ಕೌರವರು ಹಾಗೂ ಪಾಂಡವರ ನಡುವಿನ ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ಕೃಷ್ಣ ಪರಮಾತ್ಮ ಅರ್ಜುನನಿಗೆ ಬೋಧಿಸಿದ ಭಗವದ್ಗೀತೆ ಅಂದಿನಿಂದ ಇಂದಿನವರೆಗೂ ಹಿಂದೂಗಳಿಗೆ ಅತಿ ಪವಿತ್ರ ಬೋಧನೆಯಾಗಿದೆ. ಇಹಪರದ ಕುರಿತು ಮನುಷ್ಯನ ಮನಸ್ಸಿನಲ್ಲಿ ಮೂಡುವ ಯಾವುದೇ ಪ್ರಶ್ನೆಗಳಿಗೆ ಭಗವದ್ಗೀತೆಯಲ್ಲಿ ಉತ್ತರವಿದೆ. ಸುಮಾರು 700 ಪದ್ಯಗಳನ್ನು ಹೊಂದಿರುವ ಸಂಸ್ಕೃತದ ಈ ಬೋಧನೆಯಲ್ಲಿ ಜಗತ್ತಿನ ಕೋಟ್ಯಂತರ ಜನರು ಸಮಾಧಾನ, ಜ್ಞಾನ, ಸಂತೋಷ ಕಂಡುಕೊಳ್ಳುತ್ತಿದ್ದಾರೆ. ಮಹಾಭಾರತದ ಭಾಗವಾಗಿರುವ ಭಗವದ್ಗೀತೆಯು ಹಲವಾರು ಭಾಷೆಗಳಿಗೆ ತರ್ಜುಮೆಯಾಗಿದ್ದು, ಇದರ ಕುರಿತು ಕೇಳಿದವರೂ ಕೇಳದೆ ಉಳಿದದ್ದು ಹಲವು. ಭಗವದ್ಗೀತೆ ಕುರಿತ ಅಚ್ಚರಿಯ ವಿಷಯಗಳಿವು. 

-  ಕೃಷ್ಣ ಬೋಧಿಸುವಾಗ ಕೇಳಿದ್ದು ಕೇವಲ ಅರ್ಜುನ ಅಲ್ಲ
ಕೃಷ್ಣನಿಂದ ನೇರವಾಗಿ ಭಗವದ್ಗೀತೆಯ ಜ್ಞಾನ ಪಡೆದದ್ದು ಕೇವಲ ಅರ್ಜುನ ಅಲ್ಲ, ಈ ಸಂದರ್ಭದಲ್ಲಿ ಹನುಮಂತ, ಸಂಜಯ ಹಾಗೂ ಬಾರ್ಬಾರಿಕ್ ಕೂಡಾ ಪೂರ್ತಿ ನಿರೂಪಣೆಯನ್ನು ಕೇಳಿದ್ದರು. ಹನುಮಂತ ಅರ್ಜುನನ ರಥದೊಂದಿಗೆ ಇದ್ದರೆ, ಸಂಜಯ ಹಾಗೂ ಘಟೋತ್ಕಜನ ಪುತ್ರ ಬಾರ್ಬಾರಿಕ್ ಹತ್ತಿರದ ಗುಡ್ಡದ ಮೇಲಿಂದ ಎಲ್ಲವನ್ನೂ ನೋಡುತ್ತಿದ್ದರು. 

ಆತ್ಮವಿಶ್ವಾಸದಿಂದ ಕೊರೋನಾ ಎದುರಿಸಲು ವೈದ್ಯರಿಗೆ ಗೀತೆ...

-  ಕೇಳಲು ತಯಾರಿಲ್ಲದ ದುರ್ಯೋಧನ

ಭಗವದ್ಗೀತೆಯನ್ನು ದುರ್ಯೋಧನನಿಗೆ ಕೂಡಾ ಬೋಧಿಸಲು ಕೃಷ್ಣ ಪ್ರಯತ್ನಿಸಿದ. ಆದರೆ ಏನು ಸರಿ, ಯಾವುದು ತಪ್ಪು ಎಂದು ನನಗೆ ಗೊತ್ತಿದೆ ಎಂದ ದುರ್ಯೋಧನ ಅದನ್ನು ಕೇಳಲು ಸಿದ್ಧನಿರಲಿಲ್ಲ. ಇಷ್ಟಕ್ಕೂ ದುರ್ಯೋಧನ ಭಗವದ್ಗೀತೆ ಕೇಳಿದ್ರೆ ಅಲ್ಲಿ ಮಹಾಭಾರತ ಯುದ್ಧವೇ ಆಗುತ್ತಿರಲಿಲ್ಲ ಬಿಡಿ. 

