Asianet Suvarna News Asianet Suvarna News

ಈ ನಿಗೂಢ ಸ್ಥಳದಲ್ಲಿವೆ 'ಕೋಟಿ' ವಿಗ್ರಹಗಳು; ಇದು ಶಾಪಗ್ರಸ್ತ ದೇವತೆಗಳ ಬೆಟ್ಟ..!

ತ್ರಿಪುರಾದಲ್ಲಿ 7-8ನೇ ಶತಮಾನದಷ್ಟು ಹಿಂದೆ ರಚಿತಗೊಂಡ ರಹಸ್ಯ ತಾಣವಿದೆ. ಇಲ್ಲಿ ಕಲ್ಲು ಮತ್ತು ಕಲ್ಲಿನ ಶಿಲ್ಪಗಳು ನೋಡಿದಷ್ಟೂ ಕಣ್ಣಿಗೆ ಬೀಳುತ್ತವೆ. ಅಲ್ಲಿ ಶಾಪಗ್ರಸ್ತ ಒಂದು ಕೋಟಿಗೆ ಒಂದು ಮಾತ್ರ ಕಮ್ಮಿಯಷ್ಟು ದೇವತೆಗಳ ವಿಗ್ರಹಗಳು ಇವೆ. ಶಿವನ ವಿಗ್ರಹ ಸೇರಿದಂತೆ ಕೋಟಿ ವಿಗ್ರಹಗಳು ಇವೆ. ಆ ಸ್ಥಳವೇ ಉನಕೋಟಿ.

history facts about mysterious hill unakoti Tripura suh
Author
First Published Jul 21, 2023, 12:01 PM IST

ತ್ರಿಪುರಾದಲ್ಲಿ 7-8ನೇ ಶತಮಾನದಷ್ಟು ಹಿಂದೆ ರಚಿತಗೊಂಡ ರಹಸ್ಯ ತಾಣ (secret place) ವಿದೆ. ಇಲ್ಲಿ ಕಲ್ಲು ಮತ್ತು ಕಲ್ಲಿನ ಶಿಲ್ಪಗಳು ನೋಡಿದಷ್ಟೂ ಕಣ್ಣಿಗೆ ಬೀಳುತ್ತವೆ. ಅಲ್ಲಿ ಶಾಪಗ್ರಸ್ತ ಒಂದು ಕೋಟಿಗೆ ಒಂದು ಮಾತ್ರ ಕಮ್ಮಿಯಷ್ಟು ದೇವತೆಗಳ ವಿಗ್ರಹಗಳು ಇವೆ. ಶಿವನ ವಿಗ್ರಹ ಸೇರಿದಂತೆ ಕೋಟಿ ವಿಗ್ರಹ (idol) ಗಳು ಇವೆ. ಆ ಸ್ಥಳವೇ ಉನಕೋಟಿ. ಈ ನಿಗೂಢ ರಹಸ್ಯ ಸ್ಥಳದ ಸಂಪೂರ್ಣ ಮಾಹಿತಿ ಇಲ್ಲಿದೆ.

ಉನಕೋಟಿ ಎಂದರೆ ಬೆಂಗಾಲಿ ಭಾಷೆಯಲ್ಲಿ 'ಕೋಟಿಗೆ ಒಂದು ಕಮ್ಮಿ ಎಂದರ್ಥ. ಉನಕೋಟಿಯು ಶೈವ ತೀರ್ಥಯಾತ್ರೆಗೆ ಪ್ರಸಿದ್ಧಿಯಾದ ಸ್ಥಳ. ಹಾಗೂ ಇದು ತ್ರಿಪುರಾ  (Tripura)ರಾಜ್ಯದ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿನ ಬೆಟ್ಟದಲ್ಲಿ ಕೆತ್ತಿದ ಕಲ್ಲಿನ ದೇವರ ಶಿಲ್ಪಗಳಿವೆ. ಕೆಲವು ವಿಗ್ರಹಗಳು 100 ಅಡಿಯಷ್ಟು ಎತ್ತರದಲ್ಲಿ ಇವೆ.

ಶಿವನು ಸೇರಿ ಕೋಟಿ ದೇವತೆಗಳು ತಂಗಿದ್ದ ತಾಣವಿದು 

ಉನಕೋಟೆಯು ನಿಗೂಢಗಳ ತಾಣ. ಇಲ್ಲಿನ ಆಕರ್ಷಕ ಕಥೆಯು ಶಿವನಿಗೆ ಸಂಬಂಧಿಸಿದೆ. ದಂತಕಥೆಗಳ ಪ್ರಕಾರ, ಶಿವನು ಕಾಶಿಗೆ ಹೋಗುವ ದಾರಿಯಲ್ಲಿ ಈ ಸ್ಥಳದಲ್ಲಿಯೇ ಒಂದು ರಾತ್ರಿ ತಂಗಿದ್ದನು. ಆತನ ಜೊತೆಯಲ್ಲಿ 99,99,999 ದೇವತೆಗಳು ಇದ್ದರು. ಅಂದರೆ ಶಿವನನ್ನು ಸೇರಿ ಕೋಟಿ ದೇವತೆಗಳು ಇಲ್ಲಿ ತಂಗಿದ್ದರು.

