ಕೆಲವರು ತುಂಬಾ ಕಷ್ಟ ಪಡುತ್ತಾರೆ. ಅವರು ಪಡುವ ಕಷ್ಟಕ್ಕೆ ಹೇಳುವಷ್ಟು ದುಡ್ಡು ಕೈ ಸೇರೋಲ್ಲ. ಆದರೆ, ಸೇರಿದ ದುಡ್ಡು ಉಳಿಯೋಲ್ಲ ಎನ್ನೋ ಚಿಂತೆ ಅವರನ್ನು ಕಿತ್ತು ತಿನ್ನುತ್ತದೆ. ಹಲವು ವಾಸ್ತು ದೋಷಗಳಿಂದ ಇಂಥ ಪರಿಸ್ಥಿತಿ ಬರಬಹುದು. ಆದರೆ, ಇದಕ್ಕಿವೆ ಇಲ್ಲಿ ಸಿಂಪಲ್ ಪರಿಹಾರ....

- ವಾಸ್ತು ಶಾಸ್ತ್ರದಲ್ಲಿ ಉಪ್ಪನ್ನು ಬಳಸುವ ಮೂಲಕ ಶ್ರೀಮಂತರಾಗಬಹುದು. ಅಲ್ಲದೇ ಉಪ್ಪು ನೆಗಟಿವ್ ಶಕ್ತಿಯನ್ನು ದೂರಗೊಳಿಸಿ, ಪಾಸಿಟಿವ್ ಎನರ್ಜಿಯನ್ನು ಸೃಷ್ಟಿಸುತ್ತದೆ. 

ಕೆಂಪು ರಿಬ್ಬನ್‌ನಲ್ಲಿ ಕಟ್ಟಿದ ನಾಣ್ಯ ಮನೆಗೆ ಶುಭ!

- ರಾಹುವಿನ ಪ್ರಭಾವದಿಂದ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಸಂದರ್ಭದಲ್ಲಿ ಉಪ್ಪನ್ನು ಗಾಜಿನ ತಟ್ಟೆಯಲ್ಲಿ ಹಾಕಿ ಬಾತ್ ರೂಮಿನಲ್ಲಿಟ್ಟರೆ ರಾಹುವಿನ ದುಷ್ಪರಿಣಾಮ ಕಡಿಮೆಯಾಗುತ್ತದೆ. ವಾಸ್ತು ದೋಷ ನಿವಾರಣೆಯಾಗುತ್ತದೆ. ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ. 

- ಉಪ್ಪು ಮತ್ತು ಕನ್ನಡಿಯನ್ನು ಜೊತೆಯಾಗಿ ಸೇರಿಸುವ ಮೂಲಕ ರಾಹುವಿನ ಪ್ರಭಾವವನ್ನು ಕಡಿಮೆ ಮಾಡಬಹುದು. ಜೊತೆಗೆ ನಿಮ್ಮಲ್ಲಿರುವ ಭಯವನ್ನೂ ಕಡಿಮೆ ಮಾಡಬಹುದು. 

- ಮನೆ ಪ್ರವೇಶ ದ್ವಾರದಲ್ಲಿ ಕೆಂಪು ಬಟ್ಟೆಯಲ್ಲಿ ಉಪ್ಪನ್ನು ಕಟ್ಟಿ ಇಡೋದರಿಂದ ಕೆಟ್ಟ ಶಕ್ತಿ ಹತ್ತಿರವೂ ಸುಳಿಯುವುದಿಲ್ಲ. ಅದೇ ಕೆಂಪು ಬಟ್ಟೆಯಲ್ಲಿ ಕಟ್ಟಿದ ಉಪ್ಪನ್ನು ಕಾರ್ಖಾನೆ, ಅಂಗಡಿ ಎದುರುಗಡೆ ಕಟ್ಟಿದರೆ ಹೆಚ್ಚು ಹೆಚ್ಚು ಆರ್ಥಿಕ ಅಭಿವೃದ್ಧಿಯಾಗುತ್ತದೆ. ನೀವೂ ಶ್ರೀಮಂತರಾಗಬಹುದು. 

ಬ್ಯುಸಿನೆಸ್‌ನ ಶ್ರೇಯಸ್ಸಿಗೆ ಆಫೀಸಲ್ಲಿರಲಿ ಇದು!

- ಒಂದು ಮುಷ್ಟಿಯಲ್ಲಿ ಉಪ್ಪನ್ನು ಹಿಡಿದು ವ್ಯಕ್ತಿಗೆ ಮೂರು ಬಾರಿ ಅದನ್ನು ಸುತ್ತಿ ಬಿಸಾಕಿದರೆ ಅದರಿಂದ ಕೆಟ್ಟ ದೃಷ್ಟಿ ಬೀಳುವುದಿಲ್ಲ ಹಾಗೂ ಕೆಟ್ಟ ದೃಷ್ಟಿ ಬಿದ್ದಿದ್ದರೆ ಅದು ನಿವಾರಣೆಯಾಗುತ್ತದೆ.

- ಸಣ್ಣ ಮಕ್ಕಳಿಗೆ ಸ್ನಾನ ಮಾಡಿಸುವ ನೀರಿನಲ್ಲಿ ಉಪ್ಪು ಹಾಕಿದರೆ ಕಾಗೆ ಕಣ್ಣು, ಗೂಬೆ ಕಣ್ಣು ತಾಗೋದಿಲ್ಲ.