ಏಕಾದಶಿ ದಿನ ತಪ್ಪದೇ ಈ ಕೆಲಸ ಮಾಡಿ, ಕನಸುಗಳು ಈಡೇರುತ್ತೆ
ಏಕಾದಶಿ ದಿನ ವಿಷ್ಣುವಿನ ಆರಾಧನೆ ನಡೆಯುತ್ತದೆ. ದೇವರ ಪೂಜೆ ಜೊತೆಗೆ ಕೆಲ ಟಿಪ್ಸ್ ಫಾಲೋ ಮಾಡಿದ್ರೆ ನೀವು ಕೆಲವೇ ದಿನಗಳಲ್ಲಿ ಶ್ರೀಮಂತರಾಗಬಹುದು. ಏಕಾದಶಿ ದಿನ ಸರಳ ಉಪಾಯಗಳನ್ನು ಅನುಸರಿಸಿ, ಅದೃಷ್ಟದ ಬೆಳಕು ನೋಡಿ.
ಸನಾತನ ಧರ್ಮದಲ್ಲಿ ಏಕಾದಶಿ ಮತ್ತು ಹುಣ್ಣಿಮೆ ಹಾಗೂ ಅಮವಾಸ್ಯೆಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಏಕಾದಶಿಯಂದು ಉಪವಾಸ ಮಾಡುವುದರಿಂದ ಎಲ್ಲಾ ಪಾಪಗಳು ನಾಶವಾಗುತ್ತವೆ. ಅಖಂಡ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಇದೇ ಕಾರಣಕ್ಕೆ ಅನೇಕರು ಏಕಾದಶಿ ದಿನ ಉಪವಾಸ ವೃತ ಮಾಡ್ತಾರೆ. ತಂತ್ರ ಶಾಸ್ತ್ರಗಳಲ್ಲಿ ಕೂಡ ಏಕಾದಶಿಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಏಕಾದಶಿ ದಿನ ಕೆಲ ಉಪಾಯ ಮಾಡಿದ್ರೆ ತಕ್ಷಣ ಫಲ ಪ್ರಾಪ್ತಿಯಾಗುತ್ತದೆ ಎನ್ನಲಾಗಿದೆ.
ವರ್ಷದಲ್ಲಿ ಎಷ್ಟು ಬಾರಿ ಬರುತ್ತೆ ಏಕಾದಶಿ (Ekadashi) ? : ಹಿಂದೂ (Hindu ) ಕ್ಯಾಲೆಂಡರ್ ಪ್ರಕಾರ, ವರ್ಷ (Year) ಕ್ಕೆ 12 ತಿಂಗಳುಗಳಿವೆ. ಆ ತಿಂಗಳುಗಳು ಕ್ರಮವಾಗಿ ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಭಾದ್ರಪದ, ಆಶ್ವೇಜ, ಕಾರ್ತೀಕ, ಮಾರ್ಗಶಿರ , ಪುಷ್ಯ, ಮಾಘ, ಫಾಲ್ಗುನ್. ಪ್ರತಿ ತಿಂಗಳು ಕೃಷ್ಣ ಪಕ್ಷದಲ್ಲಿ ಒಂದು ಏಕಾದಶಿ ಬಂದ್ರೆ ಶುಕ್ಲ ಪಕ್ಷದಲ್ಲಿ ಎರಡನೇ ಏಕಾದಶಿ ಬರುತ್ತದೆ. ಹಾಗಾಗಿ ವರ್ಷದಲ್ಲಿ ಒಟ್ಟು 24 ಏಕಾದಶಿ ಬರುತ್ತದೆ. ಅಂದ್ರೆ ಏಕಾದಶಿ ಉಪವಾಸ (Fasting) ವೃತ ಮಾಡುವವರು ವರ್ಷದಲ್ಲಿ 24 ದಿನ ವೃತ ಮಾಡಬೇಕು.