ಚಿತ್ರ ನಕ್ಷತ್ರದಲ್ಲಿ ಕೇತು ಸಂಕ್ರಮಣ; 5 ರಾಶಿಯವರ ಭವಿಷ್ಯದಲ್ಲಿ ಏರು-ಪೇರು

 

ಶಿವನ ಶಾಪದಿಂದ ಕಲ್ಲುಗಳಾದ ದೇವತೆಗಳು

ಉನಕೋಟಿಯ ಕಥೆ ಇಷ್ಟಕ್ಕೇ ಮುಗಿಯಲ್ಲ. ಅಲ್ಲಿ ಶಾಪದ ಕತೆಯಿದೆ. ಶಿವ ಹಾಗೂ ದೇವತೆಗಳು ರಾತ್ರಿ ಎಲ್ಲಿಯೇ ಮಲಗುತ್ತಾರೆ. ರಾತ್ರಿಯ ವಿಶ್ರಾಂತಿಯ ನಂತರ ಮರುದಿನ ಬೆಳಿಗ್ಗೆ ಶಿವನು ಮಾತ್ರ ಎಚ್ಚರಗೊಂಡನು ಎಂದು ಹೇಳಲಾಗುತ್ತದೆ. ಆದರೆ  ಎಲ್ಲಾ ದೇವತೆಗಳು ಇನ್ನೂ ಮಲಗಿದ್ದರು. ಇದರಿಂದ ಕೋಪಗೊಂಡ ಶಿವನು ಕಾಶಿಗೆ ಹೊರಡುವ ಮೊದಲು, ಅಲ್ಲಿದ್ದ ಎಲ್ಲಾ ದೇವ-ದೇವತೆಗಳ ಮೇಲೆ ಶಾಪವನ್ನು ಹಾಕಿದನು. ನೀವೆಲ್ಲಾ ಕಲ್ಲಾಗಳಾಗಿ ಎಂದು  ಶಿವನು ಶಾಪ ನೀಡಿದನು. ಹೀಗಾಗಿ ಅಲ್ಲಿದ್ದ ದೇವ-ದೇವತೆಯರು ಕಲ್ಲುಗಳು ಆದರು ಎಂದು ಹೇಳುತ್ತದೆ ಸ್ಥಳ ಪುರಾಣ. ಹೀಗೆ ಈ ತಾಣವು ಅಸ್ತಿತ್ವಕ್ಕೆ ಬಂದಿತು ಎನ್ನಲಾಗಿದೆ. ಶಿವನನ್ನು ಬಿಟ್ಟು ಉಳಿದ ಒಂದು ಕೋಟಿಗೆ ಒಂದು ಕಮ್ಮಿಯಷ್ಟು ದೇವತೆಗಳು ಅಲ್ಲಿ ಕಲ್ಲಾದರು. ಆದ್ದರಿಂದ ಇದಕ್ಕೆ ಉನಕೋಟಿ ಎಂದು ಹೆಸರು ಬಂದಿದೆ, ಅಂದರೆ ಒಂದು ಕೋಟಿಗಿಂತ ಕಡಿಮೆ ಎಂದರ್ಥ.

ಕಾಲಭೈರವೇಶ್ವರ ಸೇರಿ ಕೋಟಿ ವಿಗ್ರಹಗಳು

ಉನಕೋಟಿ ( unakoti ) ಯಲ್ಲಿ ಉನಕೋಟೀಶ್ವರ ಕಾಲಭೈರವೇಶ್ವರ ಒಂದು ವಿಶೇಷ ಆಕರ್ಷಣೆ. ಇದು ಬೃಹತ್‌ ಬಂಡೆಯಲ್ಲಿ ಕೆತ್ತಲಾಗಿರುವ ಶಿವನ ತಲೆ. ಈ ಕೆತ್ತನೆಯು 30 ಅಡಿ ಎತ್ತರವಿದೆ. ಕೋಟಿ ದೇವರುಗಳಿರುವ ಈ ಆಲಯದಲ್ಲಿ ದುರ್ಗಾ, ಪಾರ್ವತಿ, ಗಣಪತಿ, ಈಶ್ವರ, ಭೈರವಿ ಸರಸ್ವತಿ ಇನ್ನೂ ಮುಂತಾದ ದೇವರುಗಳ ವಿಗ್ರಹಗಳಿವೆ. ಇದರ ಜೊತೆಗೆ ಆಯಾ ದೇವರುಗಳ ವಾಹನ (Vehicle) ವನ್ನೂ ಇಲ್ಲಿ ಕೆತ್ತಲಾಗಿದೆ.

ಬುಧಾದಿತ್ಯ ಸಂಯೋಗ; ಈ ನಾಲ್ಕು ರಾಶಿಯವರಿಗೆ ರಾಜಯೋಗ, ಹಣದ ಮಳೆ

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios