ವಾಸ್ತು ಎಂದರೆ ಅದು ಎಲ್ಲಾ ವಿಷಯಗಳಿಗೂ ಸಂಬಂಧಿಸಿದೆ. ಮಕ್ಕಳ ಓದಿಗೂ ಸಂಬಂಧಿಸುತ್ತದೆ. ಮಕ್ಕಳು ಚೆನ್ನಾಗಿ ಓದಬೇಕು ಎಂದರೆ ಮನೆಯ ವಾಸ್ತು, ಅವರು ಓದುವ ಕೋಣೆಯ ವಾಸ್ತು ಸರಿಯಾಗಿರಬೇಕು. ಹಾಗಿದ್ದರೆ ಮಾತ್ರ ಮಕ್ಕಳ ಏಕಾಗ್ರತೆ ಹೆಚ್ಚಿ ಉತ್ತಮ ಫಲಿತಾಂಶ ಪಡೆಯುತ್ತಾರೆ. 

ವಾಸ್ತು ಸಂಬಂಧಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

-ಕೋಣೆಯ ಪಶ್ಚಿಮ ಮತ್ತು ನೈಋತ್ಯ ದಿಕ್ಕು ವಿದ್ಯಾಭ್ಯಾಸಕ್ಕೆ ಸೂಕ್ತವಾಗಿರುತ್ತದೆ.
- ವಿದ್ಯಾರ್ಥಿಗಳು ಪೂರ್ವದತ್ತ ಮುಖ ಮಾಡಿ ಅಭ್ಯಾಸ ಮಾಡುತ್ತಿದ್ದರೆ ಅವರು ಧಾರ್ಮಿಕ ಕಾರ್ಯಗಳಲ್ಲಿ ಜ್ಞಾನ ಪಡೆಯುತ್ತಾರೆ.
- ನೆನಪಿನ ಶಕ್ತಿ, ಸಾಮರ್ಥ್ಯ ಹೆಚ್ಚಬೇಕಾದರೆ ಓದುವ ಜಾಗದಲ್ಲಿ ವಾಶಿಂಗ್‌ಮಷಿನ್ ಯಾವತ್ತೂ ಇಡಬಾರದು.
- ಸ್ಟಡಿ ರೂಮಿನಲ್ಲಿ ಪಶ್ಚಿಮ ಅಥವಾ ನೈಋತ್ಯ ಭಾಗದಲ್ಲಿ ಲೈಬ್ರೆರಿ ಮಾಡುವುದು ಉತ್ತಮ.
- ಪಶ್ಚಿಮದತ್ತ ಮುಖ ಮಾಡಿ ಅಭ್ಯಾಸ ಮಾಡಿದರೆ ಮಕ್ಕಳು ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. 
- ಕೋಣೆಯ ದಕ್ಷಿಣ ಭಾಗದತ್ತ ಮುಖ ಮಾಡಿ ಅಭ್ಯಾಸ ಮಾಡುತ್ತಿದ್ದರೆ ಭಾಷಣ ಮಾಡುವ ಸಾಮರ್ಥ್ಯ, ಉದ್ಯಮಿಯಾಗುವ ಮುನ್ಸೂಚನೆಗಳು ಕಂಡು ಬರುತ್ತವೆ.
- ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ತೋರದಿದ್ದಲ್ಲಿ ಆ ವಿದ್ಯಾರ್ಥಿಗಳು ಪಶ್ಚಿಮ ಭಾಗದತ್ತ ಮುಖ ಮಾಡಿ ಅಭ್ಯಾಸ ಮಾಡುವಂತೆ ಸಲಹೆ ನೀಡಬೇಕು.
- ಸ್ಟಡಿ ರೂಮ್ ಬಣ್ಣ ಪಿಂಕ್‌ ಇದ್ದರೆ ಉತ್ತಮ. ವಾಸ್ತು ಶಾಸ್ತ್ರದ ಪ್ರಕಾರ ನಸು ಬಣ್ಣ ವಿದ್ಯಾರ್ಥಿಗಳ ಗ್ರಹಣ ಶಕ್ತಿಯನ್ನು ಹೆಚ್ಚಿಸುತ್ತದೆ.