ಮಂಗಳಕರ ಫಲ ಪ್ರಾಪ್ತಿಯಾಗ್ಬೇಕು ಅಂದ್ರೆ ಏಕಾದಶಿ ದಿನ ಮಾಡಿ ಈ ಕೆಲಸ :
ವಿಷ್ಣು ಮತ್ತು ಲಕ್ಷ್ಮಿ ಪೂಜೆ : ಏಕಾದಶಿಯಂದು ಭಗವಂತ ವಿಷ್ಣು ಮತ್ತು ಕೃಷ್ಣನನ್ನು ಪೂಜಿಸಲಾಗುತ್ತದೆ. ಈ ದಿನಾಂಕವನ್ನು ವಿಷ್ಣುವಿಗೆ ಸಮರ್ಪಿಸಲಾಗಿದೆ. ಏಕಾದಶಿಯಂದು ಭಗವಂತ ವಿಷ್ಣು ಮತ್ತು ಲಕ್ಷ್ಮಿಯನ್ನು ಪೂಜಿಸಿದ್ರೆ ಶುಭ. ಹಳದಿ ಶ್ರೀಗಂಧ ಮತ್ತು ಕುಂಕುಮವನ್ನು ಗುಲಾಬಿ ನೀರನಲ್ಲಿ ಬೆರೆಸಿ ದೇವರಿಗೆ ತಿಲಕ ಇಡಬೇಕು. ನಂತ್ರ ಆ ತಿಲಕವನ್ನು ನೀವು ಇಟ್ಟುಕೊಳ್ಳಬೇಕು. ನಂತ್ರ ಕೆಲಸಕ್ಕೆ ಹೋದ್ರೆ ನೀವು ಹೋದ ಕೆಲಸ ನೆರವೇರುತ್ತದೆ.
ಆರ್ಥಿಕ ಸಮಸ್ಯೆ ಕೊನೆಯಾಗಲು ಹೀಗೆ ಮಾಡಿ : ಜೀವನದಲ್ಲಿ ಹಣದ ಕೊರತೆಯಾಗಬಾರದು ಎಂದು ಪ್ರತಿಯೊಬ್ಬರು ಬಯಸ್ತಾರೆ. ಅದಕ್ಕೆ ಸಾಕಷ್ಟು ಪ್ರಯತ್ನ ಕೂಡ ನಡೆಸ್ತಾರೆ. ದೇವರ ಮೇಲೆ ನಂಬಿಕೆಯಿರುವವರು ಏಕಾದಶಿ ದಿನ ಇರುವೆಗಳಿಗೆ ಆಹಾರ ನೀಡಿ, ಆರ್ಥಿಕ ಸ್ಥಿತಿ ವೃದ್ಧಿಸಿಕೊಳ್ಳಬಹುದು. ಏಕಾದಶಿಯ ದಿನ ಉಪವಾಸ ಮಾಡುವ ಜೊತೆಗೆ ಆ ದಿನ ತೆಂಗಿನಕಾಯಿ ತೆಗೆದುಕೊಂಡು ಅದಕ್ಕೆ ಸಣ್ಣ ರಂಧ್ರ ಮಾಡಿ. ಅದ್ರಲ್ಲಿ ತುಪ್ಪವನ್ನು ಹಾಕಿ. ನಂತ್ರ ರಂಧ್ರವನ್ನು ಮುಚ್ಚಿ, ಅದನ್ನು ಇರುವೆ ಬಿಲದ ಬಳಿ ಮಣ್ಣಿನಲ್ಲಿ ಇಡಿ. ಇರುವೆ ಅದರ ಒಳಗೆ ಹೊಕ್ಕು ಸ್ವಲ್ಪ ಸ್ವಲ್ಪ ತಿನ್ನುತ್ತ ಬಂದಂತೆ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತ ಬರುತ್ತದೆ.
