ಮನಸ್ಸಿಗೆ ನೆಮ್ಮದಿ ನೀಡೋ ಮನೆಯಲ್ಲಿ ದೇವರಿಗಾಗಿಯೇ ವಿಶೇಷ ಕೋಣೆ ಇರುತ್ತದೆ. ಮನೆಯವರೆಲ್ಲರೂ ತಮ್ಮದೇ ರೀತಿಯಲ್ಲಿ ಆ ದೇವನನ್ನು ಪೂಜಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದು ಗ್ಯಾರಂಟಿ. ಆದರೆ, ಈ ಜಾಗದಲ್ಲಿ ಮುಕ್ಕಾದ ಮೂರ್ತಿ ಇಟ್ಟರೆ ಆಪತ್ತು ಕಟ್ಟಿಟ್ಟ ಬುತ್ತಿ. ಕೆಟ್ಟ ಶಕ್ತಿ ಆವರಿಸಿ, ಆಗಬಾರದ್ದು ಆಗಿ ಹೋಗುತ್ತೆ. ಇದರಿಂದ ಏನೆಲ್ಲಾ ಸಮಸ್ಯೆಗಳು ಕಾಡುತ್ತವೆ ನೋಡೋಣ... 

ಧನ ಲಾಭ ತರೋ ಫೆಂಗ್ ಶ್ಯೂ ಗಿಡಗಳಿವು...

- ತುಂಡಾದ ಮೂರ್ತಿ ಪೂಜಿಸಿದರೆ ಪೂಜೆ ಪೂರ್ಣ ಫಲ ಸಿಗುವುದಿಲ್ಲ. ಇದರಿಂದ ಮನಸ್ಸಿಗೆ ಶಾಂತಿ ಸಿಗೋದಿಲ್ಲ. 

- ತುಂಡಾದ ಮೂರ್ತಿ ಪೂಜಿಸುವಾಗ ನಮ್ಮ ದೃಷ್ಟಿ ಮೂರ್ತಿಯ ತುಂಡಾದ ಭಾಗದ ಮೇಲೆಯೇ ಬೀಳುತ್ತದೆ. ಇದರಿಂದ ಮನಸ್ಸು ಅಲ್ಲೋಲಕಲ್ಲೋಲವಾಗಿ ಏಕಾಗ್ರತೆ ತಪ್ಪುತ್ತದೆ. ಏಕಾಗ್ರತೆ ಕಡಿಮೆಯಾದರೆ ಮನಸ್ಸಿನಲ್ಲಿ  ಅಶಾಂತಿ ಮೂಡುತ್ತದೆ. 

- ವಾಸ್ತುವಿನ ಅನುಸಾರ ಮುಕ್ಕಾದ ಮೂರ್ತಿಯನ್ನಿಟ್ಟರೆ ವಾಸ್ತು ದೋಷ ಹೆಚ್ಚುತ್ತದೆ. ಈ ದೋಷಗಳಿಂದ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಆದುದರಿಂದ ತುಂಡಾದ ಮೂರ್ತಿಯನ್ನು ಕೂಡಲೇ ಮನೆಯಿಂದ ಹೊರಹಾಕಿ. 

ದೇವಾಲಯಕ್ಕೆ ಹೋಗಿ, ಹಿಂಗೆಲ್ಲಾ ಮಾಡೋದ್ ಸರೀನಾ?

- ಶಿವಪುರಾಣದ ಅನುಸಾರ ಶಿವಲಿಂಗವನ್ನು ನಿರಾಕಾರ ಎನ್ನುತ್ತಾರೆ. ಶಿವಲಿಂಗ ತುಂಡಾದರೆ ಪೂಜಿಸಬಹುದು. ಶಿವಲಿಂಗ ಅಲ್ಲದೆ ಇತರ ದೇವರ -ದೇವತೆಗಳ ಮೂರ್ತಿ ಮುಕ್ಕಾದರೆ ಪೂಜಿಸಲೇ ಕೂಡದು.