ಚಿತ್ರ ನಕ್ಷತ್ರದಲ್ಲಿ ಕೇತು ಸಂಕ್ರಮಣ; 5 ರಾಶಿಯವರ ಭವಿಷ್ಯದಲ್ಲಿ ಏರು-ಪೇರು
ಎಲ್ಲಾ 12 ರಾಶಿಚಕ್ರಗಳ ಮೇಲೆ ಕೇತು ಸಂಕ್ರಮಣ ಪ್ರಭಾವ ಬೀರುತ್ತದೆ. ಕೇತು ಕೆಲವು ರಾಶಿ ಚಕ್ರದ ಚಿಹ್ನೆಗಳ ಮೇಲೆ ಶುಭ ಮತ್ತು ಕೆಲವು ರಾಶಿ ಚಕ್ರದ ಮೇಲೆ ಅಶುಭ ಪರಿಣಾಮವನ್ನು ಬೀರುವ ಒಂದು ಗ್ರಹಿಕೆಗೆ ಸಿಕ್ಕಿದ ಗ್ರಹವಾಗಿದೆ. ಯಾವ ರಾಶಿಯವರಿಗೆ ಕೇತು ಸಂಕ್ರಮಣದ ತೊಂದರೆ ಎಂಬ ಮಾಹಿತಿ ಇಲ್ಲಿದೆ.
ಎಲ್ಲಾ 12 ರಾಶಿಚಕ್ರಗಳ ಮೇಲೆ ಕೇತು ಸಂಕ್ರಮಣ ಪ್ರಭಾವ ಬೀರುತ್ತದೆ. ಕೇತು ಕೆಲವು ರಾಶಿ ಚಕ್ರದ ಚಿಹ್ನೆಗಳ ಮೇಲೆ ಶುಭ ಮತ್ತು ಕೆಲವು ರಾಶಿ ಚಕ್ರದ ಮೇಲೆ ಅಶುಭ ಪರಿಣಾಮವನ್ನು ಬೀರುವ ಒಂದು ಗ್ರಹಿಕೆಗೆ ಸಿಕ್ಕಿದ ಗ್ರಹವಾಗಿದೆ. ಯಾವ ರಾಶಿಯವರಿಗೆ ಕೇತು ಸಂಕ್ರಮಣದ ತೊಂದರೆ ಎಂಬ ಮಾಹಿತಿ ಇಲ್ಲಿದೆ.
ನಿಗೂಢ ಗ್ರಹ ಕೇತುವು ಜೂನ್ 26ರಂದು ಚಿತ್ರ ನಕ್ಷತ್ರವನ್ನು ಪ್ರವೇಶಿಸಿದೆ. ಕೇತುವಿನ ಈ ಸಂಕ್ರಮಣದ ಪರಿಣಾಮ 5 ರಾಶಿಗಳಿಗೆ ಸೇರಿದವರ ವೃತ್ತಿ ಮತ್ತು ಕೌಟುಂಬಿಕ ಜೀವನದ ಮೇಲೆ ಇರುತ್ತದೆ. ನೆರಳು ಗ್ರಹ ಎಂದು ಕರೆಯಲ್ಪಡುವ ಕೇತುವಿಗೆ ಯಾವುದೇ ಭೌತಿಕ ರೂಪವಿಲ್ಲ. ಕೇತು ಹಿಮ್ಮುಖ ಗ್ರಹವಾಗಿದ್ದು, ಅದು ವ್ಯಕ್ತಿಯ ಜೀವನದಲ್ಲಿ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಇದು ಸಾಮಾನ್ಯವಾಗಿ ಹಿಂದಿನ ಜೀವನದ ಪ್ರಭಾವಗಳೊಂದಿಗೆ ಸಂಬಂಧಿಸಿದೆ. ಚಿತ್ರಾ ನಕ್ಷತ್ರವು ಚಂದ್ರನ ವೃತ್ತದಲ್ಲಿ 14ನೇ ನಕ್ಷತ್ರವಾಗಿದೆ ಮತ್ತು ಇದನ್ನು ದೈವಿಕ ಆಕಾಶ ವಾಸ್ತುಶಿಲ್ಪಿ ವಿಶ್ವಕರ್ಮ ಆಳುತ್ತಾನೆ. ಚಿತ್ರ ನಕ್ಷತ್ರವು ಸೃಜನಶೀಲತೆ, ಕಲಾತ್ಮಕತೆ, ಸೌಂದರ್ಯ ಮತ್ತು ರೂಪಾಂತರದೊಂದಿಗೆ ಸಂಬಂಧಿಸಿದೆ.
