾಡಲಾಗುತ್ತದೆ. ಜೀವದ ಬಳ್ಳಿಯನ್ನು ಕತ್ತರಿಸಿ, ಪುಣ್ಯದ ಬಳ್ಳಿಯನ್ನು ಬೆಳೆಸಬೇಕಿದೆ. ಪುಣ್ಯದಿಂದ ವಿವೇಕ, ಜ್ಞಾನ, ಮೋಕ್ಷ ಪ್ರಾಪ್ತಿಯಾಗುತ್ತದೆ. ಪುಣ್ಯಾರಾಧನೆಯ ನಿಮಿತ್ತ ಸದ್ಗುರು ನಾಮಸ್ಮರಣೆ ಮಾಡಬೇಕಿದೆ. ಜೀವನದಲ್ಲಿ ಪುಣ್ಯಇರುವವರೆಗೆ ಗುರುವಾದ ಪರಮಾತ್ಮನನ್ನು ಮರೆಯಬಾರದು.ಸೂರ್ಯ ಚಂದ್ರರಿಂದ ಹೊರಗಿನ ಕತ್ತಲೆ ಹೋಗಲಾಡಿಸಲು ಸಾಧ್ಯ. ಆದರೆ ಮನಸ್ಸಿನ ಅಂಧಕಾರ ಹೋಗಲಾಡಿಸಲು ಗುರುವಿನಿಂದ ಮಾತ್ರ ಸಾಧ್ಯ ಎಂದರು.

Daily Horoscope: ಈ ರಾಶಿಗೆ ಉದ್ಯಮ ಸಂಬಂಧಿ ಪ್ರಯಾಣದಿಂದ ಆರ್ಥಿಕ ಲಾಭ

ಮೈಸೂರಿನ ಕೆ.ಆರ್‌.ನಗರದ ಕಾಗಿನೆಲೆ ಶಾಖಾ ಮಠದ ಶಿವಾನಂದ ಶ್ರೀಗಳು ಮಾತನಾಡಿ, ಭಗವಂತ ಇದ್ದ ಕಡೆಗಳಲ್ಲಿ ಸುಖ,ಶಾಂತಿ ಇರುತ್ತದೆ. ದೇಹದಲ್ಲಿ ಭಗವಂತ ಇದ್ದಾಗ ದೇಹ ಪರಿಶುದ್ದವಾಗುತ್ತದೆ. ಗುರುವಿನ ಪಾದ ಸ್ಫರ್ಶ ಮಾಡಿದವರು ಧನ್ಯರಾಗುತ್ತಾರೆ. ಪರಮಾತ್ಮನ ಚಿಂತನೆಯಲ್ಲಿ ಜೀವನ ಸಾಗಿಸಬೇಕಿದೆ ಎಂದರು.

ಮಾತೃಶ್ರೀ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ವಿ.ಎಲ್‌.ಪ್ರಶಾಂತ್‌ ಮಾತನಾಡಿ, ಕಬೀರಾನಂದ ಅಜ್ಜನವರು ಇಲ್ಲಿ ಗೋಶಾಲೆಯನ್ನು ಪ್ರಾರಂಭಿಸಿ ನಂತರ ಮಠ ಸ್ಥಾಪನೆಗೆ ಮುಂದಾದರು. ಶ್ರೀಮಠ ಯಾವುದೇ ಜಾತಿಗೆ ಸೀಮಿತವಾಗದೆ ಜಾತ್ಯತೀತ ಮಠವಾಗಿದೆ. ಈಗಿನ ಶ್ರೀಶಿವಲಿಂಗಾನಂದ ಶ್ರೀಗಳ ಕಾರ್ಯದಿಂದ ಮಠ ಮತ್ತಷ್ಟುಪ್ರಗತಿ ಸಾಧಿಸಿದೆ. ಹುಟ್ಟಿನಿಂದ ಸಾಯುವವರೆಗೆ ಜೀವನದಲ್ಲಿ ಜಂಜಾಟ ಇರುತ್ತದೆ ಅದರ ಮಧ್ಯೆಪುಣ್ಯದ ಕೆಲಸ ಮಾಡಬೇಕೆಂದರು.

ಸಾಹಿತಿ ಬಿ.ಆರ್‌.ಪುಟ್ಟಪ್ಪ ಮಾತನಾಡಿ, ಗುರುವಿನ ಸಾನಿಧ್ಯದಲ್ಲಿ ಪುಣ್ಯ ಪಡೆಯಬೇಕಿದೆ, ಮುಕ್ತಿ ಪಡೆಯಲು ಬೇರೆ ಕಡೆಗೆ ಹೋಗುವ ಅಗತ್ಯವಿಲ್ಲ ಗುರುವಿನ ಕರುಣೆ ಇದ್ದರೆ ಸಾಕು ಅದು ತಾನಾಗಿಯೇ ಒಲಿಯುತ್ತದೆ. ಗುರುವಿನ ನಾಮಸ್ಮರಣೆಯಿಂದ ಮುಕ್ತಿ ಪಡೆಯಬಹುದಾಗಿದೆ ಎಂದರು.

ಏಕಾದಶಿ ದಿನ ತಪ್ಪದೇ ಈ ಕೆಲಸ ಮಾಡಿ, ಕನಸುಗಳು ಈಡೇರುತ್ತೆ

ಕಬೀರಾನಂದ ಆಶ್ರಮದ ಶಿವಲಿಂಗಾನಂದ ಶ್ರೀಗಳು ಮಾತನಾಡಿ, ಸಂತರು ಲೋಕದ ಹಿತವನ್ನು ಬಯಸುತ್ತಾರೆ ಸ್ವಾರ್ಥವನ್ನಲ್ಲ, ಗುರು ಪಾಪವನ್ನು ತೊಳೆಯುತ್ತಾನೆ, ಕಬೀರಾ ನಂದರು ದೇಶ ಸಂಚಾರ ಮಾಡುವುದರ ಮೂಲಕ ಲೋಕದ ಚಿಂತನೆ ಮಾಡಿದರು ಎಂದರು. ಕುಂಬಾರ ಗುರುಪೀಠದ ಕುಂಬಾರ ಗುಂಡಯ್ಯಶ್ರೀ, ನಗರಸಭೆ ಅಧ್ಯಕ್ಷ ತಿಪ್ಪಮ್ಮ ವೆಂಕಟೇಶ್‌, ಸದಸ್ಯರಾದ ವೆಂಕಟೇಶ್‌, ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯೆರೇಖಾ, ಭಕ್ತರಾದ ತ್ಯಾಗರಾಜ್‌, ಹರಿಯಬ್ಬೆ ತಿಮ್ಮಣ್ಣ ಭಾಗವಹಿಸಿದ್ದರು.

Follow Us:
Download App:
  • android
  • ios