- 18ರ ನಂಟು
ಮಹಾಭಾರತ ಹಾಗೂ ಭಗವದ್ಗೀತೆ ಎರಡಕ್ಕೂ 18 ಸಂಖ್ಯೆಯೊಂದಿಗೆ ಸಿಕ್ಕಾಪಟ್ಟೆ ನಂಟಿದೆ. ಕುರುಕ್ಷೇತ್ರ ಯುದ್ಧ ನಡೆದಿದ್ದು 18 ದಿನಗಳ ಕಾಲ, ಗೀತೆಯಲ್ಲಿರುವ ಅಧ್ಯಾಯಗಳ ಸಂಖ್ಯೆ 18. ತ್ಯಾಗದ ಧರ್ಮಾಚರಣೆಗೆ 18 ಜನ ಬೇಕು. ಸಂಸ್ಕೃತದಲ್ಲಿ 18 ಎಂದ ಪದದ ಅರ್ಥವೇ ತ್ಯಾಗ. 
ಮಹಾಭಾರತದಲ್ಲಿ ಅಕ್ಷೋಹಿಣಿ ಸೇನೆ ಬಳಸಿದ್ದು ಗೊತ್ತಷ್ಟೇ. ಕುರುಕ್ಷೇತ್ರ ಯುದ್ಧದಲ್ಲಿ ಒಂದು ಅಕ್ಷೋಹಿಣಿಯಲ್ಲಿ 21, 870 ಆನೆಗಳು, 21,870 ರಥಗಳು, 65,610 ಅಶ್ವದಳ, 109,350 ಕಾಲಾಳು ಪಡೆ ಇದ್ದವು. ಇದರಲ್ಲಿ ಎಲ್ಲ ಸಂಖ್ಯೆಗಳನ್ನೂ ಆಯಾ ಗ್ರೂಪ್ನಲ್ಲಿ ಕೂಡಿಸಿದರೆ ಒಟ್ಟು ಮೊತ್ತ 18  ಬರುತ್ತದೆ. ಇನ್ನು ಪಾಂಡವರ ಸೇನೆ 7 ಅಕ್ಷೋಹಿಣಿ ಹಾಗೂ ಕೌರವರ ಸೇನೆ 11 ಅಕ್ಷೋಹಿಣಿಗಳನ್ನು ಹೊಂದಿತ್ತು. ಅಂದರೆ, ಒಟ್ಟು 18 ಅಕ್ಷೋಹಿಣಿಗಳು ಕುರುಕ್ಷೇತ್ರ ಯುದ್ಧದಲ್ಲಿ ಭಾಗವಹಿಸಿದ್ದವು. 

- ಐನ್‌ಸ್ಟೀನ್ ಮೆಚ್ಚಿದ ಗೀತೆ
ಗೀತೆಯನ್ನು ಮೆಚ್ಚಿ ನಂಬುವುದು ಕೇವಲ ಭಾರತೀಯರಲ್ಲ, ಜಗತ್ಪ್ರಸಿದ್ಧ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಸಹ ಭಗವದ್ಗೀತೆಯನ್ನು ಅನುಸರಿಸುತ್ತಿದ್ದರು. ಭಗವದ್ಗೀತೆಯಿಂದ ಕಲಿತ ವಿಷಯಗಳ ಬಗ್ಗೆ ಹೇಳುವಾಗ ಐನ್‌ಸ್ಟೀನ್ ಹೇಳಿದ್ದರು, 'ನಾನು ಭಗವದ್ಗೀತೆಯನ್ನು ಓದಿದಾಗ, ದೇವರು ಈ ವಿಶ್ವವನ್ನು ಹುಟ್ಟುಹಾಕಿದ ಕುರಿತ ವಿಷಯಗಳನ್ನು ಓದುವಾಗ ಉಳಿದವೆಲ್ಲವೂ ಸುಳ್ಳೆನಿಸಿಬಿಡುತ್ತದೆ. ನಾವು ಭಾರತೀಯರಿಗೆ ಸದಾ ಕೃತಜ್ಞರಾಗಿರಬೇಕು. ಅವರು ನಮಗೆ ಎಣಿಸುವುದನ್ನು ಕಲಿಸಿರಲಿಲ್ಲವೆಂದರೆ ಹೇಳಿಕೊಳ್ಳುವಂಥ ಯಾವುದೇ ವೈಜ್ಞಾನಿಕ ಅನ್ವೇಷಣೆಯೂ ಸಾಧ್ಯವಿರಲಿಲ್ಲ.'

ಭಗವದ್ಗೀತೆ ಕ್ವಿಜ್‌ನಲ್ಲಿ ಮುಸ್ಲಿಂ ಬಾಲಕ ಪ್ರಥಮ

- ಭಗವದ್ಗೀತೆ ಮಾತಾದರೂ ಗೀತೆಯೆಂದೇ ಪರಿಗಣಿಸಲ್ಪಟ್ಟಿದೆ
ಗೀತೆಯನ್ನು ಹೇಳುವಾಗ ಅನುಸ್ತೂಪ್ ಎಂಬ ಪ್ರಾಸ ಪದ್ಧತಿ ಬಳಸಲಾಗುತ್ತದೆ. ಪ್ರತಿ ಪದ್ಯದಲ್ಲೂ 32 ಉಚ್ಛಾರಾಂಶಗಳಿರುತ್ತವೆ. 

- ಸಾರ್ವಕಾಲಿಕ
ಗೀತೆಯನ್ನು ರಚಿಸಿದ್ದು ಬಹಳ ಪುರಾತನ ಕಾಲದಲ್ಲಾದರೂ ಇಂದಿಗೂ ಕೂಡಾ ಮನುಷ್ಯನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಹೇಳುತ್ತಾ, ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ಕೆಲಸವನ್ನು ಭಗವದ್ಗೀತೆ ಮಾಡುತ್ತದೆ. ಭಗವದ್ಗೀತೆ ಸಾರ್ವಕಾಲಿಕ ಸತ್ಯವಾಗಿದೆ. 

- 175 ಭಾಷೆಗೆ ತರ್ಜುಮೆ
ಸಂಸ್ಕೃತ ಮೂಲದಲ್ಲಿ ರಚನೆಯಾದ ಭಗವದ್ಗೀತೆ ಇಂದು ಸುಮಾರು 175 ಭಾಷೆಗಳಿಗೆ ತರ್ಜುಮೆಯಾಗಿದೆ ಎಂದರೆ ಅದರ ಸತ್ವ ಎಷ್ಟು ಗಟ್ಟಿಯಾದುದಿರಬಹುದು?!

ಭಗವದ್ಗೀತೆಯ 18 ಅಧ್ಯಯಗಳಲ್ಲಿ ಕೃಷ್ಣ ಹೇಳಿದ್ದೇನು?