ಜೂನ್ 26ರಂದು ಚಿತ್ರ ನಕ್ಷತ್ರದಲ್ಲಿ ಕೇತು ಸಂಕ್ರಮಣವು 5 ರಾಶಿಚಕ್ರ ಚಿಹ್ನೆಗಳಿಗೆ ಸೇರಿದ ಜನರ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಈ ಅವಧಿಯಲ್ಲಿ ಹಣಕಾಸಿನ ಸಮಸ್ಯೆಳು ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ಕೇತುವಿನ ಸಂಕ್ರಮಣದಿಂದ ಯಾವ ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಯೋಣ.
ಮಿಥುನ ರಾಶಿ (Gemini)
ಈ ಸಂಚಾರವು ಮಿಥುನ ರಾಶಿಯ ಜನರ ಪ್ರೇಮ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ನಿಮ್ಮ ಪ್ರಣಯ ಸಂಬಂಧಗಳಲ್ಲಿ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬಹುದು. ಇದರ ಹೊರತಾಗಿ, ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಕೇಂದ್ರೀಕರಿಸುವುದು ಸವಾಲಿನ ಸಂಗತಿಯಾಗಿದೆ. ಇದಲ್ಲದೆ, ನಿಮ್ಮ ಮಕ್ಕಲಿಗೆ ಸಂಬಂಧಿಸಿದಂತೆ ನೀವು ತೊಂದರೆಗಳನ್ನು ಎದುರಿಸಬಹುದು. ಏಕೆಂದರೆ ಅವರು ನಿಮ್ಮ ಸಲಹೆಯನ್ನು ಗಮನಿಸುವುದಿಲ್ಲ.
ಕರ್ಕಾಟಕ ರಾಶಿ (Cancer)
ಚಿತ್ರಾ ನಕ್ಷತ್ರದಲ್ಲಿ ಕೇತುವಿನ ಸಂಕ್ರಮಣದ ಸಮಯದಲ್ಲಿ, ಕರ್ಕಾಟಕ ರಾಶಿಯವರಿಗೆ ಕೇತುವು ನಾಲ್ಕನೇ ಮನೆಯಲ್ಲಿರುತ್ತದೆ. ನಿಮ್ಮ ತಾಯಿಗೆ ಆರೋಗ್ಯ ಸಮಸ್ಯೆಗಳು ಕಂಡು ಬರಬಹುದು. ನಿಮ್ಮ ಕೌಟುಂಬಿಕ ಜೀವನವು ಸಾಕಷ್ಟು ಅಸ್ತವ್ಯಸ್ತವಾಗಿರಬಹುದು. ಮನೆಯಲ್ಲಿ ವಾತಾವರಣವು ಉದ್ವಿಗ್ನವಾಗಬಹುದು, ಆದರೂ ವಿಷಯಗಳು ಕ್ರಮೇಣ ಸುಧಾರಿಸುತ್ತವೆ.
ಕಷ್ಟ ಅಷ್ಟೇ ಅಲ್ಲ, ಸಂಪತ್ತನ್ನೂ ನೀಡುತ್ತಾನೆ ಶನಿದೇವ; ಈ ಮೂರು ರಾಶಿಯವರಿಗೆ ಇನ್ಮುಂದೆ ಹ್ಯಾಪಿ ಲೈಫ್..!
