ಫೆಂಗ್ ಶುಯಿ ಅನುಸಾರ ಡ್ರ್ಯಾಗನ್ ಎಂಬ ಲಕ್ಕಿ ಚಾರ್ಮ್ ಅನ್ನು ಆಫೀಸಿನಲ್ಲಿಟ್ಟರೆ ವ್ಯಾಪಾರದಲ್ಲಿ ಲಾಭ ಉಂಟಾಗುತ್ತದೆ. ಯಾಕೆಂದರೆ ಡ್ರ್ಯಾಗನ್ ಶಕ್ತಿಯ ಸಂಕೇತವಾಗಿದೆ. ಇದು ಒಬ್ಬ ವ್ಯಕ್ತಿಯ ಕ್ರಿಯಾಶೀಲತೆ ಮತ್ತು ಸೃಜನಶೀಲತೆ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಡ್ರ್ಯಾಗನ್ ಅನ್ನು ಆಫೀಸ್‌ನಲ್ಲಿ ಎಲ್ಲಿ ಮತ್ತು ಹೇಗೆ ಇಡಬೇಕು ನೋಡೋಣ... 

ಡ್ರ್ಯಾಗನ್ ಮಹತ್ವ ಏನು? 
ಡ್ರ್ಯಾಗನ್ ಪರಿಶ್ರಮಕ್ಕೆ ಸಫಲತೆ ಸಿಗುತ್ತದೆ ಮತ್ತು ಸಮೃದ್ಧಿ ಉಂಟಾಗುತ್ತದೆ. ಇದನ್ನು ಕಚೇರಿಯಲ್ಲಿ ಇಡೋದರಿಂದ ಉದ್ಯೋಗದಲ್ಲೂ ಲಾಭ ಉಂಟಾಗುತ್ತದೆ. 

ದುಡ್ಡು ಬೇಕಂದ್ರೆ ಜೇಬಲ್ಲಿ ಇವನ್ನ ಇಡ್ಬೇಡಿ...

ಹೇಗೆ ಆಯ್ಕೆ ಮಾಡುವುದು ? 
ಮರ, ಮಣ್ಣಿನ ಅಥವಾ ಕ್ರಿಸ್ಟಲ್‌ನಿಂದ ಮಾಡಿದ ಡ್ರ್ಯಾಗನ್ ಖರೀದಿಸಿ. ಸ್ಟೀಲ್, ಕಬ್ಬಿಣದಿಂದ ಮಾಡಿದ ಡ್ರ್ಯಾಗನ್ ಬೇಡ. ಯಾಕೆಂದರೆ ಇಂತಹ ಡ್ರ್ಯಾಗನ್‌ಗಳನ್ನು ಪೂರ್ವ ದಿಕ್ಕಿನಲ್ಲಿಟ್ಟರೆ ಅಶುಭ ಎನ್ನಲಾಗುತ್ತದೆ. 
ಇದ್ಯಾವುದು ಸಾಧ್ಯವಾಗದಿದ್ದರೆ ಡ್ರ್ಯಾಗನ್ ಪೈಂಟಿಂಗ್ ಕೂಡ ಇಡಬಹುದು. ಇದೂ ತುಂಬಾ ಎಫೆಕ್ಟಿವ್. 

ಎಲ್ಲಿಡಬೇಕು? 
ಪೂರ್ವ ದಿಕ್ಕಿನಲ್ಲಿ ಡ್ರ್ಯಾಗನ್ ಇಟ್ಟರೆ ಉತ್ತಮ. ಮರದಿಂದ ಮಾಡಿದಂತಹ ಡ್ರ್ಯಾಗನ್ ಪೂರ್ವ ದಿಕ್ಕಿನಲ್ಲಿ ಇಡಿ. ಇದರಿಂದ ವ್ಯಾಪಾರದಲ್ಲಿ ವೃದ್ಧಿಯಾಗುತ್ತದೆ. ರೆಸ್ಟೋರೆಂಟ್, ಅಂಗಡಿ, ಡಿಪಾರ್ಟ್ ಮೆಂಟಲ್ ಸ್ಟಾರ್ ಮೊದಲಾದೆಡೆ ಅಧಿಕ ಎನರ್ಜಿ ಬೇಕಾಗುತ್ತದೆ. ಇಂಥ ಜಾಗದಲ್ಲಿ ಪೂರ್ವ ದಿಕ್ಕಿನಲ್ಲಿ ಡ್ರ್ಯಾಗನ್ ಚಿತ್ರ ಇಟ್ಟರೆ ಉತ್ತಮ. 

ಮನೆ ಮಂದಿ ಸಂತೋಷವಾಗಿರಲು ಇಲ್ಲಿವೆ ವಾಸ್ತು ಟಿಪ್ಸ್!

ಬೆಡ್‌ರೂಂನಲ್ಲಿಡಬಹುದಾ?
ಮನೆಯಲ್ಲಿ ಡ್ರ್ಯಾಗನ್ ಮೂರ್ತಿ ಇಡಬೇಕು ಎಂದು ಬಯಸಿದರೆ ಅದನ್ನು ಬೆಡ್ ರೂಮಿನಲ್ಲಿ ಇರಬೇಡಿ. ಬೆಡ್ ರೂಮ್ ಆರಾಮ ಮಾಡುವಂತಹ ಜಾಗ. ಇಲ್ಲಿ ಡ್ರ್ಯಾಗನ್ ಇಡುವುದು ಉತ್ತಮ ಅಲ್ಲ. ಮನೆಯ ಒಂದೊಂದು ಕೊನೆಯಲ್ಲಿ ಒಂದೊಂದು ಪ್ರತಿಮೆ ಇಡಬೇಡಿ. ಪೂರ್ತಿ ಮನೆಗೆ ಒಂದೇ ಒಂದು ಪ್ರತಿಮೆ ಇಡಿ. ಬಾತ್ ರೂಮ್, ಅಲ್ಮಾರಿ ಮಾತು ಗ್ಯಾರೇಜ್ ಮೊದಲಾದ ಕಡಿಮೆ ಎನರ್ಜಿಯುಳ್ಳ ಜಾಗದಲ್ಲಿ ಡ್ರ್ಯಾಗನ್ ಇಡಬೇಡಿ.