ಮೇಷ: ಬೇಗ ಹಣ ಮಾಡಬೇಕು ಅನ್ನೋ ಹುಚ್ಚು ಬೇಡ. ಸಮಯ ಚೆನ್ನಾಗಿದೆ. ಮೂರನೇ ವ್ಯಕ್ತಿಯ ಮಾತಿಗೆ ಹೆಚ್ಚು ಬೆಲೆ ಕೊಡಬೇಡಿ. 

ವೃಷಭ: ಪ್ರೇಮಿಗಳಿಗೆ ಚಾಲೆಂಜಿಂಗ್. ತಾಳ್ಮೆಯಿಂದಿರಿ. ನಿಮ್ಮ ಸಂಗಾತಿಯಿಂದಲೇ ಪೇಚಿಗೆ ಸಿಲುಕಬಹುದು. ಎಚ್ಚರಿಕೆ ಅಗತ್ಯ. 

ಮಿಥುನ: ಅನಿರೀಕ್ಷಿತ ಮೂಲಗಳಿಂದ ಆದಾಯ ಬರಬಹುದು. ಯಾವುದೇ ಕೆಲಸದಲ್ಲಿ ಎಚ್ಚರಿಕೆ ಅಗತ್ಯ. ದುಡುಕಬೇಡಿ. 

ಕಟಕ: ಮಾತಿನ ಮೇಲೆ ನಿಯಂತ್ರಣವಿರಲಿ. ಆರೋಗ್ಯ ಸುಧಾರಿಸುವುದು. ಖರ್ಚುಗಳು ಹೆಚ್ಚಬಹುದು. 

ಸಿಂಹ: ಕೆಲವು ಜನರ ಒಡನಾಟ ನೆಮ್ಮದಿ ತರಬಹುದು. ಆಧ್ಯಾತ್ಮದತ್ತ ಆಸಕ್ತಿ ಹೆಚ್ಚಬಹುದು. ನಿಮ್ಮವರ ಬಗ್ಗೆ ಅಸಡ್ಡೆ ಬೇಡ. 

ಈ ರಾಶಿಯವರಿಗೆ ಕಷ್ಟ ಮುಗಿದು ಸುಖದ ದಿನಗಳು ಬರಲಿವೆ: ವಾರ ಭವಿಷ್ಯ

ಕನ್ಯಾ: ಕೈಗೆ ಹಣ ಏನೋ ಬರುತ್ತದೆ. ಆದರೆ ಅದು ಜಾರಿ ಹೋಗದಂತೆ ಎಚ್ಚರಿಕೆ ಇರಲಿ. ನಿಮ್ಮ ಸಹನೆ ಪರೀಕ್ಷಿಸುವ ಘಟನೆ ನಡೆಯಬಹುದು. 

ತುಲಾ: ವೈವಾಹಿಕ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭವಾಗಬಹುದು. ಶತ್ರುಗಳಲ್ಲೂ ಮಿತ್ರನ್ನು ಗುರುತಿಸುವಿರಿ. 

ವೃಶ್ಚಿಕ: ಸಂಗಾತಿಯಿಂದ ಬೆಂಬಲ. ಉತ್ತಮ ಕಾರ್ಯಗಳಲ್ಲಿ ತೊಡಗಿಸುವಿಕೆ. ಖುರ್ಚು ಕಡಿಮೆ, ಆದಾಯ ಹೆಚ್ಚಾಗಬಹುದು. 

ದನಸ್ಸು: ನಿಮ್ಮ ವಿಪರೀತ ಉತ್ಸಾಹ ಹಾಗೂ ಚಟುವಟಿಕೆಗಳಿಗೆ ಧನಾತ್ಮಕ ಫಲಿತಾಂಶ. ಅತ್ಯುತ್ತಮ ದಿನಗಳು ಮುಂದಿವೆ, ಚಿಂತಿಸದಿರಿ.

ಮಕರ: ಹಣವನ್ನು ಯೋಚಿಸಿ ಖರ್ಚು ಮಾಡಿ. ಇನ್ ವೆಸ್ಟ್‌ಮೆಂಟ್ ಬಗ್ಗೆ ಚಿಂತಿಸಿ. ಸಂಗಾತಿಯ ಜೊತೆಗೆ ಹರುಷವಿದೆ. 

ಕುಂಭ: ಯಾವ ಕೆಲಸವನ್ನೂ ಮುಂದೂಡುವ ಬುದ್ಧಿ ಬೇಡ. ಸೋಮಾರಿತನಕ್ಕೆ ಕೊಡಲಿಯೇಟು ಗ್ಯಾರೆಂಟಿ. ಚಟುವಟಿಕೆ ಹೆಚ್ಚಲಿ. 

ಮೀನ: ನಿಮ್ಮ ಮೌಲ್ಯಗಳೊಂದಿಗೆ ರಾಜಿಮಾಡಿಕೊಳ್ಳದೇ ನಿರ್ಧಾರಕ್ಕೆ ಬನ್ನಿ. ಸಂಗಾತಿಯ ಪ್ರೀತಿ ಹೆಚ್ಚುವುದು.