ಕನ್ಯಾ ರಾಶಿ (Virgo )
ಚಿತ್ರಾ ನಕ್ಷತ್ರದಲ್ಲಿ ಕೇತುವಿನ ಸಂಚಾರವು ಕನ್ಯಾ ರಾಶಿಯ ಜನರ ಮಾತು ಮತ್ತು ಸಂವಹನದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಮಾತುಗಳು ತೀಕ್ಷ್ಣವಾಗಿರಬಹುದು, ಇದರಿಂದಾಗಿ ಜನರಲ್ಲಿ ಅಪಾರ್ಥಗಳು ಉಂಟಾಗಬಹುದು. ಈ ಅವಧಿಯು ನಿಮ್ಮ ಮತ್ತು ನಿಮ್ಮ ಕುಟುಂಬದ ನಡುವೆ ಅಂತರವನ್ನು ಉಂಟುಮಾಡಬಹುದು ಅಥವಾ ನಿಮ್ಮ ಸಂಬಂಧಗಳಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಬಹುದು. ಇದು ನಿಮ್ಮ ಆದಾಯದಲ್ಲಿ ಏರಿಳಿತಗಳಿಗೆ ಕಾರಣವಾಗಬಹುದು. ಇದು ಹಣವನ್ನು ಉಳಿಸುವುದನ್ನು ಸವಾಲಾಗಿ ಮಾಡುತ್ತದೆ. ಈ ಸಮಯದಲ್ಲಿ ಹಣಕಾಸಿನ ವಿಷಯಗಳನ್ನು ಎಚ್ಚರಿಕೆಯಿಂದ ಪರಿಗಣಿಸಬೇಕು.
ಮಕರ ರಾಶಿ (Capricorn)
ಚಿತ್ರಾ ನಕ್ಷತ್ರದಲ್ಲಿ ಕೇತುವಿನ ಸಂಕ್ರಮಣದಿಂದಾಗಿ ಮಕರ ರಾಶಿಯವರು ತಮ್ಮ ತಂದೆಯೊಂದಿಗೆ ಭಿನ್ನಾಭಿಪ್ರಾಯಗಳನ್ನು ಅನುಭವಿಸಬಹುದು. ಯಶಸ್ಸನ್ನು ಸಾಧಿಸಲು ಕಠಿಣಪರಿಶ್ರಮ ಬೇಕಾಗಬಹುದು. ನಿಮ್ಮ ವೃತ್ತಿಪರ ಜೀವನದಲ್ಲಿ ನೀವು ಅನೇಕ ಸವಾಲುಗಳನ್ನು ಎದಿರಿಸಬಹುದು. ಮಾನಸಿಕ ಒತ್ತಡ ಮತ್ತು ಕೆಲಸದಲ್ಲಿ ವಿರೋಧಕ್ಕೆ ಸಿದ್ಧರಾಗಿರಿ. ನಿಮ್ಮ ಖ್ಯಾತಿಯನ್ನು ಕಾಪಾಡಿಕೊಳ್ಳುವುದು ಅವಶ್ಯಕ, ಏಕೆಂದರೆ ಅದು ಅಪಾದಲ್ಲಿದೆ.
ಮೀನ ರಾಶಿ ( Pisces )
ಮೀನ ರಾಶಿಯವರಿಗೆ ಕೇತುವು ಎಂಟನೇ ಮನೆಯಲ್ಲಿ ಸ್ಥಿರವಾಗಿರುವುದರಿಂದ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ಆರೋಗ್ಯವು ಕಳವಳಕ್ಕೆ ಕಾರಣವಾಗಬಹುದು. ಆದ್ದರಿಂದ ಈ ಅವಧಿಯಲ್ಲಿ ಹೆಚ್ಚು ಜಾಗರೂಕರಾಗಿರಿ. ಅಪಘಾತಗಳು ಮತ್ತು ರೋಗಗಳು ಸಂಭವನೀಯ ಅಪಾಯಗಳಿವೆ. ನಿಮ್ಮ ತೊಂದರೆಗಳು ಹಾಗೂ ಚಿಂತೆಗಳು ಸಹ ಹೆಚ್ಚಾಗಬಹುದು.
ಬುಧಾದಿತ್ಯ ಸಂಯೋಗ; ಈ ನಾಲ್ಕು ರಾಶಿಯವರಿಗೆ ರಾಜಯೋಗ, ಹಣದ ಮಳೆ