ಗ್ರಹಣ ಕಾಲದಲ್ಲಿ ಏನು ಮಾಡಬೇಕು, ಏನು ಮಾಡಬಾರದು?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 27, Jul 2018, 11:42 AM IST
Does and do nots during lunar eclipse
Highlights

ಭಾರತದಲ್ಲಿ ದೇವರ ಮೇಲೆ ನಂಬಿಕೆ ಇರುವವರು ಹೆಚ್ಚು. ಅದರಲ್ಲಿಯೂ ಗ್ರಹಣ ಕಾಲದಲ್ಲಿ ಕೆಲವೊಂದು ವಿಧಿ ವಿಧಾನಗಳನ್ನು ಆಚರಿಸಬೇಕು, ಆಚರಿಸಬಾರದೆಂಬ ನಂಬಿಕೆ ಇರುತ್ತದೆ. ಗ್ರಹಣ ಕಾಲದಲ್ಲಿ ಹಾಗೂ ಬೇರೆ ಸಂದರ್ಭಗಳಿಗೂ ಅಪ್ಲೈ ಆಗುವಂಥ ಕೆಲವು ವಾಸ್ತು ಟಿಪ್ಸ್ ಇಲ್ಲಿವೆ....

ಮಹಾಭಾರತ, ಪದ್ಮ ಪುರಾಣ ಮತ್ತು ಕೆಲವು ಸ್ಮೃತಿ ಗ್ರಂಥಗಳಲ್ಲಿ ಮನುಷ್ಯ ಹೇಗಿರಬೇಕು, ಹಾಗೂ ಮನೆಯಲ್ಲಿ ಯಾವ ರೀತಿ ಇದ್ದರೆ ಉತ್ತಮ ಎಂಬುದನ್ನು ತಿಳಿಸಿದ್ದಾರೆ. ಯಾಕೆಂದರೆ ಆದರೆ ನೇರ ಪರಿಣಾಮ ನಮ್ಮ ಅರೋಗ್ಯ, ಸಮೃದ್ಧಿ ಮತ್ತು ಶಾಂತಿ ಮೇಲೆ ಬೀಳುತ್ತದೆ. ನಾವು ಪ್ರತಿದಿನ ಬಳಸುವ ಹಾಸಿಗೆಯಿಂದ ಹಿಡಿದು ತಿನ್ನುವ ಆಹಾರಗಳವರೆಗೂ ತನ್ನದೇ ಆದ ರೀತಿ ನೀತಿಗಳಿವೆ....
ವಾಸ್ತುವಿನ ಪ್ರಕಾರ ಗ್ರಹಣ ಕಾಲೇ ಏನು ಮಾಡಬೇಕು?

ಅಲ್ಮೆರಾವನ್ನು ತೆರೆದಿಡಬೇಡಿ: ಅಲ್ಮೆರಾವನ್ನು ತೆರೆದಿಡುವುದರಿಂದ ಋಣಾತ್ಮಕ ಶಕ್ತಿ ಹೆಚ್ಚುತ್ತದೆ. ಬೀರುವಿನಲ್ಲಿ ಶುಕ್ರ ವಾಸ ಮಾಡುತ್ತಾನೆ. ಇದನ್ನು ತೆರೆದಿಟ್ಟರೆ ಹಣ ನಿಲ್ಲುವುದಿಲ್ಲ. 

ಹಾಲನ್ನು ತೆರೆದಿಡಬೇಡಿ: ಹಾಲಿನ ಮೇಲೆ ಚಂದ್ರನ ಪ್ರಭಾವ ಬೀರುತ್ತದೆ. ಹಾಲನ್ನು ತೆರೆದಿಡುವುದರಿಂದ ಅಡುಗೆ ಕೋಣೆಯಲ್ಲಿ ಕೆಲಸ ಮಾಡುವವರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಇಂಥ ಮನೆಯಲ್ಲಿ ಮಹಿಳೆಯರು ಹೆಚ್ಚಾಗಿ ಅನಾರೋಗ್ಯ ಪೀಡಿತರಾಗುತ್ತಾರೆ. 

ಬಾತ್ ರೂಮ್ ಬಾಗಿಲು: ಉಪಯೋಗ ಮಾಡದಿದ್ದ ಸಮಯದಲ್ಲಿ ಬಾತ್ ರೂಮ್ ಅನ್ನು ಬಂದ್ ಮಾಡಿಡಿ. ಬಾತ್ ರೂಮ್ ಬಾಗಿಲನ್ನು ತೆರೆದಿಡುವುದರಿಂದ ನಕಾರಾತ್ಮಕ ಶಕ್ತಿ ಮನೆ ತುಂಬಾ ಪಸರಿಸುತ್ತದೆ.

ಡಸ್ಟ್ ಬಿನ್ ಮತ್ತು ಪೊರಕೆಯನ್ನು ಹೊರ ಇಡಬೇಡಿ: ಮನೆಯಲ್ಲಿ ಧನಾತ್ಮಕ ಶಕ್ತಿ ಕಡಿಮೆಯಾಗುತ್ತದೆ. ಮನೆಯ ಮಂದಿಯಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ.

 

ಮತ್ತಷ್ಟು ವಾಸ್ತು ಸುದ್ದಿಗಳು...

ಈ ಗಿಡ ಮನೆಯಲ್ಲಿದ್ದರೆ ಸಂಕಷ್ಟ ಗ್ಯಾರಂಟಿ

ಇಂಥ ಮೂರ್ತಿಗಳನ್ನು ಪೂಜಿಸಿದರೆ ಹೆಚ್ಚುತ್ತೆ ದುಃಖ
ಸಮುದ್ರದ ಉಪ್ಪು ಮತ್ತು ವಾಸ್ತು
 

loader