ವೀಳ್ಯದೆಲೆ ಉಪಾಯ : ಏಕಾದಶಿಯ ದಿನದಂದು ವೀಳ್ಯದೆಲೆಯ ಮೇಲೆ ರಂಗೋಲಿ ಅಥವಾ ಕುಂಕುಮ ಬಳಸಿ ಶ್ರೀ ಎಂದು ಬರೆಯಿರಿ. ನಂತ್ರ ಅದನ್ನು ವಿಷ್ಣುವಿಗೆ ಅರ್ಪಿಸಿ. ಪೂಜೆ ಮುಗಿದ ನಂತರ ಈ ಎಲೆಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಕಪಾಟಿನಲ್ಲಿ ಇಡಿ. ಹೀಗೆ ಮಾಡುವುದರಿಂದ ಉದ್ಯೋಗದಲ್ಲಿ ಶೀಘ್ರ ಬಡ್ತಿ ದೊರೆಯುತ್ತದೆ. ವ್ಯಾಪಾರ ಮಾಡುವವರಿಗೆ ಹೊಸ ಅವಕಾಶ ತೆರೆದುಕೊಳ್ಳುತ್ತವೆ.
ಬಾಲ್ಯದ ಸ್ವೀಟ್ ಹಾರ್ಟ್ ಜೀವನ ಸಂಗಾತಿ ಆಗ್ಲಿ ಅಂತಾರೆ ಈ ರಾಶಿಯ ಮಂದಿ
ಶ್ರೀಕೃಷ್ಣನಿಗೆ ಪೂಜೆ : ಏಕಾದಶಿಯಂದು ಶ್ರೀಕೃಷ್ಣನಿಗೆ ತೆಂಗಿನಕಾಯಿ ಮತ್ತು ಬಾದಾಮಿಯನ್ನು ಅರ್ಪಿಸಬೇಕು. ಪೂಜೆಯ ನಂತರ ಈ ತೆಂಗಿನಕಾಯಿ ಮತ್ತು ಬಾದಾಮಿಯನ್ನು ಚಿಕ್ಕ ಮಕ್ಕಳಿಗೆ ತಿನ್ನಲು ನೀಡಬೇಕು. 27 ಏಕಾದಶಿಯಂದು ಈ ಕೆಲಸ ಮಾಡಿದ್ರೆ ಎಲ್ಲ ಇಷ್ಟಾರ್ಥ ನೆರವೇರುತ್ತದೆ.
ಏಕಾದಶಿಯಂದು ಈ ಮಂತ್ರ ಪಠಿಸಿ : ಏಕಾದಶಿಯಂದು ವೃ ಮಾಡುವವರು, ಸ್ನಾನ ಮಾಡಿ, ಶುದ್ಧ ಬಟ್ಟೆ ಧರಿಸಿ ಓಂ ನಮೋ ಭಗವತೇ ವಾಸುದೇವಾಯ ಎಂಬ ಮಂತ್ರವನ್ನು ಜಪಿಸಬೇಕು. ಹೀಗೆ ಮಾಡಿದ್ರೆ ಬಂದ ಎಲ್ಲ ತೊಂದರೆ ಕೆಲವೇ ದಿನಗಳಲ್ಲಿ ಮಾಯವಾಗುತ್ತದೆ.
ಶನಿ ಕಾಟದಿಂದ ಈ ರಾಶಿಯವರಿಗೆ ಹೊಸ ವರ್ಷದಲ್ಲಿ ಸಿಗಲಿದೆ ಮುಕ್ತಿ, ನಿಮ್ಮ ರಾಶಿ ಇದ್ಯಾ?
ಸಂತಾನ ಪ್ರಾಪ್ತಿಗೆ ಹೀಗೆ ಮಾಡಿ : ಮಕ್ಕಳನ್ನು ಪಡೆಯಲು ಹಂಬಲಿಸುತ್ತಿರುವ ದಂಪತಿ, ಏಕಾದಶಿ ದಿನ ಸಂತಾನ ಗೋಪಾಲ ಮಂತ್ರವನ್ನು ಪಠಿಸಬೇಕು. ಪ್ರತಿ ಏಕಾದಶಿಯಂದು ಈ ಮಂತ್ರ ಜಪಿಸಿದ್ರೆ ಸಂತಾನ ಪ್ರಾಪ್ತಿಯಾಗುತ್ತದೆ.